ETV Bharat / technology

ಇ - ವಿಟಾರಾದ ಮೊದಲ ನೋಟ ಪರಿಚಯಿಸಿದ ಮಾರುತಿ ಸುಜುಕಿ - MARUTI E VITARA TEASER IMAGE

Maruti E Vitara India Launch: ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರಿನ ಬಿಡುಗಡೆಗಾಗಿ ಕಾಯುತ್ತಿರುವ ಜನರಿಗೆ ಒಂದು ಶುಭ ಸುದ್ದಿ. ಕಂಪನಿಯು ಇ - ವಿಟಾರಾ ಮೊದಲ ಟೀಸರ್ ಚಿತ್ರ ಬಿಡುಗಡೆ ಮಾಡಿದೆ.

MARUTI SUZUKI E VITARA  MARUTI SUZUKI E VITARA INDIA LAUNCH  MARUTI E VITARA TEASER LAUNCH  MARUTI SUZUKI CARS
ಇ-ವಿಟಾರಾದ ಮೊದಲ ನೋಟ ಪರಿಚಯಿಸಿದ ಮಾರುತಿ ಸುಜುಕಿ (Photo Credit: Maruti Suzuki)
author img

By ETV Bharat Tech Team

Published : 2 hours ago

Maruti Suzuki E Vitara India Launch: ಸುದೀರ್ಘ ಕಾಯುವಿಕೆಯ ನಂತರ ಮಾರುತಿ ಸುಜುಕಿ ಅಂತಿಮವಾಗಿ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಇ-ವಿಟಾರಾ ಟೀಸರ್​ನ ಚಿತ್ರವನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಮುಂದಿನ ತಿಂಗಳು ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಇ-ವಿಟಾರಾವನ್ನು ಪ್ರದರ್ಶಿಸಲಾಗುವುದು. ಅಷ್ಟೇ ಅಲ್ಲ ಈ ಕಾರನ್ನು ಭಾರತದಲ್ಲಿ ತಯಾರಿಸಲಾಗುವುದು. ಬಳಿಕ ಇದನ್ನು ಪ್ರಪಂಚದಾದ್ಯಂತ ಮಾರಾಟ ಮಾಡಲಾಗುವುದು. ವಿಶೇಷವೆಂದರೆ ಮಾರುತಿ ಸುಜುಕಿ ಇ-ವಿಟಾರಾ ಬಿಡುಗಡೆಯೊಂದಿಗೆ ಕಂಪನಿಯು ಸಂಪೂರ್ಣ ಚಾರ್ಜಿಂಗ್ ವ್ಯವಸ್ಥೆಯನ್ನು ಸಹ ತರುತ್ತಿದೆ.

ಸೇವಾ ಕೇಂದ್ರಗಳಲ್ಲಿ ಚಾರ್ಜಿಂಗ್ ಸ್ಟೇಷನ್‌: ಮಾರುತಿ ಸುಜುಕಿ ಗ್ರಾಹಕರಿಗೆ ಇವಿಗಳನ್ನು ಸುಲಭ ಮತ್ತು ಅನುಕೂಲಕರವಾಗಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಕಂಪನಿಯು ತನ್ನ ಡೀಲರ್‌ಶಿಪ್‌ಗಳು ಮತ್ತು ಸೇವಾ ಕೇಂದ್ರಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸಹ ಸ್ಥಾಪಿಸುತ್ತದೆ. ಮನೆಯಲ್ಲಿಯೂ ಚಾರ್ಜಿಂಗ್ ಸೌಲಭ್ಯ ದೊರೆಯಲಿದೆ. ಈ ವರ್ಷ, ಸುಜುಕಿ ಮೋಟಾರ್ ಕಾರ್ಪೊರೇಷನ್ ಇ-ವಿಟಾರಾವನ್ನು ಇಟಲಿಯ ಮಿಲನ್‌ನಲ್ಲಿ ಅನಾವರಣಗೊಳಿಸಿತು. ಅಂದಿನಿಂದ ಇದು ಶೀಘ್ರದಲ್ಲೇ ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಎಂಬ ಸುದ್ದಿ ಮುಂಚೂಣಿಗೆ ಬರುತ್ತಿತ್ತು.

