Bharat Mobility Global Expo 2025:ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ಗೆ ಭವ್ಯ ವೇದಿಕೆ ಸಿದ್ಧವಾಗಿದೆ. ಈ ಬಾರಿ ಆಟೋ ಎಕ್ಸ್‌ಪೋವನ್ನು ದೆಹಲಿಯ ಪ್ರಗತಿ ಮೈದಾನ, ದ್ವಾರಕಾ ಮತ್ತು ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್ ಮತ್ತು ಮಾರ್ಟ್‌ನಲ್ಲಿ ಆಯೋಜಿಸಲಾಗುತ್ತಿದೆ.
ಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ಇಂದು ಪ್ರಾರಂಭವಾಗಲಿದ್ದು, ದ್ವಿಚಕ್ರ ವಾಹನ, ಪ್ಯಾಸೆಂಜರ್ ವೆಹಿಕಲ್ (ಪಿವಿ) ಮತ್ತು ಕಮರ್ಶಿಯಲ್ ವೆಹಿಕಲ್ (ಸಿವಿ) ವಿಭಾಗಗಳ ಒರಿಜಿನಲ್ ಎಕ್ಯೂಪ್ಮೆಂಟ್ಸ್ ಮ್ಯಾನುಫ್ಯಾಕ್ಚರ್ (ಒಇಎಮ್) ತಮ್ಮಲ್ಲಿರುವ ಮತ್ತು ಮುಂಬರುವ ಉತ್ಪನ್ನಗಳನ್ನು ಹಾಗೂ ಹೊಸ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದ್ದಾರೆ.
ಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ಅನ್ನು ಮೂರು ಸ್ಥಳಗಳಲ್ಲಿ ಆಯೋಜಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾರತ್ ಮಂಟಪದಲ್ಲಿ ಈ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಇಂದು ಮಾಧ್ಯಮ ದಿನ, ನಾಳೆ ಡೀಲರ್ ದಿನ ಮತ್ತು ಅದರ ನಂತರ ಜನವರಿ 19 ರಿಂದ ಜನವರಿ 22 ರವರೆಗೆ ಇದು ಸಾರ್ವಜನಿಕರಿಗೆ ತೆರೆದಿರುತ್ತದೆ.
ಇಂದಿನಿಂದ ಆರಂಭವಾಗುವ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ವಾಹನ ತಯಾರಕರು ಪ್ರದರ್ಶಿಸುವ ಹೊಸ ವಾಹನ ಮಾದರಿಗಳನ್ನು ಸ್ವತಃ ನೋಡಲು ಪ್ರಧಾನಿ ನರೇಂದ್ರ ಮೋದಿ ಉತ್ಸುಕರಾಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.
ಈ ಮೊಬಿಲಿಟಿ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಲಿದ್ದಾರೆ. ಜೊತೆಗೆ ಕಂಪನಿಗಳ (ವಾಹನ) ಮಾದರಿಗಳನ್ನು ವೈಯಕ್ತಿಕವಾಗಿ ನೋಡಲು ಬಯಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈ ಕಾರ್ಯಕ್ರಮವು ದೇಶದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಪ್ರಧಾನ ಮಂತ್ರಿಗಳ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಅಂತಾ ಭಾರೀ ಕೈಗಾರಿಕೆಗಳು ಮತ್ತು ಉಕ್ಕಿನ ಸಚಿವ ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜನವರಿ 17-22 ರಿಂದ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025, ವಾಹನ ತಯಾರಕರಿಂದ ಹಿಡಿದು ಯುನಿಟ್ಸ್, ಎಲೆಕ್ಟ್ರಾನಿಕ್ಸ್ ಪಾರ್ಟ್ಸ್, ಟೈರ್ ಮತ್ತು ಇಂಧನ ಸಂಗ್ರಹ ತಯಾರಕರು ಮತ್ತು ಆಟೋಮೋಟಿವ್ ಸಾಫ್ಟ್‌ವೇರ್ ಸಂಸ್ಥೆಗಳು ಮತ್ತು ವಸ್ತು ಮರುಬಳಕೆದಾರರವರೆಗೆ ಚಲನಶೀಲ ಪರಿಸರ ವ್ಯವಸ್ಥೆಯ ಸಂಪೂರ್ಣ ಮೌಲ್ಯ ಸರಪಳಿಯನ್ನು ಒಂದೇ ಸೂರಿನಡಿ ನೋಡಬಹುದಾಗಿದೆ.
ದ್ವಿಚಕ್ರ ವಾಹನ ವಿಭಾಗವನ್ನು ಹೀರೋ ಮೋಟೋಕಾರ್ಪ್ ಮತ್ತು ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಮುನ್ನಡೆಸಲಿದ್ದು, ಪ್ರಯಾಣಿಕ ವಾಹನ ವಿಭಾಗವನ್ನು ಮಾರುತಿ ಸುಜುಕಿ ಇಂಡಿಯಾ, ಹುಂಡೈ ಮೋಟಾರ್ ಇಂಡಿಯಾ, ಟಾಟಾ ಮೋಟಾರ್ಸ್, ಕಿಯಾ ಇಂಡಿಯಾ, ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ ಮತ್ತು ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಪ್ರತಿನಿಧಿಸಲಿವೆ.