ETV Bharat / state

ಆಸ್ಪತ್ರೆಯಲ್ಲೂ ಮಕ್ಕಳಿಗೆ ಆಟದ ಜೊತೆ ಪಾಠ; ಚಿಲ್ಡ್ರನ್ಸ್ ಫ್ರೆಂಡ್ಲಿ ವಾರ್ಡ್ ತೆರೆದ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ - CHITAGUPPI HOSPITAL

ಮಕ್ಕಳಿಗಾಗಿ ಚಿಲ್ಡ್ರನ್ಸ್ ಫ್ರೆಂಡ್ಲಿ ಎಂಬ ವಾರ್ಡ್ ನಿರ್ಮಾಣ ಮಾಡುವ ಮೂಲಕ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯು ಗಮನ ಸೆಳೆಯುತ್ತಿದೆ. ಇದರಿಂದಾಗುವ ಅನುಕೂಲಗಳೇನು? ಈ ಬಗ್ಗೆ ನಮ್ಮ ಪ್ರತಿನಿಧಿ ಹೆಚ್​ ಬಿ ಗಡ್ಡದ್ ಅವರಿಂದ ವಿಶೇಷ ವರದಿ.

CHITAGUPPI HOSPITAL SPECIALITY
ಚಿಲ್ಡ್ರನ್ಸ್ ಫ್ರೆಂಡ್ಲಿ ವಾರ್ಡ್ ತೆರೆದ ಚಿಟಗುಪ್ಪಿ ಆಸ್ಪತ್ರೆ (ETV Bharat)
author img

By ETV Bharat Karnataka Team

Published : 11 hours ago

ಹುಬ್ಬಳ್ಳಿ: ಎಲ್ಲ ಆಸ್ಪತ್ರೆಗಳಿಗಿಂತ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ವಿಭಿನ್ನ. ಕಾರಣ ಅಲ್ಲಿನ ರೋಗಿಗಳ ಆರೈಕೆಯ ವಿಧಾನ. ಭಯದಿಂದಲೇ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಮಕ್ಕಳು ನಗುನಗುತ್ತಾ ಆಸ್ಪತ್ರೆಯಲ್ಲಿ ಕಾಲ ಕಳೆದು ಬಹುಬೇಗನೇ ಗುಣಮುಖರಾಗುವ ವಾತಾವರಣ ಇದ್ದುದರಿಂದ ಇದು ಎಲ್ಲ ಆಸ್ಪತ್ರೆಗಳಿಗಿಂತ ವಿಭಿನ್ನ ಎಂದು ಹೇಳಬಹುದು. ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದರ ಜೊತೆಗೆ ಇದೀಗ ಚಿಕ್ಕ ಮಕ್ಕಳಿಗಾಗಿ ಶೈಕ್ಷಣಿಕವಾಗಿ ಜಾಗೃತಿ ಮೂಡಿಸುವಲ್ಲಿ ಗಮನ ಹರಿಸಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸುಪರ್ದಿಯಲ್ಲಿರುವ ಚಿಟಗುಪ್ಪಿ ಆಸ್ಪತ್ರೆಯು ಮಕ್ಕಳಿಗೆ, ಮಹಿಳೆಯರ ಚಿಕಿತ್ಸೆಗೆ ಪ್ರಸಿದ್ಧಿ ಪಡೆದಿದೆ. ಚಿಕಿತ್ಸೆಗೆಂದು ಬಂದ ಮಕ್ಕಳು ಸುಮ್ಮನೆ ಕೂರುವುದನ್ನು ನೋಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.‌ಶ್ರೀಧರ ದಂಡೆಪ್ಪನವರ್, ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸುವ ಸಲುವಾಗಿ ಆಸ್ಪತ್ರೆಯ ಗೋಡೆಗಳ ಮೇಲೆ ಕಾರ್ಟೂನ್ಸ್, ವರ್ಣಮಾಲೆ ಅಕ್ಷರಗಳು, ವಿವಿಧ ಪ್ರಾಣಿ ಚಿತ್ರಗಳು, ಪರಿಸರ, ಹೀಗೆ.. ಹಲವು ಬಗೆಯ ಚಿತ್ರಗಳನ್ನು ರಚಿಸಿ ಕಂಗೊಳಿಸುವಂತೆ ಮಾಡಿದ್ದಾರೆ.