ಮಾರುತಿ ಸುಜುಕಿ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಹೇಳಿಕೆ ಪ್ರಕಾರ, ದಶಕಗಳ ವಾಹನ ತಯಾರಿಕಾ ಪರಿಣತಿಯೊಂದಿಗೆ, ನಾವು ಸುಧಾರಿತ ಎಲೆಕ್ಟ್ರಿಕ್ ತಂತ್ರಜ್ಞಾನವನ್ನು ಗ್ರಾಹಕರ ಆಸಕ್ತಿಯೊಂದಿಗೆ ಸಂಯೋಜಿಸಿ ನಿಜವಾಗಿಯೂ ಪರಿವರ್ತಕವನ್ನು ನೀಡಿದ್ದೇವೆ. ಭಾರತದಲ್ಲಿ ಪ್ರತಿ ತಿಂಗಳು ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಸಾಕಷ್ಟು ಏರಿಳಿತಗಳಿವೆ ಮತ್ತು ಸರಿಯಾದ ಚಾರ್ಜಿಂಗ್ ಮೂಲಸೌಕರ್ಯಗಳ ಅನುಪಸ್ಥಿತಿಯಲ್ಲಿ ಇವಿಗಳ ಮಾರಾಟದ ವೇಗವು ಹೆಚ್ಚಾಗುತ್ತಿಲ್ಲ ಎಂದು ನಂಬಲಾಗಿದೆ.

‘ಸರಿಯಾದ ಚಾರ್ಜಿಂಗ್ ಮೂಲಸೌಕರ್ಯ ಅಗತ್ಯ’: ಎಲೆಕ್ಟ್ರಿಕ್ ವಾಹನಗಳನ್ನು ಮುನ್ನಡೆಸಲು ಉತ್ತಮ ಚಾರ್ಜಿಂಗ್ ಸೌಲಭ್ಯ ಅಗತ್ಯ ಎಂದು ಕಂಪನಿ ನಂಬುತ್ತದೆ. ಇವಿ ಅಳವಡಿಕೆಗೆ ಗಮನಾರ್ಹ ತಡೆಗೋಡೆ ಮತ್ತು ಅನುಕೂಲಕರವಾದ ಚಾರ್ಜಿಂಗ್ ವ್ಯವಸ್ಥೆಯ ಕೊರತೆಯಾಗಿದೆ ಎಂದು ಬ್ಯಾನರ್ಜಿ ಹೇಳಿದರು. ಈ ಸಮಸ್ಯೆಯನ್ನು ಪರಿಹರಿಸಲು, ನಾವು e-Vitara ನೊಂದಿಗೆ ವಿಶ್ವಾಸಾರ್ಹ ಮತ್ತು ಸಮಗ್ರ EV ಪರಿಸರ ವ್ಯವಸ್ಥೆ ಪರಿಚಯಿಸಲು ಬದ್ಧರಾಗಿದ್ದೇವೆ. ಇದು ಹೋಮ್ ಚಾರ್ಜಿಂಗ್ ಪರಿಹಾರಗಳು ಮತ್ತು ಮಾರುತಿ ಸುಜುಕಿ ಡೀಲರ್‌ಶಿಪ್‌ಗಳು ಮತ್ತು ಸೇವಾ ಕೇಂದ್ರಗಳಲ್ಲಿ ಲಭ್ಯವಿರುವ ವೇಗದ ಚಾರ್ಜಿಂಗ್ ಸೌಲಭ್ಯಗಳ ರಾಷ್ಟ್ರವ್ಯಾಪಿ ಜಾಲ ಒಳಗೊಂಡಿರುತ್ತದೆ ಎಂದು ಬ್ಯಾನರ್ಜಿ ಹೇಳುತ್ತಾರೆ. ಇದು ಗ್ರಾಹಕರು ತಮ್ಮ ಕಾರುಗಳನ್ನು ಎಲ್ಲಿ ಬೇಕಾದರೂ ಚಾರ್ಜ್ ಮಾಡಲು ಸುಲಭವಾಗುತ್ತದೆ.

ಓದಿ: ಸ್ಯಾಮ್​ಸಂಗ್​ ಗ್ಯಾಲೆಕ್ಸಿ ಎಸ್​ 25 ಸೀರಿಸ್​ಗೂ ಎಸ್​24ಗೂ ವ್ಯತ್ಯಾಸವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.