ಲಂಡನ್: ಪೋಷಕರ ಪ್ರೀತಿಗೆ ಸರಿಸಾಟಿ ಕಟ್ಟಲು ಈ ಪ್ರಪಂಚದಲ್ಲಿ ಸಾಧ್ಯವೇ ಇಲ್ಲ. ಪ್ರೀತಿಯ ಪದವನ್ನು ಅನೇಕ ಸಂದರ್ಭಗಳಲ್ಲಿ ಸನ್ನಿವೇಶಕ್ಕೆ ತಕ್ಕಂತೆ ನಾವು ಬಳಸುತ್ತವೆ. ಆದ್ರೆ ಈ ಪ್ರೀತಿ ಪದ ಬಳಕೆ ಆದಾಗ ನಮ್ಮ ಮೆದುಳು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಪ್ರೀತಿ ಮತ್ತು ಮೆದಳು ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಪ್ರೀತಿಯ ಕುರಿತಾದ ಸಂಶೋಧನೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ವಿಜ್ಞಾನಿಗಳ ತಂಡವು ವಿಭಿನ್ನ ರೀತಿಯ ಪ್ರೀತಿ ಚಟುವಟಿಕೆಗಳು ಮೆದುಳಿನ ವಿವಿಧ ಭಾಗಗಳಲ್ಲಿ ಸನ್ನಿವೇಶ ತಕ್ಕಂತೆ ಬದಲಾಗುತ್ತದೆ ಅಥವಾ ಸಂಕೇತ ನೀಡುತ್ತದೆ ಎಂದು ಬಹಿರಂಗಪಡಿಸಿದೆ.
ಮಾನವರು ಪ್ರೀತಿ ಎಂಬ ಪದವನ್ನು ಪೋಷಕರ ಪ್ರೀತಿಯಿಂದ ಪ್ರಕೃತಿಯ ಪ್ರೀತಿಯವರೆಗೆ ಹಲವಾರು ಸಂದರ್ಭಗಳಲ್ಲಿ ಬಳಸುತ್ತಾರೆ. ಈಗ, ಮೆದುಳಿನ ಹೆಚ್ಚು ಸಮಗ್ರ ಚಿತ್ರಣವು ಮಾನವ ಅನುಭವಗಳಂತಹ ವೈವಿಧ್ಯಮಯ ಸಂಗ್ರಹಕ್ಕಾಗಿ ನಾವು ಪ್ರೀತಿ ಪದವನ್ನು ಏಕೆ ಬಳಸುತ್ತೇವೆ ಎಂಬುದರ ಮೇಲೆ ಬೆಳಕು ಚೆಲ್ಲಬಹುದು.
ಫಿನ್‌ಲ್ಯಾಂಡ್‌ನ ಆಲ್ಟೊ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನದ ವೇಳೆ ಮೆದುಳನ್ನು ಸಂಶೋದಿಸಲು ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಫ್‌ಎಂಆರ್‌ಐ) ಎಂಬ ತಂತ್ರಜ್ಞಾನವನ್ನು ಬಳಸಿದ್ದಾರೆ. ಅಧ್ಯಯನದ ವೇಲೆ ಆರು ವಿಭಿನ್ನ ರೀತಿಯ ಪ್ರೀತಿಗೆ ಸಂಬಂಧಿಸಿದ ಸಂಕ್ಷಿಪ್ತ ವರದಿಗಳನ್ನು ಒಳಗೊಂಡಿವೆ.
ಅಧ್ಯಯನವನ್ನು ಸಂಯೋಜಿಸಿದ ತತ್ವಜ್ಞಾನಿ ಮತ್ತು ಸಂಶೋಧಕ ಪಾರ್ಟಿಲಿ ರಿನ್ನೆ ಸಾಮಾಜಿಕ ಸಂದರ್ಭಗಳಲ್ಲಿ ಪ್ರೀತಿ ಕ್ರಿಯಾಶೀಲತೆ ಬಗ್ಗೆ ಸಂಶೋಧಿಸಿದ್ದಾರೆ. ಸಾಮಾಜಿಕ ಸಂದರ್ಭಗಳಲ್ಲಿ ಪ್ರೀತಿಯ ಕ್ರಿಯಾಶೀಲತೆಯ ಮಾದರಿಯು ಗ್ಯಾಂಗ್ಲಿಯಾ ಕೆಳಭಾಗ, ಹಣೆಯ ಮಧ್ಯದ ಗೆರೆ, ಪ್ರಿಕ್ಯೂನಿಯಸ್ ಮತ್ತು ತಲೆಯ ಹಿಂಭಾಗದ ಬದಿಗಳಲ್ಲಿರುವ ಟೆಂಪೊರೊಪರಿಯೆಟಲ್ ಜಂಕ್ಷನ್‌ನಲ್ಲಿ ಉತ್ಪತ್ತಿಯಾಗುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ.
