SpaceX Starship Test Failure: ಅಮೆರಿಕದ ಪ್ರಸಿದ್ಧ ಉದ್ಯಮಿ ಎಲೋನ್ ಮಸ್ಕ್ ಅವರ ಕಂಪನಿಯಾದ ಸ್ಪೇಸ್‌ಎಕ್ಸ್ ತನ್ನ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್‌ಶಿಪ್ ಅನ್ನು ಪರೀಕ್ಷಿಸಿತು. ಪರೀಕ್ಷೆಯ ಸಮಯದಲ್ಲಿ ಬೂಸ್ಟರ್ ರಾಕೆಟ್ ಪ್ಯಾಡ್‌ಗೆ ಮರಳಿತು. ಆದರೆ ಎಂಜಿನ್ ವೈಫಲ್ಯದಿಂದಾಗಿ ಮೇಲಕ್ಕೆ ಹೋಗುತ್ತಿದ್ದ ಬಾಹ್ಯಾಕಾಶ ನೌಕೆಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು.
ಬೂಸ್ಟರ್ ರಾಕೆಟ್‌ಗಳನ್ನು ಹೆಚ್ಚುವರಿ ಒತ್ತಡವನ್ನು ಒದಗಿಸಲು ಅಂದರೆ ಬಾಹ್ಯಾಕಾಶಕ್ಕೆ ಹೋಗಲು ವೇಗವನ್ನು ಒದಗಿಸಲು ಬಳಸಲಾಗುತ್ತದೆ. ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆ ಮತ್ತು ಸೂಪರ್ ಹೆವಿ ರಾಕೆಟ್‌ಗಳನ್ನು 'ಸ್ಟಾರ್‌ಶಿಪ್' ಎಂದು ಕರೆಯಲಾಗುತ್ತದೆ.
Success is uncertain, but entertainment is guaranteed! ✨
— Elon Musk (@elonmusk) January 16, 2025
pic.twitter.com/nn3PiP8XwG
ಮಾಧ್ಯಮಗಳ ವರದಿಯ ಪ್ರಕಾರ, ಜನವರಿ 17 ರಂದು ಬೆಳಗ್ಗೆ 4 ಗಂಟೆಗೆ ಟೆಕ್ಸಾಸ್‌ನ ಬೊಕಾ ಚಿಕಾದಿಂದ ರಾಕೆಟ್ ಲಾಂಚ್ ಆಯಿತು. ಉಡಾವಣೆಯಾದ ಕೆಲವೇ ನಿಮಿಷಗಳ ಬಳಿಕ ಬಾಹ್ಯಾಕಾಶ ನೌಕೆ ಸ್ಫೋಟಗೊಂಡಿದೆ. ಬಾಹ್ಯಾಕಾಶ ನೌಕೆಯ ಆರು ಎಂಜಿನ್‌ಗಳು ಒಂದೊಂದಾಗಿ ತನ್ನ ಕಾರ್ಯವನ್ನು ನಿಲ್ಲಿಸತೊಡಗಿದ್ದು, ಭೂಮಿಗೆ ಅಪ್ಪಳಿಸಿವೆ. ಈ ಬಗ್ಗೆ ಮಸ್ಕ್ ಕಂಪನಿ ಅಧಿಕೃತವಾಗಿ ಮಾಹಿತಿ ನೀಡಿದೆ.
ಕಂಪನಿಯು ಡೆಮೋಗಾಗಿ ಬಾಹ್ಯಾಕಾಶ ನೌಕೆಯನ್ನು ಅಪ್ಡೇಟ್ ಮಾಡಿತ್ತು. ಪರೀಕ್ಷಾ ಉಪಗ್ರಹಗಳು ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ಇಂಟರ್ನೆಟ್ ಉಪಗ್ರಹಗಳ ಗಾತ್ರದಂತೆಯೇ ಇದ್ದವು. ರಾಕೆಟ್ ಉಡಾವಣೆಗೊಂಡ ಎಂಟೂವರೆ ನಿಮಿಷಗಳಲ್ಲಿ ಸಂಪರ್ಕ ಕಡಿತಗೊಂಡಿತು.
ಈ ಘಟನೆ ಬಗ್ಗೆ ಎಲೋನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. ಮಸ್ಕ್ ಅವರು ಎಕ್ಸ್ ಖಾತೆಯಲ್ಲಿ ಆಕಾಶದಲ್ಲಿ ರಾಕೆಟ್ ಅವಶೇಷಗಳು ಗೋಚರಿಸುವ ವಿಡಿಯೋ ಹಂಚಿಕೊಂಡಿದ್ದು, ಅವರು ತಮ್ಮ ಶೈಲಿಯಲ್ಲಿ ಬರೆದಿದ್ದಾರೆ. ಯಶಸ್ಸು ಅನಿಶ್ಚಿತ, ಮನರಂಜನೆ ಖಚಿತ ಎಂದಿದ್ದಾರೆ.
