OPPO FIND X8 SERIES: ಒಪ್ಪೋ ಅಕ್ಟೋಬರ್ 24 ರಂದು ಚೀನಾದಲ್ಲಿ ತನ್ನ ಫೈಂಡ್ ಎಕ್ಸ್8 ಸೀರಿಸ್ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿತ್ತು. ಈಗ ಕಂಪನಿಯು ಲೈನ್‌ಅಪ್‌ನ ಜಾಗತಿಕ ಮತ್ತು ಭಾರತದಲ್ಲಿನ ಬಿಡುಗಡೆ ದಿನಾಂಕಗಳನ್ನು ಪ್ರಕಟಿಸಿದೆ.
ಈ ಸ್ಮಾರ್ಟ್‌ಫೋನ್‌ಗಳ ಭಾರತೀಯ ರೂಪಾಂತರಗಳು ಚೈನೀಸ್ ಆವೃತ್ತಿಗಳಿಗೆ ಹೋಲುತ್ತವೆ. ಒಪ್ಪೋ ಫೈಂಡ್ ಎಕ್ಸ್8 ಸೀರಿಸ್ ಜೊತೆಗೆ ಒಪ್ಪೋ ಜಾಗತಿಕ ಮಾರುಕಟ್ಟೆಗೆ Android 15 ಆಧಾರಿತ ColorOS 15 ಅನ್ನು ಸಹ ಅನಾವರಣಗೊಳಿಸಲಿದೆ. ಮಾಹಿತಿಯ ಪ್ರಕಾರ, ಒಪ್ಪೋ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿನ ಈ ಸ್ಮಾರ್ಟ್‌ಫೋನ್‌ಗಳ ಜಾಗತಿಕವಾಗಿ ಬಿಡುಗಡೆಯಾಗುವ ದಿನವನ್ನು ಬಹಿರಂಗ ಪಡಿಸಿದೆ. ಅದೇ ದಿನದಂದೇ ಭಾರತದಲ್ಲಿ ಲೈನ್‌ಅಪ್ ಅನ್ನು ಪ್ರಾರಂಭಿಸಲಾಗುವುದು ಎಂದು ಖಚಿತಪಡಿಸಿದೆ.
ಈ ಎರಡೂ ಸ್ಮಾರ್ಟ್‌ಫೋನ್‌ಗಳು ಇ-ಕಾಮರ್ಸ್ ಸೈಟ್ ಮೂಲಕ ಖರೀದಿಗೆ ಲಭ್ಯವಿರುತ್ತವೆ ಎಂದು ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಬಹಿರಂಗಪಡಿಸಿದೆ. ಒಪ್ಪೋ ಫೈಂಡ್ ಎಕ್ಸ್8 ಮತ್ತು ಒಪ್ಪೋ ಫೈಂಡ್ ಎಕ್ಸ್8 ಪ್ರೋ ಈಗ ಭಾರತದಲ್ಲಿ ಪ್ರಿ-ಬುಕಿಂಗ್‌ಗೆ ಲಭ್ಯವಿದೆ. ಎಐ ವೈಶಿಷ್ಟ್ಯಗಳೊಂದಿಗೆ ಒಪ್ಪೋದ Android 15-ಆಧಾರಿತ ColorOS 15 ಅನ್ನು ನವೆಂಬರ್ 21 ರಂದು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಪ್ರಾರಂಭಿಸಲಾಗುತ್ತಿದೆ.