ಕರ್ನಾಟಕ

karnataka

ETV Bharat / technology

ಸ್ಟನ್ನಿಂಗ್​ ಪೀಚರ್​ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಸ್ಯಾಮ್​ಸಂಗ್​ ಹೊಸ ಫೋನ್​; ಬೆಲೆ ಕೇವಲ ರೂ.9,999 ಲಭ್ಯ! - SAMSUNG GALAXY A06 LAUNCHED - SAMSUNG GALAXY A06 LAUNCHED

Samsung Galaxy A06 Launched: ಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ನೀವು ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವಿರಾ?. ಹಾಗಾದ್ರೆ Samsung ತನ್ನ Galaxy A06 ಫೋನ್ ಅನ್ನು ಆಕರ್ಷಕ ವಿನ್ಯಾಸದೊಂದಿಗೆ ಬಿಡುಗಡೆ ಮಾಡಿದೆ. ಇದು ಕೇವಲ 10 ಸಾವಿರ ರೂಪಾಯಿಗಳ ಆರಂಭಿಕ ಬೆಲೆಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣಾ ಬನ್ನಿ..

LATEST SAMSUNG LAUNCHES  SAMSUNG GALAXY A06 PRICE  SAMSUNG GALAXY A06 FEATURES  SAMSUNG GALAXY A06
SAMSUNG (SAMSUNG)

By ETV Bharat Karnataka Team

Published : Sep 4, 2024, 2:46 PM IST

Samsung Galaxy A06 Launched:ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಇಂದಿನ ದಿನಗಳಲ್ಲಿ ಕಿರಿಯರು, ಹಿರಿಯರು ಎಂಬ ಭೇದವಿಲ್ಲದೇ ಎಲ್ಲರ ಬಳಿಯೂ ತರಹೇವಾರಿ ಸ್ಮಾರ್ಟ್ ಫೋನ್​ಗಳು ಇವೆ. ಈ ಹಿನ್ನೆಲೆ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಭರಾಟೆ ಜೊತೆ ಕಂಪನಿಗಳ ಮಧ್ಯೆ ಪೈಪೋಟಿಯೂ ಕಂಡುಬರುತ್ತದೆ. ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮ ಬೇಡಿಕೆ ಇರುವುದರಿಂದ ಎಲ್ಲಾ ಕಂಪನಿಗಳು ಕಾಲಕಾಲಕ್ಕೆ ಇತ್ತೀಚಿನ ಆವೃತ್ತಿಗಳಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಉತ್ಸುಕವಾಗಿವೆ. ಗ್ರಾಹಕರ ಅಭಿರುಚಿ ಮತ್ತು ಆಸಕ್ತಿಗೆ ಅನುಗುಣವಾಗಿ ಆಕರ್ಷಕ ಫೀಚರ್​ಗಳೊಂದಿಗೆ ವಿನ್ಯಾಸ ಮಾಡಿ ಮಾರುಕಟ್ಟೆಗೆ ರಿಲೀಸ್​ ಮಾಡಲಾಗುತ್ತದೆ.

ಈ ಕ್ರಮದಲ್ಲಿ ಮುಂಚೂಣಿಯಲ್ಲಿರುವ ಎಲೆಕ್ಟ್ರಾನಿಕ್ ಉತ್ಪನ್ನಗಳ ಕಂಪನಿ ಸ್ಯಾಮ್​ಸಂಗ್ ತನ್ನ ಗ್ರಾಹಕರಿಗೆ ಸಂತಸದ ಸುದ್ದಿ ತಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಹೆಸರಿನ ಹೊಸ ಮೊಬೈಲ್ ಅನ್ನು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಕೇವಲ 10 ಸಾವಿರ ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್​ಫೋನ್ ಎರಡು ಸ್ಟೋರೇಜ್​ಗಳು ಮತ್ತು 3 ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಫೋನ್ Android 14 ಆಧಾರಿತ One UI6 ನೊಂದಿಗೆ ಕಾರ್ಯನಿರ್ವಹಿಸುತ್ತದೆ. Galaxy A06 ಮೈಕ್ರೊ SD ಕಾರ್ಡ್‌ನ ಸಹಾಯದಿಂದ 1TB ವರೆಗೆ ತನ್ನ ಸಂಗ್ರಹಣೆಯನ್ನು ವಿಸ್ತರಿಸುವ ಸೌಲಭ್ಯವನ್ನು ಹೊಂದಿದೆ. ಇದರ ಬೆಲೆ, ವೈಶಿಷ್ಟ್ಯಗಳು, ಬ್ಯಾಟರಿ ಬ್ಯಾಕಪ್ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿದುಕೊಳ್ಳೋಣ..

Samsung Galaxy A06 Features:

  • ಡಿಸ್ಪ್ಲೇ: 6.7 ಇಂಚಿನ HD+ PLS LED ಸ್ಕ್ರೀನ್
  • ಪ್ರೊಸೆಸರ್: ಆಕ್ಟಾಕೋರ್ ಮೀಡಿಯಾ ಟೆಕ್ ಹೆಲಿಯೊ ಜಿ85
  • ರಿಯರ್​ ಕ್ಯಾಮೆರಾ: 50MP
  • ಫ್ರಂಟ್​ ಕ್ಯಾಮೆರಾ: 8MP
  • ಡೆಪ್ತ್​ ಸೆನ್ಸಾರ್​: 2MP
  • ಬ್ಯಾಟರಿ: 5,000 mAh
  • 25W ವೈರ್ಡ್ ಫಾಸ್ಟ್ ಚಾರ್ಜಿಂಗ್
  • 4G
  • ವೈಫೈ
  • ಬ್ಲೂಟೂತ್ 5.3, 3.5 ಎಂಎಂ ಆಡಿಯೋ ಜಾಕ್
  • USB ಟೈಪ್-ಸಿ ಪೋರ್ಟ್

ಈ ಹೊಸ Samsung Galaxy A06 ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್​ಗಳಲ್ಲಿ ಲಭ್ಯ

  • Samsung Galaxy A06: 4GB+64GB ಇಂಟರ್ನೆಲ್​ ಸ್ಟೋರೇಜ್​
  • Samsung Galaxy A06: 4GB+128GB ಇಂಟರ್ನೆಲ್​ ಸ್ಟೋರೇಜ್

ಈ Samsung Galaxy A06 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 3 ಬಣ್ಣಗಳಲ್ಲಿ ಲಭ್ಯವಿದೆ.

  • ಬ್ಲ್ಯಾಕ್​
  • ಗೋಲ್ಡ್​
  • ಲೈಟ್​ ಬ್ಲೂ

Samsung Galaxy A06 Price:

  • 4GB+64GB ಇಂಟರ್ನೆಲ್​ ಸ್ಟೋರೇಜ್ ಬೆಲೆ: ರೂ.9,999
  • 4GB+128GB ಇಂಟರ್ನೆಲ್​ ಸ್ಟೋರೇಜ್ ಬೆಲೆ: ರೂ.11,499

ಓದಿ:25 ಸಾವಿರದೊಳಗೆ ಲಭ್ಯ ಇವೆ ಬೆಸ್ಟ್​ ಗೇಮಿಂಗ್​ ಫೋನ್​! ಈ ಸ್ಮಾರ್ಟ್​ಫೋನ್​ಗಳಲ್ಲಿವೆ ಹಲವು ವೈಶಿಷ್ಟ್ಯಗಳು! - Best Gaming Smartphone

ABOUT THE AUTHOR

...view details