ETV Bharat / technology

ಗೂಗಲ್​ ಮ್ಯಾಪ್ಸ್​ನಲ್ಲಿ ಅಡಗಿವೆ ಅದ್ಭುತ ಫೀಚರ್​ಗಳು: ಇವುಗಳನ್ನು ನೀವು ಒಮ್ಮೆಯಾದರೂ ಬಳಸಿದ್ದೀರಾ? - AMAZING FEATURES IN GOOGLE MAPS

Google Maps: ಗೂಗಲ್​ ಮ್ಯಾಪ್ಸ್​ನಲ್ಲಿ ಅದ್ಭುತ ಫೀಚರ್​ಗಳಿವೆ. ಅವುಗಳನ್ನು ನೀವು ಉಪಯೋಗಿಸಿದ್ದೀರಾ?. ಇಲ್ಲವೆಂದಾದಲ್ಲಿ ಈ ಸುದ್ದಿ ನಿಮಗೆ.

FEATURES IN GOOGLE MAPS  AMAZING FEATURES HIDDEN  GOOGLE MAPS
ಗೂಗಲ್​ ಮ್ಯಾಪ್ಸ್ ಬಳಕೆಗೆ ಟಿಪ್ಸ್‌ (Getty Images)
author img

By ETV Bharat Tech Team

Published : Nov 18, 2024, 8:56 AM IST

Google Maps: ಜನರು ವಿಳಾಸ ಹುಡುಕುವುದಕ್ಕೆ ಗೂಗಲ್​ ಮ್ಯಾಪ್ಸ್ ಮೊರೆ ಹೋಗುತ್ತಾರೆ. ಇದರ ಸಹಾಯದಿಂದ ನಾವು ಟರ್ನ್​ಗಳು, ಶಾರ್ಟ್​ಕಟ್​ಗಳ ಮೂಲಕ ಬಹುಬೇಗ ಗಮ್ಯಸ್ಥಾನ ತಲುಪುಬಹುದು. ಯಾವುದಾದ್ರೂ ಹೊಸ ಸ್ಥಳಕ್ಕೆ ಹೋಗಬೇಕಾದ್ರೆ ಗೂಗಲ್​ ಮ್ಯಾಪ್ಸ್​ ಬಹು ರಸ್ತೆ ಮಾರ್ಗಗಳನ್ನು ಸೂಚಿಸುತ್ತದೆ. ಇದರ ಸಹಾಯದಿಂದ ಕಡಿಮೆ ಸಮಯದಲ್ಲಿ ಆ ಪ್ರದೇಶವನ್ನು ತಲುಪಬಹುದು.

ಇದರ ಜೊತೆಗೆ, 'Avoid Toll' ಮತ್ತು 'Avoid Highway'ಯಂತಹ ಆಯ್ಕೆಗಳನ್ನೂ ಸಹ ಬಳಸಿಕೊಂಡು ನಮ್ಮ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಬಹುದು. ಈಗ ತಂತ್ರಜ್ಞಾನದ ಸಹಾಯದಿಂದ ಗೂಗಲ್​ ಮ್ಯಾಪ್ಸ್​ನಲ್ಲಿ ಹೊಸ ಫೀಚರ್​ಗಳನ್ನು ತರುತ್ತಿದ್ದಾರೆ. ಇಂಥ ಅಡ್ವಾನ್ಸ್‌ಡ್​ ಫೀಚರ್​ನಿಂದ ಉತ್ತಮ ಪ್ರಯಾಣದ ಅನುಭವ ಪಡೆಯಬಹುದು. ಇದಲ್ಲದೇ ಗೂಗಲ್​ ಮ್ಯಾಪ್ಸ್​ನಲ್ಲಿ ನಮಗೆ ತಿಳಯದೇ ಇರುವ ಅನೇಕ ಫೀಚರ್​ಗಳಿವೆ.