ಇನ್ನು ಪೋಷಕರ ಪ್ರೀತಿ ಪಾತ್ರದಲ್ಲಿ ಮೆದುಳು ಯಾವರೀತಿ ಕೆಲಸ ಮಾಡುತ್ತದೆ ಎಂಬುದು ಸಹ ಸಂಶೋಧಕರು ಕಂಡುಕೊಂಡಿದ್ದಾರೆ. ಪೋಷಕರ ಪ್ರೀತಿಯನ್ನು ಕಲ್ಪಿಸಿಕೊಳ್ಳುವಾಗ ಸ್ಟ್ರೈಟಮ್ ಎಂಬ ಭಾಗದಲ್ಲಿ ಮೆದುಳಿನ ಪ್ರತಿಫಲ ವ್ಯವಸ್ಥೆಯಲ್ಲಿ ಆಳವಾದ ಕ್ರಿಯಾಶೀಲತೆ ಕಂಡು ಬಂದಿದೆ. ಆದ್ರೆ ಇದು ಬೇರೆ ಯಾವುದೇ ರೀತಿಯ ಪ್ರೀತಿ ವಿಷಯದ ಸಂದರ್ಭದಲ್ಲಿ ಕಂಡುಬಂದಿಲ್ಲ ಎಂದು ರಿನ್ನೆ ಗಮನಿಸಿದ್ದಾರೆ.
ರೊಮ್ಯಾಂಟಿಕ್ ಪಾಟ್ನರ್ಸ್, ಸ್ನೇಹಿತರು, ಅಪರಿಚಿತರು, ಸಾಕುಪ್ರಾಣಿಗಳು ಮತ್ತು ಪ್ರಕೃತಿಯ ಮೇಲಿನ ಪ್ರೀತಿ ಕೂಡ ಈ ಅಧ್ಯಯನದ ಭಾಗವಾಗಿದೆ. ಇದನ್ನು ಸೆರೆಬ್ರಲ್ ಕಾರ್ಟೆಕ್ಸ್ ಜರ್ನಲ್, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನಲ್ಲಿ ಪ್ರಕಟಿಸಲಾಗಿದೆ. ಮೆದುಳಿನ ಚಟುವಟಿಕೆಯು ಪ್ರೀತಿಯ ವಸ್ತುವಿನ ನಿಕಟತೆಯಿಂದ ಮಾತ್ರವಲ್ಲ, ಅದು ಮನುಷ್ಯ, ಇನ್ನೊಂದು ಜಾತಿ ಅಥವಾ ಪ್ರಕೃತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.
ಆಶ್ಚರ್ಯಕರವಾಗಿ, ಅಪರಿಚಿತರಿಗೆ ಸಹಾನುಭೂತಿಯ ಪ್ರೀತಿಯು ಕಡಿಮೆ ಲಾಭದಾಯಕವಾಗಿದೆ ಮತ್ತು ನಿಕಟ ಸಂಬಂಧಗಳಲ್ಲಿನ ಪ್ರೀತಿಗಿಂತ ಕಡಿಮೆ ಮೆದುಳಿನ ಕ್ರಿಯಾಶೀಲತೆಯನ್ನು ಉಂಟುಮಾಡುತ್ತದೆ. ಪ್ರಕೃತಿಯ ಪ್ರೀತಿಯು ಪ್ರತಿಫಲ ವ್ಯವಸ್ಥೆ ಮತ್ತು ಮೆದುಳಿನ ದೃಶ್ಯ ಪ್ರದೇಶಗಳನ್ನು ಸಕ್ರಿಯಗೊಳಿಸುತ್ತದೆ. ಆದರೆ ಸಾಮಾಜಿಕ ಮೆದುಳಿನ ಪ್ರದೇಶಗಳನ್ನು ಅಲ್ಲ ಎಂದು ಅಧ್ಯಯನದ ಮೂಲಕ ತಿಳಿದುಬಂದಿದೆ.
ಸಂಶೋಧಕರಿಗೆ ಒಂದು ಪ್ರಮುಖ ಆಶ್ಚರ್ಯವೆಂದರೆ ಜನರ ನಡುವಿನ ಪ್ರೀತಿಯೊಂದಿಗೆ ಸಂಬಂಧಿಸಿದ ಮೆದುಳಿನ ಪ್ರದೇಶಗಳು ಬಹಳ ಹೋಲುತ್ತವೆ. ಸಾಕುಪ್ರಾಣಿಗಳು ಅಥವಾ ಪ್ರಕೃತಿಯ ಮೇಲಿನ ಪ್ರೀತಿಗೆ ವ್ಯತಿರಿಕ್ತವಾಗಿ ಸಾಮಾಜಿಕ ಅರಿವಿನೊಂದಿಗೆ ಸಂಬಂಧಿಸಿದ ಮೆದುಳಿನ ಎಲ್ಲಾ ರೀತಿಯ ಪರಸ್ಪರ ಪ್ರೀತಿ ಸಕ್ರಿಯವಾಗಿದೆ ಎಂದು ಅಧ್ಯಯನವು ಗಮನಿಸಿದೆ.
ಓದಿ:ವಿಶ್ವದ 2ನೇ ಅತಿ ದೊಡ್ಡ ವಜ್ರ ಪತ್ತೆ: ಇದರ ಬೆಲೆ ಎಷ್ಟಿರಬಹುದು ಗೊತ್ತಾ? - Second Biggest Diamond Found