ಬಾಹ್ಯಾಕಾಶ ನೌಕೆಯ ಎಂಜಿನ್ ಫೈರ್‌ವಾಲ್‌ನಲ್ಲಿ ಆಕ್ಸಿಜನ್/ಇಂಧನ ಸೋರಿಕೆಯಾಗಿದ್ದು, ಅದು ಸ್ಫೋಟಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆ ಸೂಚಿಸಿದೆ. ಇದು ಸ್ಟಾರ್‌ಶಿಪ್‌ನ ಏಳನೇ ಪರೀಕ್ಷಾ ಹಾರಾಟವಾಗಿದ್ದು, ಭವಿಷ್ಯದಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸಲು ನಾಸಾ ಇದನ್ನು ಸಿದ್ಧಪಡಿಸುತ್ತಿದೆ. ಈ ರಾಕೆಟ್ ಮುಂದೊಂದಿನ ಮನುಷ್ಯರನ್ನು ಮಂಗಳ ಗ್ರಹಕ್ಕೆ ಕರೆದೊಯ್ಯುತ್ತದೆ ಎಂಬುದು ಮಸ್ಕ್ ಅವರ ಕನಸಾಗಿದೆ.
Mechazilla has caught the Super Heavy booster! pic.twitter.com/aq91TloYzY
— SpaceX (@SpaceX) January 16, 2025
ಹಿಂದಿನ ಪರೀಕ್ಷಾರ್ಥ ಹಾರಾಟಗಳಂತೆ ಈ ಬಾಹ್ಯಾಕಾಶ ನೌಕೆಯು ಟೆಕ್ಸಾಸ್‌ನಿಂದ ಮೆಕ್ಸಿಕೋ ಕೊಲ್ಲಿಗೆ ಹಾರಬೇಕಿತ್ತು. ಸ್ಪೇಸ್‌ಎಕ್ಸ್ ಇದನ್ನು ಉಡಾವಣೆ ಮಾಡಲು 10 ಡಮ್ಮಿ ಸ್ಯಾಟಲೈಟ್ ಜೊತೆ ಪ್ರ್ಯಾಕ್ಟಿಸ್ ನಡೆಸಿತ್ತು. ರಾಕೆಟ್‌ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಇವುಗಳನ್ನು ಸಿದ್ಧಪಡಿಸಲಾಗಿತ್ತು. ಈ ಹೊಸ ಮತ್ತು ಅಪ್ ಡೇಟ್ಡ್ ರಾಕೆಟ್ 400 ಅಡಿ ಅಂದರೆ 123 ಮೀಟರ್ ಎತ್ತರವಿತ್ತು. ಆದ್ರೆ ಹಾರಾಟ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.
ಬ್ಲೂ ಒರಿಜಿನ್ ನ್ಯೂ ಗ್ಲೆನ್ ರಾಕೆಟ್ ವ್ಯವಸ್ಥೆಯ ಮೊದಲ ಹಾರಾಟಕ್ಕೆ ಅಮೆಜಾನ್ ಮಾಲೀಕ ಜೆಫ್ ಬೆಜೋಸ್ ಬೆಂಬಲ ನೀಡಿದ ಸಮಯದಲ್ಲಿ ಈ ಕಾರ್ಯಾಚರಣೆ ನಡೆಯಿತು. ಶತಕೋಟ್ಯಾಧಿಪತಿಗಳಿಬ್ಬರೂ ಬಾಹ್ಯಾಕಾಶ ನೌಕೆ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಬಯಸಿದ್ದಾರೆ. ಬ್ಲೂ ಆರಿಜಿನ್ ತನ್ನ ಹೊಸ ಸೂಪರ್‌ಸೈಜ್ಡ್ ರಾಕೆಟ್ ಅನ್ನು ಕೆಲವೇ ಗಂಟೆಗಳ ಹಿಂದೆ ಫ್ಲೋರಿಡಾದಲ್ಲಿ ಉಡಾವಣೆ ಮಾಡಿತು. ಅದರ ಹೆಸರು ನ್ಯೂ ಗ್ಲೆನ್. ರಾಕೆಟ್ ತನ್ನ ಮೊದಲ ಹಾರಾಟದಲ್ಲೇ ಕಕ್ಷೆಯನ್ನು ತಲುಪಿತು. ಇಲ್ಲಿ ಅವರು ಭೂಮಿಯಿಂದ ಸಾವಿರಾರು ಮೈಲುಗಳಷ್ಟು ಎತ್ತರದಲ್ಲಿ ಪ್ರಾಯೋಗಿಕ ಉಪಗ್ರಹವನ್ನು ಯಶಸ್ವಿಯಾಗಿ ಇರಿಸಿದರು. ಆದರೆ ಮೊದಲ ಹಂತದ ಬೂಸ್ಟರ್ ಸ್ಫೋಟಗೊಂಡಿತು. ಈ ಕಾರಣದಿಂದಾಗಿ, ಅಟ್ಲಾಂಟಿಕ್‌ನಲ್ಲಿ ಫ್ಲೋಟಿಂಗ್ ಪ್ಲಾಟ್ ಫಾರ್ಮ್ ಮೇಲೆ ಅದರ ಲ್ಯಾಂಡಿಂಗ್ ಸಾಧಿಸಲಾಗಲಿಲ್ಲ.
ಓದಿ: ಇಸ್ರೋದಿಂದ ಮತ್ತೊಂದು ಮೈಲಿಗಲ್ಲು: ಅಂತರಿಕ್ಷದಲ್ಲಿ ಉಪಗ್ರಹಗಳ ಆಲಿಂಗನ ಯಶಸ್ವಿ