ಕರ್ನಾಟಕ

karnataka

YUVA: ಹೆಲ್ಮೆಟ್ ಧರಿಸಿದಾಗ ಕೂದಲು ಉದುರುತ್ತದೆ ಎಂಬ ಚಿಂತೆಯೇ?, ಹಾಗಾದ್ರೆ ಈ ಶೋಲ್ಡರ್​ ಹೆಲ್ಮೆಟ್​ ಟ್ರೈ ಮಾಡಿ! - SHOULDER HELMET DESIGNED

By ETV Bharat Tech Team

Published : Aug 28, 2024, 10:17 PM IST

Updated : Aug 29, 2024, 4:19 PM IST

Shoulder Helmet Design: ಕಾಲಕ್ಕೆ ತಕ್ಕಂತೆ ಎಲ್ಲರೂ ಬದಲಾಗುತ್ತಿರುತ್ತಾರೆ. ಈ ಕ್ರಮದಲ್ಲಿ ದ್ವಿಚಕ್ರ ವಾಹನಗಳ ಖರೀದಿ ಅನಿವಾರ್ಯವಾಗಿದೆ. ಪ್ರತಿ ಕೆಲಸಕ್ಕೂ ಬೈಕ್ ಬಳಸುತ್ತಾರೆ. ಆದರೆ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕಾರಣ ಹೆಲ್ಮೆಟ್ ಹಾಕಿಕೊಂಡರೆ ಕೂದಲು ಉದುರುತ್ತದೆ ಎಂಬ ಅನುಮಾನ ಎಲ್ಲರಿಗೂ ಇದೆ. ಆ ಯೋಚನೆಯಲ್ಲೇ ಯುವಕನೊಬ್ಬ ಭುಜದ ಹೆಲ್ಮೆಟ್ ವಿನ್ಯಾಸ ಮಾಡಿದ್ದಾರೆ. ಈಗ ಆ ಹೆಲ್ಮೆಟ್‌ನ ವಿಶೇಷತೆ ಏನು ಎಂದು ನೋಡೋಣ ಬನ್ನಿ..

SHOULDER HELMET DESIGNED YUVA  SHOULDER HELMET PHANI SUCESS STORY  SHOULDER HELMET DESIGNED BY PHANI
ಭುಜದ ಹೆಲ್ಮೆಟ್ ವಿನ್ಯಾಸ (ETV Bharat)

ಭುಜದ ಹೆಲ್ಮೆಟ್ ವಿನ್ಯಾಸ (ETV Bharat)

Shoulder Helmet Design:ಬೈಕ್​ ಸವಾರರಿಗೆ ಪ್ರಾಣ ರಕ್ಷಕ ಕವಚದಂತೆ ಹೆಲ್ಮೆಟ್​ ಕೆಲಸ ಮಾಡುತ್ತೆ. ಇದಕ್ಕಾಗಿ ಟ್ರಾಫಿಕ್​ ಪೊಲೀಸರು ಬೈಕ್​ ಸವಾರರಿಗೆ ಹಲವು ಜಾಗೃತಿ ಕಾರ್ಯಕ್ರಮಗಳ ಮೂಲಕ ಕಡ್ಡಾಯವಾಗಿ ಹೆಲ್ಮೆಟ್​ ಧರಿಸುವಂತೆ ಮನವಿ ಮಾಡುತ್ತಲೇ ಇರುತ್ತಾರೆ. ಆದರೂ ಸಹ ಕೆಲವರು ಈ ಮನವಿಯನ್ನು ಕಡೆಗಣಿಸುವ ಮೂಲಕ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಾರೆ.

ನಗರೀಕರಣದ ಭಾಗವಾಗಿ ವಾಹನಗಳ ಬಳಕೆ ವಿಪರೀತವಾಗಿ ಹೆಚ್ಚಿದೆ. ದ್ವಿಚಕ್ರ ವಾಹನಗಳು ಹೆಚ್ಚಾಗಿ ರಸ್ತೆಗಳಲ್ಲಿ ಕಂಡುಬರುತ್ತವೆ. ಆದರೆ ಅವುಗಳನ್ನು ಓಡಿಸುವವರು ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿಲ್ಲ. ಕೂದಲು ಉದುರುವ ಭಯದಿಂದ ಹೆಲ್ಮೆಟ್ ಧರಿಸುತ್ತಿಲ್ಲ. ಅಂತಹ ವಿಷಯಗಳನ್ನು ಪರಿಶೀಲಿಸಿ ಯುವಕನೊಬ್ಬ ಭುಜದ ಬೆಂಬಲ ಹೆಲ್ಮೆಟ್ ಅನ್ನು ತಯಾರಿಸಿದ್ದಾರೆ.

