Toyota Urban Cruiser Hyryder: ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕೇವಲ ಎರಡು ವರ್ಷಗಳಲ್ಲಿ ಲಕ್ಷ ಯೂನಿಟ್ ಮಾರಾಟ ಮಾಡಿ ಹೊಸ ದಾಖಲೆ ಬರೆದಿದೆ. ಮಾರುತಿ ಸುಜುಕಿ ಜೊತೆಗಿನ ಪಾಲುದಾರಿಕೆಯ ನಂತರ ಟೊಯೊಟಾ ಅನೇಕ ಮಾರುತಿ ರೀಬ್ಯಾಡ್ಜ್ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಆಗಿನಿಂದಲೂ ಕಂಪನಿಯ ಮಾರಾಟ ಗಣನೀಯವಾಗಿ ಏರುತ್ತಿದೆ.
ಗ್ರಾಹಕರಿಂದ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಎರಡನೇ ಮಾರುತಿ ರೀಬ್ಯಾಡ್ಜ್ ಮಾಡಲಾದ ಕಾರು ಎಂದು ಎನಿಸಿಕೊಂಡಿದೆ. ಇದರ ಹೋಲ್ಸೆಲ್ ಮಾರಾಟ ಒಂದು ಲಕ್ಷ ಯುನಿಟ್ಗಳನ್ನು ದಾಟಿವೆ. ಸೆಪ್ಟಂಬರ್ ತಿಂಗಳಲ್ಲೇ ಟೊಯೊಟಾ ಈ ದಾಖಲೆಯನ್ನು ಬರೆದಿರುವುದು ಗಮನಾರ್ಹ. ಈ ಕಾರು ಅಕ್ಟೋಬರ್ ಅಂತ್ಯದ ವೇಳೆಗೆ ಒಟ್ಟು 1,07,975 ಯುನಿಟ್ ಮಾರಾಟವಾಗಿದೆ.
ಕಂಪನಿ ಈ ಕಾರನ್ನು 2022ರಲ್ಲಿ ಮಾರುಕಟ್ಟೆಗೆ ಪರಿಚಯಿಸಿತ್ತು. ಇದು ಟೊಯೊಟಾ ಗ್ಲಾನ್ಜಾ ಹ್ಯಾಚ್‌ಬ್ಯಾಕ್ ಮಾರುತಿ ಬಲೆನೊ ಆಧರಿತವಾಗಿದೆ. ಕಂಪನಿಯ ಮೊದಲ ರಿಬ್ಯಾಡ್ಜ್ ಕಾರು ಕೂಡಾ ಹೌದು. ಅಕ್ಟೋಬರ್ ಅಂತ್ಯದ ವೇಳೆಗೆ ಹ್ಯಾಚ್‌ಬ್ಯಾಕ್ ಅನ್ನು 1,91,029 ಯುನಿಟ್ಗಳನ್ನು ಡಿಲರ್ಶಿಪ್ಗಳಿಗೆ ಕಳುಹಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
We’ve hit a major milestone – 100,000 #Awesome customers and counting! 🙌 Thank you for trusting us and allowing us to be a part of your journey. Your support drives us to move forward!#ToyotaIndia #Hyryder pic.twitter.com/B4t8D0vx1v
— Toyota India (@Toyota_India) November 16, 2024
ಪ್ರಸಕ್ತ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ, ಏಪ್ರಿಲ್ನಿಂದ ಅಕ್ಟೋಬರ್ವರೆಗೆ ಟೊಯೊಟಾ ಹೈಡರ್ ಮಾರಾಟ ವರ್ಷದಿಂದ ವರ್ಷಕ್ಕೆ ಶೇ 52ರಷ್ಟು ಏರಿಕೆಯಾಗಿ 36,220 ಯುನಿಟ್ ತಲುಪಿದೆ. ಇದು ಟೊಯೊಟಾದ ಒಟ್ಟು ಯುಟಿಲಿಲಿ ವೆಹಿಕಲ್ ಹೋಲ್ಸೇಲ್ 1,47,351 ಯುನಿಟ್‌ಗಳಲ್ಲಿ ಸುಮಾರು ನಾಲ್ಕನೇ ಒಂದು ಭಾಗ. ಹಬ್ಬದ ದಿನಗಳಲ್ಲಿ ಬೇಡಿಕೆ ಹೆಚ್ಚಿದ್ದಕ್ಕೆ ಮಾರಾಟದಲ್ಲಿ ಏರಿಕೆ ಕಂಡಿದೆ ಎಂಬ ಹೇಳಲಾಗುತ್ತಿದೆ. ಅಕ್ಟೋಬರ್ ಆರಂಭದಲ್ಲಿ, ಕಂಪನಿಯು ಟೊಯೋಟಾ ಹಿರಿಡರ್ ಫೆಸ್ಟಿವಲ್ ಲಿಮಿಟೆಡ್ ಆವೃತ್ತಿಯನ್ನು ಶುರು ಮಾಡಿತ್ತು.
2024ರ ಆರ್ಥಿಕ ವರ್ಷದಲ್ಲಿ ಟೊಯೊಟಾ ಹೈರೈಡರ್ ಮಾರಾಟ ಶೇ 114ರಷ್ಟು ಏರಿಕೆಯಾಗಿ ಸುಮಾರು 48,916 ಯುನಿಟ್ಗಳು ಮಾರಾಟಗೊಂಡಿವೆ. ಈ ದಾಖಲೆಯ ಮಾರಾಟ ಟೊಯೊಟಾ ಹೈರೈಡರ್ ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್, ಸ್ಕೋಡಾ ಕುಶಕ್, ಫೋಕ್ಸ್‌ವ್ಯಾಗನ್ ಟಿಗುವಾನ್, ಮಹೀಂದ್ರ ಬೊಲೆರೊ, ಬೊಲೆರೊ ನಿಯೊ, ಥಾರ್ ಮುಂತಾದವುಗಳನ್ನು ಮೀರಿಸಿದೆ. ಈ ಕ್ರಮದಲ್ಲಿ, FY2024ರಲ್ಲಿ ಆರನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಗೂಗಲ್ ಮ್ಯಾಪ್ಸ್ನಲ್ಲಿ ಅಡಗಿವೆ ಅದ್ಭುತ ಫೀಚರ್ಗಳು: ಇವುಗಳನ್ನು ನೀವು ಒಮ್ಮೆಯಾದರೂ ಬಳಸಿದ್ದೀರಾ?