ETV Bharat / technology

ಈ ಮ್ಯಾಕ್​ಬುಕ್ ಪ್ರೋ​ ಮಾರುತಿ ಡಿಸೈರ್​ ಕಾರ್​ಗಿಂತಲೂ ದುಬಾರಿ! ಇದರಲ್ಲಿ ಅಂಥದ್ದೇನಿದೆ? - MACBOOK PRO

MacBook Pro: ಆ್ಯಪಲ್​ನ ಹೊಸ ಎಂ4 ಮ್ಯಾಕ್ಸ್​ನಿಂದ ರನ್​ ಆಗುವ ಮ್ಯಾಕ್​ಬುಕ್​ ಪ್ರೋ ಮಾರುತಿ ಡಿಸೈರ್​ಗಿಂತ ಹೆಚ್ಚು ದುಬಾರಿ. ಇದರ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

APPLE MACBOOK PRO FEATURES  MACBOOK PRO PRICE  MACBOOK PRO DETAILS  MARUTI DZIRE CAR
ಮ್ಯಾಕ್​ಬುಕ್ ಪ್ರೋ (IANS)
author img

By ETV Bharat Tech Team

Published : Nov 18, 2024, 8:18 AM IST

Updated : Nov 18, 2024, 8:38 AM IST

MacBook Pro: ಭಾರತದಲ್ಲಿ ಆ್ಯಪಲ್ ಪ್ರೊಡಕ್ಟ್​ಗಳಿಗೆ ಬೇಡಿಕೆ ಜಾಸ್ತಿ. ಆ್ಯಪಲ್​ ಸಿಲಿಕಾನ್​ನ ಎಂ4 ಸೀರಿಸ್​ನ ಪ್ರೊಸೆಸರ್​ನಿಂದ ರನ್​ ಆಗುವ ಇತ್ತೀಚಿನ ಜನರೇಶನ್​ನ ಮ್ಯಾಕ್​ಬುಕ್​ ಪ್ರೊ ಕಳೆದ ವಾರ ದೇಶದ ಮಾರುಕಟ್ಟೆಗಳಲ್ಲಿ ಭರ್ಜರಿಯಾಗಿ ಮಾರಾಟವಾಯಿತು.

14 ಇಂಚಿನ ಮ್ಯಾಕ್​ಬುಕ್​ ಪ್ರೋ ಮಾಡೆಲ್​ 1,69,900 ರೂ.ಗೆ ಮಾರಾಟವಾಗುತ್ತಿದೆ. ಈ ಮಾಡೆಲ್​ ಎಂ4 ಚಿಪ್​, 16GB RAM ಮತ್ತು 512GB ಸ್ಟೋರೇಜ್​ ಒಳಗೊಂಡಿದೆ. ಆದ್ರೆ ಅತ್ಯಂತ ಪವರ್‌ಫುಲ್​ ಮ್ಯಾಕ್​ಬುಕ್​ ಪ್ರೋ ಬೆಲೆ 7,34,900 ರೂ.ಗೆ ನಿಗದಿಪಡಿಸಲಾಗಿದೆ. ಇದು ಮಾರುತಿ ಡಿಸೈರ್ ಕಾರಿಗಿಂತಲೂ ದುಬಾರಿ ಎಂಬುದು ಗಮನಾರ್ಹ. ಈ ದರದಲ್ಲಿ ಆ್ಯಪಲ್​ ಅಸಾಧಾರಣ ಕಂಪ್ಯೂಟಿಂಗ್ ಪವರ್​ ನೀಡುತ್ತದೆ. ಅಷ್ಟೇ ಅಲ್ಲದೇ, ಇದು​​ ವಿಶ್ವದ ಅತ್ಯಂತ ಪವರ್​ಫುಲ್​ ಲ್ಯಾಪ್​ಟಾಪ್​ಗಳಲ್ಲಿ ಒಂದು.

ಅಡ್ವಾನ್ಸ್‌ಡ್​ ಮ್ಯಾಕ್​ಬುಕ್​ ಪ್ರೋ ಖರೀದಿಸುವವರು ಆ್ಯಪಲ್‌ನ ಅಧಿಕೃತ ವೆಬ್​ಸೈಟ್​ನಿಂದ ಆರ್ಡರ್​ ಮಾಡುವುದು ಒಳ್ಳೆಯದು. ಇಲ್ಲಿ ಕಂಪನಿ​ ತನ್ನ ಬಳಕೆದಾರರಿಗೆ ಡಿಸ್​ಪ್ಲೇ, ಮೆಮೊರಿ ಮತ್ತು ಸ್ಟೋರೇಜ್ ಸೇರಿದಂತೆ ಇನ್ನಿತರ ವಿಶೇಷತೆಗಳನ್ನು ಕಸ್ಟಮೈಸ್​ ಮಾಡಲು ಅನುಮತಿಸುತ್ತಿದೆ.

16 ಇಂಚಿನ ಮ್ಯಾಕ್​ಬುಕ್​ ಪ್ರೋ ಎಂ4 ಮ್ಯಾಕ್ಸ್​ ಚಿಪ್, ​16-ಕೋರ್ CPU, 40-ಕೋರ್ GPU, 16-ಕೋರ್ ನ್ಯೂರಲ್ ಎಂಜಿನ್, 128GB ಯುನಿಫೈಡ್​ ಮೆಮೊರಿ ಮತ್ತು 8TB SSD ಸ್ಟೋರೇಜ್​ ಹೊಂದಿದೆ. ನ್ಯಾನೊ-ಟೆಕ್ಸ್ಚರ್ಡ್ ಡಿಸ್​ಪ್ಲೇ ಮತ್ತು ಮೂರು ಥಂಡರ್ಬೋಲ್ಟ್ 5 ಪೋರ್ಟ್‌ಗಳನ್ನು ಒಳಗೊಂಡಿದೆ. ಅಂದಹಾಗೆ, ಇದರ ಬೆಲೆ 7,34,900 ರೂ. ಆಗಿದೆ.

ಎಂ4 ಮ್ಯಾಕ್ಸ್‌ನಲ್ಲಿನ 40-ಕೋರ್ GPU ಎನ್ವಿಡಿಯಾದ RTX 4090, ಅತ್ಯಂತ ಪವರ್​ಫುಲ್​ ಗೇಮಿಂಗ್ GPUನ ಪರ್ಫಾರ್ಮೆನ್ಸ್​ಗೆ ಪ್ರತಿಸ್ಪರ್ಧಿ. ಗೇಮರ್​ಗಳಿಗಿದು ಒಳ್ಳೆಯ ಲ್ಯಾಪ್​ಟಾಪ್​ ಅಲ್ಲ. ಏಕೆಂದರೆ MacOS ಇನ್ನೂ ಅನೇಕ AAA ಗೇಮಿಂಗ್ ಶೀರ್ಷಿಕೆಗಳಿಗೆ ಸಪೋರ್ಟ್​ ಮಾಡುವುದಿಲ್ಲ, ಆದರೂ ಇದು ಕ್ರಮೇಣ ಸುಧಾರಿಸುತ್ತಿದೆ.

ಕಾನ್ಫಿಗರೇಶನ್‌ ಬದಲಾಯಿಸುವ ಮೂಲಕ ಹಣ ಉಳಿತಾಯ: ನಿಮಗೆ ಮ್ಯಾಕ್​ಬುಕ್​ ಪ್ರೋ ದುಬಾರಿಯಾದ್ರೆ ಕಾನ್ಫಿಗರೇಶನ್​ ಬದಲಾಯಿಸುವ ಮೂಲಕ ಹಣ ಉಳಿಸಬಹುದು. ಅಂದರೆ, ಎಂ4 ಮ್ಯಾಕ್ಸ್ ಚಿಪ್, 48GB RAM ಮತ್ತು 1TB ಸ್ಟೋರೇಜ್​ನ 16-ಇಂಚಿನ ಮ್ಯಾಕ್‌ಬುಕ್ ಪ್ರೊ ಬೆಲೆ 4,14,900 ರೂ.ಗೆ ಖರೀದಿಸಬಹುದು. ನ್ಯಾನೊ-ಟೆಕ್ಸ್ಚರ್ಡ್ ಡಿಸ್​ಪ್ಲೇ ಬೇಡವೆಂದಾದಲ್ಲಿ ಬೆಲೆ 3,99,900 ರೂ. ಆಗುತ್ತದೆ.

RAMಗೆ ಆದ್ಯತೆ, ಎಕ್ಸರ್ನಲ್ ಸ್ಟೋರೇಜ್​ ಸೂಕ್ತ: ಮ್ಯಾಕ್‌ಬುಕ್ ಪ್ರೊನಲ್ಲಿನ RAM ಮತ್ತು ಸ್ಟೋರೇಜ್​ ಅಪ್​ಗ್ರೇಡ್ಸ್​ ಬೆಲೆಬಾಳುವವು. ಈ ಯುನಿಟ್​ಗಳು ಬಳಕೆದಾರರಿಗೆ ಅಪ್‌ಗ್ರೇಡ್ ಮಾಡಲಾಗದ ಕಾರಣ RAMಗೆ ಆದ್ಯತೆ ನೀಡುವುದು ಬುದ್ಧಿವಂತಿಕೆ. ಸ್ಟೋರೇಜ್​ಗಾಗಿ ಆ್ಯಪಲ್ ಶುಲ್ಕದ ಒಂದು ಭಾಗದಲ್ಲಿ ವೇಗದ ಡೇಟಾ ವರ್ಗಾವಣೆ ವೇಗವನ್ನು ನೀಡುವ ಬಾಹ್ಯ SSDಗಳನ್ನು ಬಳಸುವುದನ್ನು ಪರಿಗಣಿಸಬೇಕು. ತಡೆರಹಿತ ಬಹುಕಾರ್ಯಕವನ್ನು ಅವಲಂಬಿಸಿರುವ ಡೆವಲಪರ್‌ಗಳು ಮತ್ತು ವಿಡಿಯೋ ಎಡಿಟರ್​ಗಳಿಗೆ RAM ಹೆಚ್ಚು ಮುಖ್ಯವಾಗಿದೆ. ಹೊಸ M4 Mac ಮಿನಿ ಮತ್ತು MacBook Air M2/M3 ಸೇರಿದಂತೆ ಎಲ್ಲಾ ಮ್ಯಾಕ್​ ರೂಪಾಂತರಗಳಲ್ಲಿ ಆ್ಯಪಲ್​ ಈಗ ಕನಿಷ್ಟ 16GB RAM ನೀಡುತ್ತದೆ.

ಇದನ್ನೂ ಓದಿ: ಭಾರತದ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಆಪಲ್​​​ನದ್ದೇ ಅಧಿಪತ್ಯ; ಒನ್​ಪ್ಲಸ್​ಗೆ ನಷ್ಟ; ಐಡಿಸಿ

Last Updated : Nov 18, 2024, 8:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.