ಈ ಯುವಕನ ಹೆಸರು ಫಣಿಕುಮಾರ್. ಗುಂಟೂರು ಜಿಲ್ಲೆಯ ವೇಲ್ಪುರ ನಿವಾಸಿ. ಭೀಮಾವರಂನಲ್ಲಿ ಎಂ.ಎಸ್ಸಿ ಮುಗಿಸಿದ್ದಾರೆ. ಕೆಲಸದ ನಿಮಿತ್ತ ಹೈದರಾಬಾದ್‌ನಲ್ಲಿ ತಂಗಿದ್ದಾರೆ. 2 ವರ್ಷಗಳ ಕಾಲ ನ್ಯಾಟ್ಕೋ ಫಾರ್ಮಾ ಕಂಪನಿಯಲ್ಲಿ ಇಹೆಚ್‌ಎಸ್ ಆಗಿ ಕೆಲಸ ಮಾಡಿದ್ದಾರೆ. ಅದರ ನಂತರ ಅವರು ಜೆಎನ್‌ಟಿಯು ಕಾಲೇಜಿನಲ್ಲಿ ಪರಿಸರ ವಿಜ್ಞಾನದಲ್ಲಿ ಪಿಹೆಚ್‌ಡಿ ಪೂರ್ಣಗೊಳಿಸಿದ್ದಾರೆ.

ಈ ಹೆಲ್ಮೆಟ್​ನಿಂದ ಕೂದಲು ಉದುರುವುದಿಲ್ಲ: ನಗರಗಳಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸುವುದಿಲ್ಲ ಎಂಬುದು ಫಣಿಕುಮಾರ್ ಗಮನಕ್ಕೆ ಬಂದಿದೆ. ಕೂದಲು ಉದುರುವ ಭಯ ಸೇರಿದಂತೆ ಇನ್ನಿತರ ಕಾರಣ ಎಂಬುದು ಅವರ ಅಭಿಪ್ರಾಯವಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಫಣಿಕುಮಾರ್​ ಕೆಲ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಹೀಗಾಗಿ ಬೈಕ್ ಪ್ರಯಾಣಕ್ಕೆ ನೆರವಾಗಲು ಫಣಿಕುಮಾರ್ 6 ತಿಂಗಳ ಪರಿಶ್ರಮದ ನಂತರ ಭುಜಕ್ಕೆ ಬೆಂಬಲ ನೀಡುವ ಹೆಲ್ಮೆಟ್ ತಯಾರಿಸಿದರು.

ಮಾರುಕಟ್ಟೆಯಲ್ಲಿರುವ ಹೆಲ್ಮೆಟ್​ಗೆ ಮತ್ತು ನಾವು ತಯಾರಿಸಿರುವ ಹೆಲ್ಮೆಟ್​ಗೆ ಬಹಳ ವ್ಯತ್ಯಾಸವೇನಿಲ್ಲ. ನಾವು ಈ ಹೆಲ್ಮೆಟ್​ಗೆ ಎರಡು ಕಾಲು​ಗಳನ್ನು ನೀಡಿದ್ದೇವೆ ಅಷ್ಟೇ. ಹೆಲ್ಮೆಟ್​ ಧರಿಸಿದ್ದ ಸವಾರರು ಬೈಕ್​ ಸಿಗ್ನಲ್​ ಅಥವಾ ಇನ್ನಿತರ ಸಂದರ್ಭಗಳಲ್ಲಿ ವಾಹನ ನಿಲ್ಲಿಸಿದಾಗ ಜಸ್ಟ್​ ಶೋಲ್ಡರ್​ ಮೇಲೆತ್ತುವ ಮೂಲಕ ತಾತ್ಕಾಲಿಕ ರಿಲ್ಯಾಕ್ಸ್​ ಪಡೆಯುತ್ತಾರೆ ಎಂದು ಫಣಿಕುಮಾರ್​ ಹೇಳಿದರು.