ಆಫ್​​ಲೈನ್ ಮ್ಯಾಪ್ಸ್​ ಬಳಕೆ: ಇಂದಿಗೂ ನಮ್ಮ ದೇಶದ ಅನೇಕ ಪ್ರದೇಶಗಳಲ್ಲಿ ಸರಿಯಾದ ಇಂಟರ್ನೆಟ್​ ವ್ಯವಸ್ಥೆಯಿಲ್ಲ. ಇಂಥ ಪರಿಸ್ಥಿತಿಯಲ್ಲಿ ಆಫ್​ಲೈನ್​ ಮ್ಯಾಪ್ಸ್​ ಡೌನ್​ಲೋಡ್​ ಮಾಡಿಕೊಂಡು ಉಪಯೋಗಿಸುವುದರಿಂದ ನೀವು ಯಾವುದೇ ಅಡಚಣೆಯಿಲ್ಲದ ನ್ಯಾವಿಗೇಷನ್​ ಪಡೆಯುತ್ತೀರಿ. ಇದಕ್ಕಾಗಿ ನೀವು ಆ್ಯಪ್​ನಲ್ಲಿ ನೀವು ಎಲ್ಲಿಗೆ ಹೋಗಬೇಕೆನ್ನುವ ಸ್ಥಳವನ್ನು ಸರ್ಚ್​ ಮಾಡಿ ಡೌನ್​ಲೋಡ್​ ಆಪ್ಷನ್​ ಆಯ್ದುಕೊಳ್ಳಬೇಕು. ಈ ಫೀಚರ್​ ನಿಮಗೆ ಗ್ರಾಮೀಣ ಭಾಗದಲ್ಲಿ ಮತ್ತು ಅರಣ್ಯ ಪ್ರದೇಶಗಳಲ್ಲಿ ಬಹಳ ಉಪಯುಕ್ತ.

ರಿಯಲ್​ಟೈಂ ಲೊಕೇಶನ್: ಸಾಧಾರಣವಾಗಿ ನಾವು ಯಾವುದಾದ್ರೂ ಲೊಕೇಶನ್​ ಸೆಟ್​ ಮಾಡುಕೊಳ್ಳುವಾಗ ಪ್ರಿವ್ಯೂ ಕಾಣಿಸುತ್ತದೆ. ಇದರ ಹೊರತಾಗಿಯೂ ನೀವು ರಿಯಲ್​ಟೈಂ ಲೊಕೇಶನ್​ ಸ್ಥಳಗಳನ್ನು ನೋಡಲು ಬಯಿಸಿದ್ರೆ, ಅದಕ್ಕಾಗಿ ನೀವು ರೂಟ್​ ಪ್ರಿವ್ಯೂ ಪಕ್ಕದಲ್ಲಿ ಇರುವ ಥ್ರೀ ಡಾಟ್ಸ್​ಸೆಲೆಕ್ಟ್​ ಮಾಡಿಕೊಳ್ಳಿ. ಬಳಿಕ ಅದರಲ್ಲಿ ಸ್ಯಾಟಲೈಟ್​, ಟ್ರಾಫಿಕ್​ ಆಪ್ಷನ್​ ಮೇಲೆ ಕ್ಲಿಕ್​ ಮಾಡಿದ್ರೆ ನಿಮಗೆ ಬೆಸ್ಟ್​ ಪ್ರಿವ್ಯೂ ಕಾಣಿಸುತ್ತದೆ.