ಚಿಲ್ಡ್ರನ್ಸ್ ಫ್ರೆಂಡ್ಲಿ ವಾರ್ಡ್ ತೆರೆದ ಚಿಟಗುಪ್ಪಿ ಆಸ್ಪತ್ರೆ (ETV Bharat)

ಅದಲ್ಲದೇ ಮಕ್ಕಳಿಗೆ ಆಟ ಆಡಲು ಆಟಿಕೆ ವಸ್ತುಗಳನ್ನು ಕೂಡ ದಾನಿಗಳಿಂದ ತರಿಸಿಕೊಂಡು ಆಸ್ಪತ್ರೆಗೆ ಒಂದು ಮೆರಗು ತಂದಿದ್ದಾರೆ. ಆಸ್ಪತ್ರೆಗೆ ಬಂದ ಮಕ್ಕಳು ಅಕ್ಷರಗಳನ್ನು ಓದುತ್ತಾ, ಚಿಕ್ಕಪುಟ್ಟ ವಾಹನಗಳಲ್ಲಿ ಆಟ ಆಡುತ್ತಾ ಬೇಗ ಗುಣಮುಖವಾಗುವ ವಾತಾವರಣ ನಿರ್ಮಾಣ ಮಾಡಿದ್ದು ಅವರ ಸೇವಾ ವೃತ್ತಿಗೆ ಹಿಡಿದ ಕೈಗನ್ನಡಿ.

CHITAGUPPI HOSPITAL SPECIALITY
ಗೋಡೆಯ ಮೇಲೆ ಅರಳಿದ ವಿವಿಧ ಪ್ರಾಣಿ-ಪಕ್ಷಿಗಳ ಚಿತ್ರಗಳು (ETV Bharat)
CHITAGUPPI HOSPITAL SPECIALITY
ಆಟದ ಜೊತೆ ಪಾಠ (ETV Bharat)

ಈ‌ ಕುರಿತಂತೆ ಈಟಿವಿ ಭಾರತದ ಜೊತೆ ಮಾತನಾಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ್, ''ಇಲ್ಲಿ ಬಡವರು ಅತೀ ಹೆಚ್ಚು ಬರುತ್ತಾರೆ. ಅವರನ್ನು ಗಮನದಲ್ಲಿಟ್ಟುಕೊಂಡು ಈ ಪರಿಕಲ್ಪನೆ ತರಲಾಗಿದೆ. ನಮ್ಮಲ್ಲಿ ಬರುವ ಬಡ ಕಾರ್ಮಿಕರ, ದಿನಗೂಲಿ ಕೆಲಸ ಮಾಡುವವರ ಮಕ್ಕಳೇ ಅಧಿಕ. ಹೀಗೆ ಬರುವ ಮಕ್ಕಳಲ್ಲಿ ಆಸ್ಪತ್ರೆ ಅಂದ್ರೆ ಭಯ ಇರುತ್ತೆ. ಹೀಗಾಗಿ ಚಿಕಿತ್ಸೆಗೆ ಸ್ಪಂದಿಸುವುದು ವಿರಳ. ಮಕ್ಕಳ ಗಮನ ಸೆಳೆಯಲೆಂದೇ ಮಕ್ಕಳ ಸ್ನೇಹಿ ವಾರ್ಡ್ ಮಾಡಲಾಗಿದೆ. ಭಯ ನಿವಾರಣೆಯಾಗಿ ಮಕ್ಕಳು ಬೇಗ ಗುಣಮುಖರಾಗುವ ಸಾಧ್ಯತೆ ಹೆಚ್ಚು. ಸರ್ಕಾರಿ ಆಸ್ಪತ್ರೆ ಕೂಡ ಖಾಸಗಿ ಆಸ್ಪತ್ರೆಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂಬ ಉದ್ದೇಶದಿಂದ ಮಾಡಲಾಗಿದೆ'' ಎಂದು ವಿವರಿಸಿದರು.