ಕಂಪನಿಗಳು ತಯಾರಿಸಿರುವ ಹೆಲ್ಮೆಟ್​ಗಳು ತಲೆಯ ಮೇಲೆ ಅಂಟಿಕೊಳ್ಳುತ್ತವೆ. ಹೀಗಾಗಿ ಒಳಗೆ ಗಾಳಿ ಆಡದೇ ಕೂದಲು ಉದುರುವಿಕೆಯಿಂದ ಹಿಡಿದು ಇನ್ನಿತರ ಸಮಸ್ಯೆಗಳು ಎದುರಾಗುತ್ತವೆ. ಈ ಹಿನ್ನೆಲೆ ನಾವು ಶೋಲ್ಡರ್​ ಹೆಲ್ಮೆಟ್ ವಿನ್ಯಾಸಗೊಳಿಸಿದ್ದೇವೆ. ಇದನ್ನು​ ಧರಿಸಿ, ಭುಜ ಮೇಲೆತ್ತಿದ್ದಾಗ ಹೆಲ್ಮೆಟ್​ ಒಳಗಡೆ ಸುಮಾರು ಒಂದು ಇಂಚು ಅಂತರ​ ಸಿಗುತ್ತದೆ. ಆಗ ಸವಾರರು ತಾತ್ಕಾಲಿಕ ರಿಲೀಫ್​ ಪಡೆಯುತ್ತಾರೆ. ಶೋಲ್ಡರ್​ ಹೆಲ್ಮೆಟ್​ಗೂ ಮುನ್ನ ನಾವು ಚಕ್ರದಂತ ಸಪೋರ್ಟ್​ ನೀಡಿದ್ದೆವು. ಆದ್ರೆ ಅದು ಸರಿಹೊಂದದ ಕಾರಣ ಶೋಲ್ಡರ್​ ಹೆಲ್ಮೆಟ್​ ರೂಪಗೊಳಿಸಿದ್ದೇವೆ ಎಂದು ಯುವ ಉದ್ಯಮಿ ಫಣಿಕುಮಾರ್​ ಹೇಳುತ್ತಾರೆ.

ಈ ಹೆಲ್ಮೆಟ್ TSIC ಹೈದರಾಬಾದ್‌ನಿಂದ ಅತ್ಯುತ್ತಮ ಆವಿಷ್ಕಾರವಾಗಿ ಆಯ್ಕೆಯಾಗಿದೆ ಎಂದು ಫಣಿ ಹೇಳುತ್ತಾರೆ. ಸದ್ಯ ಟೀಂ ವರ್ಕ್ ಸಹಯೋಗದಲ್ಲಿ ಅಂತಿಮ ಸ್ಪರ್ಶ ನೀಡುತ್ತಿದ್ದೇನೆ. ಫಾರ್ಮಾ ಕಂಪನಿಯ ಕೆಲಸಕ್ಕೆ ರಾಜೀನಾಮೆ ನೀಡಿ ಜುವ್ವಾ ಇಂಡಸ್ಟ್ರೀಸ್ ಎಂಬ ಸ್ಟಾರ್ಟ್ ಅಪ್ ಆರಂಭಿಸಿದ್ದೇನೆ ಎನ್ನುತ್ತಾರೆ ನವೋದ್ಯಮಿ ಫಣಿಕುಮಾರ್​.

ಮೂರು ತಿಂಗಳಲ್ಲಿ ಹೆಲ್ಮೆಟ್​ ಲಭ್ಯ; ಇನ್ನು ಮೂರು ತಿಂಗಳಲ್ಲಿ ಈ ಹೆಲ್ಮೆಟ್ ಲಭ್ಯವಾಗಲಿದೆ. ನಗರಗಳಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುವವರಿಗೆ ಈ ಹೆಲ್ಮೆಟ್ ತುಂಬಾ ಉಪಯುಕ್ತವಾಗಿದೆ. ಪೇಟೆಂಟ್ ಹಕ್ಕು ಪಡೆದ ನಂತರ ಕಡಿಮೆ ಬೆಲೆಗೆ ಈ ಹೆಲ್ಮೆಟ್ ನೀಡಲಾಗುವುದು. ಸದ್ಯಕ್ಕೆ ತಮ್ಮ ಸ್ನೇಹಿತರಿಂದಲೇ ಟ್ರಯಲ್ ರನ್ ನಡೆಯುತ್ತಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ತರುತ್ತೇವೆ ಎನ್ನುತ್ತಾರೆ ಫಣಿಕುಮಾರ್​.

ಓದಿ:ಆಟೋಮೊಬೈಲ್​ ಜೊತೆಗಿನ ಸಭೆ ಯಶಸ್ವಿ- ವಾಹನ ಖರೀದಿದಾರರಿಗೆ ಕೇಂದ್ರದಿಂದ ಶುಭ ಸುದ್ದಿ - DISCOUNT ON VEHICLES

Last Updated : Aug 29, 2024, 4:19 PM IST

ABOUT THE AUTHOR

...view details