Oneplus 13 Series Launched:ಕೊನೆಗೂ ಒನ್ಪ್ಲಸ್ ತನ್ನ ಹೊಸ ಮಾಡೆಲ್ಗಳಾದ OnePlus 13 ಮತ್ತು OnePlus 13R ರಿಲೀಸ್ ಮಾಡಿದೆ. ಕಂಪನಿ ಅನೇಕ ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿ ಅಪ್