Royal Enfield Bikes Sales Report:ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಪ್ರಪಂಚದಾದ್ಯಂತ ಕ್ರೇಜ್ ಇದೆ. ಭಾರತದಲ್ಲೂ ಈ ಬ್ರಾಂಡ್‌ನ ಮೋಟಾರ್‌ಸೈಕಲ್‌ಗಳಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ಕಾರಣದಿಂದಾಗಿ, ಬ್ರಿಟಿಷ್ ವಾಹನ ತಯಾರಕರು 2024 ರಲ್ಲಿ ಭಾರತದಲ್ಲಿ ಅತೀ ಹೆಚ್ಚು ಮಾರಾಟವನ್ನು ಹೊಂದಿದ್ದಾರೆ. ಕಳೆದ ವರ್ಷ ಮಾರಾಟವಾದ ಬೈಕ್‌ಗಳು ತಮ್ಮ ಹಿಂದಿನ ಎಲ್ಲಾ ಮಾರಾಟ ದಾಖಲೆಗಳನ್ನು ಮುರಿದಿವೆ.
ಕಳೆದ ವರ್ಷ ರಾಯಲ್ ಎನ್‌ಫೀಲ್ಡ್ 8,57,378 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು 2023 ರಲ್ಲಿ ಮಾರಾಟವಾದ ಬೈಕ್‌ಗಳಿಗಿಂತ 4 ಪ್ರತಿಶತ ಹೆಚ್ಚು. 2023 ರಲ್ಲಿ ರಾಯಲ್ ಎನ್‌ಫೀಲ್ಡ್‌ನ 8,22,295 ಯುನಿಟ್‌ಗಳು ಮಾರಾಟವಾಗಿದ್ದವು.
ರಾಯಲ್ ಎನ್‌ಫೀಲ್ಡ್‌ನ ಅತಿ ಹೆಚ್ಚು ಮಾರಾಟ: ರಾಯಲ್ ಎನ್‌ಫೀಲ್ಡ್‌ನ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್‌ಗಳು 350 ಸಿಸಿ ಮಾಡೆಲ್. SIAM ಇಂಡಸ್ಟ್ರಿ ಮಾಹಿತಿಯ ಪ್ರಕಾರ, ಏಪ್ರಿಲ್ ಮತ್ತು ನವೆಂಬರ್ 2024 ರ ನಡುವೆ ಕಂಪನಿಯು 5,25,568 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ಏಪ್ರಿಲ್-ನವೆಂಬರ್ 2023 ರಲ್ಲಿ ಮಾರಾಟವಾದ ವಾಹನಗಳಿಗಿಂತ 0.05 ಶೇಕಡಾ ಹೆಚ್ಚು. ಬುಲೆಟ್ 350 ಮತ್ತು ಕ್ಲಾಸಿಕ್ 350 ನಂತಹ ಬೈಕ್‌ಗಳನ್ನು ಈ ವಿಭಾಗದಲ್ಲಿ ಒಳಗೊಂಡಿದೆ.
ಬಜಾಜ್‌ಗಿಂತ ಹಿಂದುಳಿದ ರಾಯಲ್ ಎನ್‌ಫೀಲ್ಡ್ :ಗೆರಿಲ್ಲಾ 450 ಮತ್ತು ಹಿಮಾಲಯನ್ ಸಾಹಸ ಬೈಕ್‌ಗಳನ್ನು ಒಳಗೊಂಡಿರುವ ರಾಯಲ್ ಎನ್‌ಫೀಲ್ಡ್‌ನ 350-500 ಸಿಸಿ ವರ್ಗದ ಕುರಿತು ಮಾತನಾಡುತ್ತಾ, ಈ ವಿಭಾಗದಲ್ಲಿ ಒಟ್ಟು 27,420 ಯುನಿಟ್‌ಗಳು ಮಾರಾಟವಾಗಿವೆ. ಈ ವಿಭಾಗದಲ್ಲಿ ಬಜಾಜ್ ಆಟೋ ಇಡೀ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ.
ಬಜಾಜ್ ಈ ವಿಭಾಗದಲ್ಲಿ 44,491 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ಸಂಪೂರ್ಣ ಮಾರುಕಟ್ಟೆ ಪಾಲಿನ 51 ಪ್ರತಿಶತವಾಗಿದೆ. ಬಜಾಜ್ ಈ ವಿಭಾಗದಲ್ಲಿ 56 ಪ್ರತಿಶತದಷ್ಟು ಬೆಳವಣಿಗೆಯನ್ನು ಸಾಧಿಸಿದೆ. ರಾಯಲ್ ಎನ್‌ಫೀಲ್ಡ್‌ನ 500-800 ಸಿಸಿ ವರ್ಗದ ಕುರಿತು ಮಾತನಾಡುವುದಾದ್ರೆ, ವಾಹನ ತಯಾರಕರು ಈ ವಿಭಾಗದಲ್ಲಿ 33,152 ಯುನಿಟ್‌ಗಳ ಮಾರಾಟವನ್ನು ಶೇಕಡಾ 47 ರಷ್ಟು ಹೆಚ್ಚಿಸಿದ್ದಾರೆ.
ರಾಯಲ್ ಎನ್‌ಫೀಲ್ಡ್ ಅತ್ಯುತ್ತಮ ಮಾರಾಟ: ನಾವು ಕಳೆದ 12 ವರ್ಷಗಳಿಂದ ರಾಯಲ್ ಎನ್‌ಫೀಲ್ಡ್‌ನ ಮಾರಾಟ ವರದಿಯನ್ನು ನೋಡುವುದಾದ್ರೆ, ಕ್ಯಾಲೆಂಡರ್ ವರ್ಷ 2024 ವಾಹನ ತಯಾರಕರು 8 ಲಕ್ಷ ಯುನಿಟ್‌ಗಳ ಮಾರಾಟದ ಅಂಕಿಅಂಶವನ್ನು ಸಾಧಿಸಿದ ಮೂರನೇ ವರ್ಷವಾಗಿದೆ. ಕಂಪನಿಯು 2018 ರ ಅತ್ಯುತ್ತಮ ಮಾರಾಟ ಅಂಕಿಅಂಶಗಳನ್ನು ಸಹ ದಾಟಿದೆ. ರಾಯಲ್ ಎನ್‌ಫೀಲ್ಡ್ CY2024 ರಲ್ಲಿ 8,57,378 ಯುನಿಟ್‌ಗಳನ್ನು ಮಾರಾಟ ಮಾಡಿದೆ. CY2018 ರಲ್ಲಿ, 8,37,669 ಯುನಿಟ್‌ಗಳು ಮಾರಾಟವಾಗಿವೆ.
ಓದಿ:ಕರಡು ಪ್ರಸ್ತಾವನೆ: ಮಕ್ಕಳ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಪೋಷಕರ ಒಪ್ಪಿಗೆ ಕಡ್ಡಾಯ ಎಂದ ಕೇಂದ್ರ ಸರ್ಕಾರ