ರಿಯಲ್​ ಟೈಂ ಟ್ರಾಫಿಕ್​ ಅಪ್​ಡೇಟ್ಸ್​: ನೀವು ಟ್ರಾಫಿಕ್​ ಬಗ್ಗೆ ಅಪ್​ಡೇಟ್​ ಪಡೆಯಲು ಗೂಗಲ್​ ಮ್ಯಾಪ್ಸ್​ನ ಈ ಫೀಚರ್​ ಬಳಸುವುದರಿಂದ ಬಹಳ ಉಪಯೋಗವಾಗುತ್ತದೆ. ಗೂಗಲ್​ ಮ್ಯಾಪ್ಸ್​ ಪ್ರಸ್ತುತ ಟ್ರಾಫಿಕ್​ ಸ್ಥಿತಿಗಳನ್ನು ವಿಶ್ಲೇಷಿಸುತ್ತದೆ. ಒಂದು ವೇಳೆ ವಾಹನಗಳ ದಟ್ಟಣೆ ಹೆಚ್ಚಾಗಿದ್ರೆ ವಿಳಂಬವಾಗುತ್ತದೆ ಎಂದು ಎಚ್ಚರಿಸುವುದರ ಜೊತೆಗೆ ಪ್ರತ್ಯೇಕ ಮಾರ್ಗಗಳನ್ನೂ ಸೂಚಿಸುತ್ತದೆ. ಈ ಫೀಚರ್​ ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಅನೇಕ ಹೈಟೆಕ್​ ಸಿಟಿಗಳಲ್ಲಿ ಹೆಚ್ಚು ಉಪಯುಕ್ತ.

ಸ್ಟ್ರೀಟ್​ ವ್ಯೂ: ಗೂಗಲ್​ ಮ್ಯಾಪ್ಸ್​ನಲ್ಲಿ ಸ್ಟ್ರೀಟ್​ ವ್ಯೂ ಫೀಚರ್​ ಅತ್ಯುತ್ತಮವೆನಿಸುತ್ತದೆ. ಏಕೆಂದ್ರೆ, ನೀವು ಗಮ್ಯಸ್ಥಳವನ್ನು ತಲುಪುವುದಕ್ಕಿಂತ ಮೊದಲು ಅದರ ಗ್ರೌಂಡ್​-ಲೆವಲ್​ ವ್ಯೂ ನಿಮಗೆ ಕಾಣಿಸುತ್ತದೆ. ಈ ಫೀಚರ್​ ಲ್ಯಾಂಡ್​ಮಾರ್ಕ್ಸ್​, ಎಂಟ್ರೆನ್ಸಸ್​ ಗುರುತಿಸಲು ನೆರವಾಗುತ್ತದೆ. ಇದರಿಂದ ನಿಮಗೆ ಗೊತ್ತಿರದ ಸ್ಥಳಗಳ ಬಗ್ಗೆ ತಿಳಿದುಕೊಳ್ಳಬಹುದು.

ವಾಯ್ಸ್​ ಕಮಾಂಡ್ಸ್​: ನೀವು ಡ್ರೈವಿಂಗ್​ ಮಾಡುವ ಸಮಯದಲ್ಲಿ ನಿಮ್ಮ ಕೈಗಳನ್ನು ಉಪಯೋಗಿಸದೇ ಗೂಗಲ್​ ಮ್ಯಾಪ್ಸ್​ ಆಪರೇಟ್​ ಮಾಡುವುದಕ್ಕೆ ಈ ವಾಯ್ಸ್​ ಕಮಾಂಡ್​ ಫೀಚರ್​ ಬಹಳ ಉತ್ತಮ. ಇದಕ್ಕಾಗಿ ನೀವು ವಾಯ್ಸ್​ ಕಮಾಂಡ್ಸ್​ ಅನ್ನು ಆ್ಯಕ್ಟಿವ್​ ಮಾಡಿಕೊಳ್ಳಬೇಕು. 'Hey Google' ಎಂದು ಹೇಳಿ ನಿಮ್ಮ ಕಮಾಂಡ್​ ಬಗ್ಗೆ ಮಾಹಿತಿ ನೀಡಿ ಇದನ್ನು ಉಪಯೋಗಿಸಬಹುದು.

ಇದನ್ನೂ ಓದಿ: ಮನೆಯಲ್ಲೇ ಕಸದಿಂದ ಗೊಬ್ಬರ ತಯಾರಿಸುವ 'ದೋಸ್ತ್ ಬಿನ್': ಜಿಕೆವಿಕೆ ಕೃಷಿಮೇಳದಲ್ಲಿ ವಿಶೇಷ ಯಂತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.