OnePlus Open 2:ಒನ್ಪ್ಲಸ್ನ ಮುಂದಿನ ಫೋಲ್ಡಬಲ್ ಸ್ಮಾರ್ಟ್‌ಫೋನ್ ಒನ್‌ಪ್ಲಸ್ ಓಪನ್ 2 ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಈ ಫೋನ್‌ನ ಅನೇಕ ಹೊಸ ಮತ್ತು ಅದ್ಭುತವಾದ ವೈಶಿಷ್ಟ್ಯಗಳು ಸೋರಿಕೆಯಾಗಿವೆ. ಒನ್‌ಪ್ಲಸ್ ಓಪನ್ 2 ಹೊಸ ಮತ್ತು ಆಕರ್ಷಕ ವಿನ್ಯಾಸ ಹೊಂದಿರುತ್ತದೆ. ಇದು ಬೃಹತ್, ರೌಂಡ್ ಆಕಾರದ ಕ್ಯಾಮೆರಾ ಮಾಡ್ಯೂಲ್ ಮತ್ತು 10mm ಗಿಂತ ತೆಳುವಾದ ಸ್ಲಿಮ್ ಪ್ರೊಫೈಲ್ ಒಳಗೊಂಡಿದೆಯಂತೆ. ಇದರೊಂದಿಗೆ, ಫೋನ್‌ನ ಹಿಂಭಾಗದಲ್ಲಿರುವ ಕರ್ವ್ಡ್ ಎಡ್ಜ್ಗಳು ಹೆಚ್ಚು ಪ್ರೀಮಿಯಂ ಲುಕ್ ನೀಡಲಿವೆ. ಈ ಬಾರಿ ಒನ್‌ಪ್ಲಸ್ ಓಪನ್ 2 ಅನ್ನು IPX8 ರೇಟಿಂಗ್‌ನೊಂದಿಗೆ ಪ್ರಸ್ತುತಪಡಿಸಲಾಗುತ್ತದೆ. ಇದು ಸಂಪೂರ್ಣವಾಗಿ ವಾಟರ್ಪ್ರೂಫ್ ಹೊಂದಿದೆ. ಇದು ಹಿಂದಿನ ಮಾದರಿಯ IPX4 ರೇಟಿಂಗ್‌ಗಿಂತ ದೊಡ್ಡ ಸುಧಾರಣೆಯಾಗಿದೆ.
ವಿಶೇಷತೆಗಳು:ಒನ್‌ಪ್ಲಸ್ ಓಪನ್ 2 ನಲ್ಲಿ Snapdragon 8 Elite ಪ್ರೊಸೆಸರ್ ಒದಗಿಸಲಾಗುವುದು. ಇದು ಹೆಚ್ಚಿನ ಕಾರ್ಯಕ್ಷಮತೆಯ ಸಾಮರ್ಥ್ಯ ಒದಗಿಸುತ್ತದೆ. ಅಲ್ಲದೇ, ಈ ಸ್ಮಾರ್ಟ್‌ಫೋನ್ 16GB RAM ಮತ್ತು 1TB ವರೆಗೆ ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ. ಇದು ಮುಂದಿನ ವರ್ಷ ಬಿಡುಗಡೆಯಾಗಲಿದೆ.
ಕ್ಯಾಮೆರಾ ಮತ್ತು ಬ್ಯಾಟರಿ:ಒನ್‌ಪ್ಲಸ್ ಓಪನ್ 2 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಎರಡು ಸೆಲ್ಫಿ ಕ್ಯಾಮೆರಾಗಳನ್ನು (32MP ಮತ್ತು 20MP) ಹೊಂದಿರುತ್ತದೆ. ಬ್ಯಾಟರಿಯ ವಿಷಯದಲ್ಲಿ, ಈ ಫೋನ್ 5,900mAh ನ ಪವರ್ಫುಲ್ ಬ್ಯಾಟರಿಯೊಂದಿಗೆ ಬರುತ್ತದೆ. ಇದು 80W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.