Royal Enfield Recall: ಪ್ರಸಿದ್ಧ ಮೋಟಾರ್‌ಸೈಕಲ್ ತಯಾರಕ ಕಂಪನಿ ರಾಯಲ್ ಎನ್‌ಫೀಲ್ಡ್ ತನ್ನ ಮೋಟಾರ್‌ಸೈಕಲ್‌ಗಳ ಹಿಂಪಡೆಯುವಿಕೆಗೆ ಕ್ರಮ ಕೈಗೊಂಡಿದೆ. ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಮಾರಾಟವಾದ ವಾಹನಗಳನ್ನು ಹಿಂಪಡೆಯಲಾಗುತ್ತಿದೆ. ನವೆಂಬರ್ 2022 ಮತ್ತು ಮಾರ್ಚ್ 2023ರ ನಡುವೆ ತಯಾರಿಸಲಾದ ವಾಹನಗಳನ್ನು ಹಿಂಪಡೆಯಲಾಗುತ್ತಿದೆ ಎಂದು ತಿಳಿಸಿದೆ.
ಮೋಟಾರ್‌ಸೈಕಲ್‌ನ ಹಿಂಬದಿಯ ರಿಫ್ಲೆಕ್ಟರ್‌ನಲ್ಲಿನ ದೋಷ ಮತ್ತು ರಿಫ್ಲೆಕ್ಟರ್‌ಗಳು ಕಂಪನಿಯ ಗುಣಮಟ್ಟಕ್ಕೆ ಅನುಗುಣವಾಗಿಲ್ಲದ ಕಾರಣ ಹಿಂಪಡೆಯಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಆದರೆ, ಎಷ್ಟು ವಾಹನಗಳನ್ನು ಹಿಂಪಡೆಯಲಾಗುತ್ತಿದೆ ಎಂಬುದು ಬಹಿರಂಗವಾಗಿಲ್ಲ. ಹಂತಹಂತವಾಗಿ ಹಿಂಪಡೆಯುವ ಪ್ರಕ್ರಿಯೆಯನ್ನು ಕೈಗೊಳ್ಳಲಿದೆ ಎಂದು ಹೇಳಿದೆ.
ಆರಂಭದಲ್ಲಿ, ಈ ಹಿಂಪಡೆಯುವ ಕ್ರಮವನ್ನು ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಕೆನಡಾದಲ್ಲಿ ಕೈಗೊಳ್ಳಲಾಗುತ್ತದೆ. ನಂತರ ಭಾರತ, ಬ್ರೆಜಿಲ್, ಲ್ಯಾಟಿನ್ ಅಮೆರಿಕ, ಯುರೋಪ್ ಮತ್ತು ಯುಕೆಯಲ್ಲಿ ನಡೆಯುತ್ತದೆ. ಕಂಪನಿಯ ಪ್ರತಿನಿಧಿಗಳು ಗ್ರಾಹಕರಿಗೆ ಹಿಂಪಡೆಯುವಿಕೆಯ ಬಗ್ಗೆ ಮಾಹಿತಿ ಒದಗಿಸುತ್ತಾರೆ ಮತ್ತು ಕೇವಲ 15 ನಿಮಿಷಗಳಲ್ಲಿ ರಿಪ್ಲೆಕ್ಟರ್ ಬದಲಿಸಿ ಕೊಡುತ್ತಾರೆ. ಈ ಪ್ರಕ್ರಿಯೆ ಸಂಪೂರ್ಣವಾಗಿ ಉಚಿತ ಎಂದು ಹೇಳಿದೆ.
ಇದೇ ವೇಳೆ, ಚಿಕ್ಕ ಗಾತ್ರದ ಸ್ಯಾಂಪಲ್ಗಳ ಪರಿಶೀಲನೆಯಲ್ಲಿ ರಿಫ್ಲೆಕ್ಟರ್ಗಳಲ್ಲಿ ದೋಷ ಕಂಡುಬಂದಿದ್ದು, ಇದರಿಂದ ಬೈಕ್ ಕಾರ್ಯಕ್ಷಮತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಕಾರು ಪ್ರಿಯರಿಗೆ ಗುಡ್ ನ್ಯೂಸ್- ನವರಾತ್ರಿಯಿಂದ ಮಹೀಂದ್ರ ಥಾರ್ ರಾಕ್ಸ್ ಬುಕಿಂಗ್ ಪ್ರಾರಂಭ - Mahindra Thar Roxx Booking