Annual Prepaid Recharge Plans: ಸ್ಮಾರ್ಟ್‌ಫೋನ್‌ಗಳ ಹವಾ ಈಗ ಜೋರಾಗಿಯೇ ನಡೆಯುತ್ತಿದೆ. ಈಗಿನ ಯುಗದಲ್ಲಿ ಕೈಯಲ್ಲಿ ಫೋನ್ ಇಲ್ಲದೆ ಒಂದು ದಿನ ಕಳೆಯುವುದೇ ಕಷ್ಟದ ಪರಿಸ್ಥಿತಿ. ಅಧ್ಯಯನದಿಂದ ಹಿಡಿದು ಉದ್ಯೋಗಗಳು, ವ್ಯವಹಾರಗಳು ಸೇರಿದಂತೆ ಎಲ್ಲದಕ್ಕೂ ಸ್ಮಾರ್ಟ್‌ಫೋನ್ ಬಳಕೆ ಅನಿವಾರ್ಯವಾಗಿದೆ. ಏನನ್ನಾದರೂ ಆರ್ಡರ್ ಮಾಡಲು ಅಥವಾ ಬುಕ್ ಮಾಡಲು ಸಹ ನಿಮಗೆ ಮೊಬೈಲ್ ಫೋನ್ಬೇಕು. ದೈನಂದಿನ ಹಣಕಾಸಿನ ವಹಿವಾಟುಗಳು ಸಹ ಫೋನ್‌ಗಳಲ್ಲಿ ಯುಪಿಐ ಮೂಲಕ ನಡೆಯುತ್ತಿವೆ.
ದೈನಂದಿನ ಕೆಲಸಗಳು ಮತ್ತು ಅಗತ್ಯಗಳನ್ನು ಹೊರತುಪಡಿಸಿ, ಹೆಚ್ಚಿನ ಸಂಖ್ಯೆಯ ಜನರು ಮನರಂಜನೆಗಾಗಿ ಮೊಬೈಲ್ ಫೋನ್‌ಗಳನ್ನು ಬಳಸುತ್ತಾರೆ. ಆಟವಾಡಲು, ಚಲನಚಿತ್ರಗಳನ್ನು ವೀಕ್ಷಿಸಲು ಮತ್ತು ಕ್ರಿಕೆಟ್ ವೀಕ್ಷಿಸಲು ಸ್ಮಾರ್ಟ್‌ಫೋನ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇದಲ್ಲದೇ, ಒಟಿಟಿಗಳ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಎಲ್ಲ ಭಾಷೆಗಳ ಚಲನಚಿತ್ರಗಳು ಮತ್ತು ವೆಬ್ ಸೀರಿಸ್ಗಳು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗುತ್ತಿದ್ದಂತೆ, ಎಲ್ಲರೂ ಅವುಗಳಿಗೆ ಒಗ್ಗಿಕೊಂಡಿದ್ದಾರೆ. ಇದರೊಂದಿಗೆ ಪ್ರತಿಯೊಬ್ಬರೂ ಈಗ ತಮ್ಮ ಫೋನ್‌ನಲ್ಲಿ ಕನಿಷ್ಠ ಒಂದು ಒಟಿಟಿ ಅಪ್ಲಿಕೇಶನ್ ಅನ್ನು ಹೊಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಟೆಲಿಕಾಂ ಕಂಪನಿಗಳು ಬಳಕೆದಾರರನ್ನು ಆಕರ್ಷಿಸಲು ಕೆಲವು ವಿಶೇಷ ಕೊಡುಗೆಗಳೊಂದಿಗೆ ರೀಚಾರ್ಜ್ ಪ್ಲಾನ್ಗಳನ್ನು ಪರಿಚಯಿಸುತ್ತಿವೆ. ಅದರಲ್ಲೂ ಒಂದು ವರ್ಷದ ವ್ಯಾಲಿಡಿಟಿಯೊಂದಿಗೆ ಕಡಿಮೆ ಬೆಲೆಯಲ್ಲಿ ವಿಶೇಷ ಯೋಜನೆಗಳನ್ನು ನೀಡುತ್ತಿವೆ. ಪ್ರಿಪೇಯ್ಡ್ ಯೋಜನೆಗಳ ಭಾಗವಾಗಿ ಅನ್ಲಿಮಿಟೆಡ್ ಕಾಲಿಂಗ್, ಡೇಟಾ ಬೆನಿಫಿಟ್ಸ್ ಹಾಗೂ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಗಳನ್ನು ಸಹ ನೀಡುತ್ತಾರೆ. ಈ ಸಂದರ್ಭದಲ್ಲಿ ನಮ್ಮ ದೇಶದ ಟಾಪ್ 4 ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್, ವೋಡಾಫೋನ್ ಐಡಿಯಾ ಮತ್ತು ಬಿಎಸ್ಎನ್ಎಲ್ ನೀಡುವ ಕೆಲವು ಅತ್ಯುತ್ತಮ ವಾರ್ಷಿಕ ವ್ಯಾಲಿಡಿಟಿ ಪ್ಯಾಕೇಜ್‌ಗಳ ವಿವರಗಳು ಇಲ್ಲಿವೆ.
