ಕರ್ನಾಟಕ

karnataka

ETV Bharat / technology

ಪಿಎಂ ಇಂಟರ್ನ್‌ಶಿಪ್ ಯೋಜನೆಗೆ ಚಾಲನೆ: ವಿಜಯದಶಮಿಯಿಂದ ಅರ್ಜಿ ಸಲ್ಲಿಸಬಹುದು, ಯಾರಿಗೆಲ್ಲ ಪ್ರಯೋಜನ? - Prime Minister Internship Scheme - PRIME MINISTER INTERNSHIP SCHEME

Prime Minister Internship Scheme: ಕೇಂದ್ರ ಸರ್ಕಾರವು ಪಿಎಂ ಇಂಟರ್ನ್‌ಶಿಪ್ ಯೋಜನೆಗೆ ಚಾಲನೆ ನೀಡಿದೆ. ಕಂಪನಿಗಳು ನವೆಂಬರ್ 27ರೊಳಗೆ ಅಂತಿಮ ಆಯ್ಕೆಯನ್ನು ಮಾಡಿದ ಬಳಿಕ ಡಿಸೆಂಬರ್​ನಿಂದ 12 ತಿಂಗಳವರೆಗೆ ಇಂಟರ್ನ್‌ಶಿಪ್ ನಡೆಯಲಿದೆ.

1 CRORE INTERNSHIP 2 CRORE JOB  PRIME MINISTER INTERNSHIP PORTAL  PRIME MINISTER INTERNSHIP DETAILS  PRIME MINISTER INTERNSHIP APPLY
ಪಿಎಂ ಇಂಟರ್ನ್‌ಶಿಪ್ ಯೋಜನೆಗೆ ಚಾಲನೆ (IANS)

By ETV Bharat Tech Team

Published : Oct 5, 2024, 1:15 PM IST

Prime Minister Internship Scheme: ಯುವಕರನ್ನು ಉದ್ಯೋಗಶೀಲರನ್ನಾಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಗುರುವಾರ ಪ್ರಾಯೋಗಿಕವಾಗಿ ಪ್ರಧಾನಮಂತ್ರಿ ಇಂಟರ್ನ್​ಶಿಪ್ ಯೋಜನೆಯನ್ನು ಆರಂಭಿಸಿದೆ. ಯೋಜನೆಯಡಿ ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ಯುವಕರು ಮಾಸಿಕ 5,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಪಡೆಯಲಿದ್ದಾರೆ. ಈ ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಬಜೆಟ್​​ನಲ್ಲಿ ಘೋಷಣೆ ಮಾಡಿದ್ದರು.

ಯೋಜನೆಯಡಿಯಲ್ಲಿ ಯುವಕರು ಭಾರತದ ಟಾಪ್ 500 ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಅವಕಾಶ ಪಡೆಯುತ್ತಾರೆ. ಐದು ವರ್ಷಗಳ ಅವಧಿಯಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಯುವಕರಿಗೆ ತಿಂಗಳಿಗೆ 5,000 ರೂ.ಗಳ ಇಂಟರ್ನ್‌ಶಿಪ್ ಭತ್ಯೆ ಮತ್ತು 6,000 ರೂ.ಗಳ ಒಂದು ಬಾರಿಯ ಸಹಾಯವನ್ನು ನೀಡಲಾಗುತ್ತದೆ. ಇಂಟರ್ನ್‌ಶಿಪ್ 12 ತಿಂಗಳವರೆಗೆ ಇರುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 1.25 ಲಕ್ಷ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಯೋಜನೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಯೋಜನೆಗೆ ಸುಮಾರು 800 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಹಲವಾರು ಕಂಪನಿಗಳು ಈ ಯೋಜನೆಯಲ್ಲಿ ಆಸಕ್ತಿ ತೋರಿಸಲು ಪ್ರಾರಂಭಿಸಿವೆ. ಕೆಲವು ದಿನಗಳ ಹಿಂದೆ ಟ್ರಾವೆಲ್ ಬುಕಿಂಗ್ ಪ್ಲಾಟ್‌ಫಾರ್ಮ್ EaseMyTrip ಸರ್ಕಾರದ ಉದ್ದೇಶಿತ ಇಂಟರ್ನ್‌ಶಿಪ್ ಯೋಜನೆಯನ್ನು ಬೆಂಬಲಿಸಲು ಮುಂದಿನ 3-6 ತಿಂಗಳುಗಳಲ್ಲಿ ಭಾರತದಾದ್ಯಂತ 500ಕ್ಕೂ ಹೆಚ್ಚು ಇಂಟರ್ನಿಗಳನ್ನು ನೇಮಿಸಿಕೊಳ್ಳುವುದಾಗಿ ಘೋಷಿಸಿತ್ತು.