ಚಿಲ್ಡ್ರನ್ಸ್ ವಾರ್ಡ್​ನಲ್ಲಿ ಏನೇನಿದೆ: ಮಕ್ಕಳಿಗೆ ಆಟದ ಜೊತೆ ಪಾಠ ಎನ್ನುವ ಪರಿಕಲ್ಪನೆ ಇಟ್ಟುಕೊಂಡು ವಾರ್ಡ್​ಗಳನ್ನು ಬಣ್ಣ ಬಣ್ಣದ ಚಿತ್ತಾರದಿಂದ ಬಿಡಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಕನ್ನಡ ವರ್ಣಮಾಲೆಗಳು, ಪಕ್ಷಿ, ಪ್ರಾಣಿಗಳು, ಸಸ್ಯ ಸಂಕುಲದ ಜೊತೆಗೆ ಮಕ್ಕಳಿಗಾಗಿ ಆಟದ ವಸ್ತುಗಳನ್ನು ಸಹ ಇಡಲಾಗಿದೆ. ಮಕ್ಕಳು ಚಿಕಿತ್ಸೆಯ ಮಧ್ಯದಲ್ಲಿ ಭಯ ನಿವಾರಣೆ ಮಾಡುವದರ ಜೊತೆಗೆ ‌ಮಕ್ಕಳ ಮನಸ್ಸನ್ನು ಆಹ್ಲಾದಕರವಾಗಿ ಇಡಲು ಇದು ಸಹಕಾರಿಯಾಗಿದೆ ಎನ್ನುತ್ತಾರೆ ಇಲ್ಲಿನ ವೈದ್ಯರು.

CHITAGUPPI HOSPITAL SPECIALITY
ಮಕ್ಕಳ ಆಟಿಕೆ ವಸ್ತುಗಳು (ETV Bharat)

ಆಸ್ಪತ್ರೆ ನೋಡಿದ್ರೆ ಬಹಳ ಖುಷಿಯಾಗುತ್ತೆ. ಇಲ್ಲಿ ಎಲ್ಲೂ ಸೂಜಿ ಚಿತ್ರ ಇಲ್ಲ. ಪ್ರಾಣಿ, ಪಕ್ಷಿಗಳ ಚಿತ್ರ ಬಿಡಿಸಿದ್ದರಿಂದ ಚಿಕಿತ್ಸೆಗೆ ಬಂದ ಮಕ್ಕಳು ಭಯಪಡುತ್ತಿಲ್ಲ. ಮಕ್ಕಳಿಗಾಗಿ ಆಟ ಆಡುವ ವ್ಯವಸ್ಥೆ ಇದೆ. ಖಾಸಗಿ ಆಸ್ಪತ್ರೆಯಲ್ಲೂ ಇಲ್ಲದ ಸೌಲಭ್ಯ ಇಲ್ಲಿರುವುದರಿಂದ ಬೇಗ ಮುಖಮುಖರಾಗುತ್ತಿದ್ದಾರೆ ಎನ್ನುತ್ತಾರೆ ಮಲ್ಲಿಕ್ ಜಾನ್ ಎಂಬ ವ್ಯಕ್ತಿ.

CHITAGUPPI HOSPITAL SPECIALITY
ಮಕ್ಕಳ ಆಟಿಕೆ ವಸ್ತುಗಳು (ETV Bharat)

ಇದನ್ನೂ ಓದಿ:

ಮಹಿಳೆಯ ಹೊಟ್ಟೆಯಲ್ಲಿತ್ತು 2.2 ಕೆ.ಜಿ ಗಡ್ಡೆ! ಚಿಟಗುಪ್ಪಿ ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ - DOCTORS REMOVED TUMOR FROM WOMAN

ಖಾಸಗಿ ಆಸ್ಪತ್ರೆಗೆ ಸೆಡ್ಡು ಹೊಡೆದ ಚಿಟಗುಪ್ಪಿ ಆಸ್ಪತ್ರೆ; ಬಡವರ ಪಾಲಿಗೆ ಆಯ್ತು ಸಂಜೀವಿನಿ - Chitaguppi Hospital - CHITAGUPPI HOSPITAL

ಚಿಟಗುಪ್ಪಿ ಆಸ್ಪತ್ರೆ ವೈದ್ಯರ ಸಾಧನೆ : ಮೂವರು ಮಹಿಳೆಯರಿಗೆ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಶ್ರೀಧರ​ - Dr Sridhara Dandeppa

ETV Bharat Logo

Copyright © 2024 Ushodaya Enterprises Pvt. Ltd., All Rights Reserved.