ಜಿಯೋ ರೂ.1899 ಯೋಜನೆ: ಇದು ಜಿಯೋ ನೀಡುವ ಅತ್ಯುತ್ತಮ ರೀಚಾರ್ಜ್ ಯೋಜನೆಗಳಲ್ಲಿ ಒಂದಾಗಿದೆ. ಇದರ ಮಾನ್ಯತೆ ಒಂದು ವರ್ಷ. ಇದರ ಬೆಲೆ ರೂ. 1899. ಈ ಯೋಜನೆ ಮಾನ್ಯತೆ 336 ದಿನಗಳು. ಅಂದರೆ ಸರಿಸುಮಾರು 11 ತಿಂಗಳುಗಳು. ಈ ಯೋಜನೆಯು ಅನ್ಲಿಮಿಟೆಡ್ ಕಾಲಿಂಗ್, ದಿನಕ್ಕೆ 100 ಎಸ್ಎಂಎಸ್ ಮತ್ತು ಒಟ್ಟು 24GB ಇಂಟರ್ನೆಟ್ ಡೇಟಾವನ್ನು ನೀಡುತ್ತದೆ. ಇದರ ಜೊತೆಗೆ ಈ ರೀಚಾರ್ಜ್ ಯೋಜನೆಯೊಂದಿಗೆ ಬಳಕೆದಾರರು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನಂತಹ ಸೇವೆಗಳಿಗೆ ಉಚಿತ ಚಂದಾದಾರಿಕೆ ಸಹ ಪಡೆಯುತ್ತಾರೆ.
ಏರ್‌ಟೆಲ್ ರೂ.1999 ರ ಯೋಜನೆ: ಈ ಏರ್‌ಟೆಲ್ ಯೋಜನೆಯ ಬೆಲೆ 1,999 ರೂ. ಇದು ಏರ್‌ಟೆಲ್‌ನ ವಾರ್ಷಿಕ ರೀಚಾರ್ಜ್ ಯೋಜನೆಯಾಗಿದೆ. ಇದರ ಮಾನ್ಯತೆ 365 ದಿನಗಳು, ಅಂದರೆ 1 ವರ್ಷ. ಈ ಯೋಜನೆಯೊಂದಿಗೆ ಬಳಕೆದಾರರು ಅನ್ಲಿಮಿಟೆಡ್ ಕಾಲಿಂಗ್, ದಿನಕ್ಕೆ 100 SMS ಮತ್ತು ಒಟ್ಟು 24GB ಇಂಟರ್ನೆಟ್ ಡೇಟಾ ಸಹ ಪಡೆಯುತ್ತಾರೆ. ಇದರ ಜೊತೆಗೆ, ಬಳಕೆದಾರರು ಏರ್‌ಟೆಲ್ ಎಕ್ಸ್‌ಸ್ಟ್ರೀಮ್‌ಗೆ ಉಚಿತ ಚಂದಾದಾರಿಕೆ ಸಹ ಪಡೆಯಬಹುದು. ಇದರ ಮೂಲಕ ಬಳಕೆದಾರರು ಅನೇಕ ಲೈವ್ ಚಾನೆಲ್‌ಗಳು ಮತ್ತು ಒಟಿಟಿ ಅಪ್ಲಿಕೇಶನ್‌ಗಳನ್ನು ಆನಂದಿಸಬಹುದು.
ವೋಡಾಫೋನ್ ಐಡಿಯಾ ರೂ.1999 ಯೋಜನೆ: ವೊಡಾಫೋನ್‌ನ ಈ ದೀರ್ಘಾವಧಿಯ ಮಾನ್ಯತೆಯ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯ ಬೆಲೆ 1999 ರೂ. ಆಗಿದೆ. ಈ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆ ಅನ್ಲಿಮಿಟೆಡ್ ಕಾಲಿಂಗ್, ದಿನಕ್ಕೆ 100 SMS ಮತ್ತು ಒಟ್ಟು 24GB ಇಂಟರ್ನೆಟ್ ಡೇಟಾ ನೀಡುತ್ತದೆ. ಇದರ ಜೊತೆಗೆ ಬಳಕೆದಾರರು VI ಚಲನಚಿತ್ರಗಳು, VI ಅಪ್ಲಿಕೇಶನ್‌ಗಳು ಇತ್ಯಾದಿ ಸೌಲಭ್ಯಗಳನ್ನು ಸಹ ಪಡೆಯುತ್ತಾರೆ.
ಬಿಎಸ್ಎನ್ಎಲ್ ರೂ. 1198 ಯೋಜನೆ: ಈ ಬಿಎಸ್ಎನ್ಎಲ್ ಯೋಜನೆಯು ದೀರ್ಘಾವಧಿಯ ಮಾನ್ಯತೆಯ ಯೋಜನೆಗಳಲ್ಲಿ ಅತ್ಯಂತ ಅಗ್ಗವಾಗಿದೆ. ಈ ಯೋಜನೆಯು 365 ದಿನಗಳವರೆಗೆ ಮಾನ್ಯವಾಗಿರುತ್ತದೆ. ಅದು ಸಹ ಕೇವಲ ರೂ. 1,198 ರೂ.ಗಳಿಗೆ ಲಭ್ಯವಿದೆ. ಈ ಯೋಜನೆಯೊಂದಿಗೆ ಬಳಕೆದಾರರು ದೇಶಾದ್ಯಂತ 300 ನಿಮಿಷಗಳ ಉಚಿತ ಕರೆಗಳನ್ನು ಮಾಡಬಹುದು. ಇದರೊಂದಿಗೆ, ಬಳಕೆದಾರರು ಪ್ರತಿ ತಿಂಗಳು 30 ಉಚಿತ SMS ಪಡೆಯುತ್ತಾರೆ. ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ 3GB ಡೇಟಾ ಉಚಿತವಾಗಿ ಲಭ್ಯವಿದೆ.
ಓದಿ: ಮಹಾಕುಂಭ ಮೇಳಕ್ಕೆ ಗೂಗಲ್ ಗುಲಾಬಿ ದಳಗಳ ಸುರಿಮಳೆ: ಜಸ್ಟ್ ಕ್ಲಿಕ್ ಮಾಡಿ ನೋಡಿ!