ಪೋರ್ಟಲ್ ಅಕ್ಟೋಬರ್ 12ರಿಂದ ಆ್ಯಕ್ಟಿವ್​:

  1. ಕಂಪನಿಗಳು ತಮ್ಮ ಅವಶ್ಯಕತೆಗಳು ಮತ್ತು ಇಂಟರ್ನ್‌ಶಿಪ್ ಪೋಸ್ಟ್‌ಗಳ ಬಗ್ಗೆ ಅಕ್ಟೋಬರ್ 10ರೊಳಗೆ ಮಾಹಿತಿಯನ್ನು ನೀಡುತ್ತವೆ. ಆಸಕ್ತ ಯುವಕರು ಅಕ್ಟೋಬರ್ 12ರ ಮಧ್ಯರಾತ್ರಿಯಿಂದ www.pminternship.mca.gov.in ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಕಂಪನಿಗಳಿಗೆ ಅಕ್ಟೋಬರ್ 26ರೊಳಗೆ ನೀಡಲಾಗುತ್ತದೆ.
  2. ಪೋರ್ಟಲ್ ಅನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದ್ದರೂ, ಇಂಟರ್ನ್‌ಗಳ ಅರ್ಜಿಗಾಗಿ ಪೋರ್ಟಲ್ ತೆರೆಯಲು ಸರ್ಕಾರವು ವಿಜಯದಶಮಿಯ ಶುಭ ದಿನವನ್ನು ಆಯ್ಕೆ ಮಾಡಿದೆ.
  3. ಇಲ್ಲಿಯವರೆಗೆ 111 ಕಂಪನಿಗಳು ಸೇರಿಕೊಂಡಿವೆ ಮತ್ತು ಇವುಗಳಲ್ಲಿ ಮಹಾರಾಷ್ಟ್ರ, ಉತ್ತರಾಖಂಡ, ತೆಲಂಗಾಣ ಮತ್ತು ಗುಜರಾತ್ ರಾಜ್ಯಗಳು ಸೇರಿವೆ.
  4. ವೆಬ್‌ಸೈಟ್‌ನಲ್ಲಿ ಈಗಾಗಲೇ ಕಂಪನಿಗಳು ಉತ್ಪಾದನೆ ಮತ್ತು ನಿರ್ವಹಣೆಗೆ ಸಂಬಂಧಿತ ಖಾಲಿ ಹುದ್ದೆಗಳ ಕುರಿಂತೆ ಮಾಹಿತಿಯನ್ನು ಹಂಚಿಕೊಂಡಿವೆ.
  5. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಪಟ್ಟಿ ಅಕ್ಟೋಬರ್ 26ರವರೆಗೆ ಲಭ್ಯವಿರುತ್ತದೆ. ಕಂಪನಿಗಳು ನವೆಂಬರ್ 27ರೊಳಗೆ ಅಂತಿಮ ಆಯ್ಕೆಯನ್ನು ಮಾಡಲಿವೆ. ಡಿಸೆಂಬರ್ 2, 2024ರಿಂದ 12 ತಿಂಗಳವರೆಗೆ ಇಂಟರ್ನ್‌ಶಿಪ್ ನಡೆಯಲಿದೆ.
  6. ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ಯುವಕರಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ. ಇದರ ಹೊರತಾಗಿ ಕಂಪನಿಗಳು ಆಯ್ಕೆಯಾದ ಅಭ್ಯರ್ಥಿಗೆ ಹೆಚ್ಚುವರಿ ಅಪಘಾತ ವಿಮೆಯನ್ನು ನೀಡಬಹುದು.

ಯೋಜನೆಗೆ ಸಂಬಂಧಿಸಿದ ನಿಯಮಗಳೇನು?: ಯೋಜನೆಯ ಪ್ರಯೋಜನಗಳನ್ನು ಪಡೆಯಲು ಯುವಕರು ಕೆಲವು ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಈ ಮಾನದಂಡವಿಲ್ಲದೆ ಈ ಯೋಜನೆಯ ಲಾಭ ಪಡೆಯುವುದು ಕಷ್ಟ. ಈ ಯೋಜನೆಯಡಿಯಲ್ಲಿ ಇಂಟರ್ನ್‌ನ ವಯಸ್ಸು 21ರಿಂದ 24 ವರ್ಷಗಳ ನಡುವೆ ಇರಬೇಕು. ಅಲ್ಲದೆ, ಅವರ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ. ಮೀರಬಾರದು. ಪ್ರಸ್ತುತ, ಔಪಚಾರಿಕ ಪದವಿ ಕೋರ್ಸ್ ಮಾಡುತ್ತಿರುವ ಅಥವಾ ಕೆಲಸ ಮಾಡುವ ಅಭ್ಯರ್ಥಿಗಳು ಈ ಇಂಟರ್ನ್‌ಶಿಪ್ ಯೋಜನೆಯ ಭಾಗವಾಗಲು ಸಾಧ್ಯವಾಗುವುದಿಲ್ಲ. ಆದರೂ ಈ ಅಭ್ಯರ್ಥಿಗಳು ಆನ್‌ಲೈನ್ ಕೋರ್ಸ್‌ಗಳು ಅಥವಾ ವೃತ್ತಿಪರ ತರಬೇತಿಗೆ ಸೇರಬಹುದು.

ಓದಿ:AI ಮೂಲಕ 1.77 ಕೋಟಿ ಮೊಬೈಲ್ ಸಂಪರ್ಕ ಕಡಿತ, 45 ಲಕ್ಷ ವಂಚನೆ ಕರೆಗಳಿಗೆ ತಡೆ - Mobile Connections Disconnected

ABOUT THE AUTHOR

...view details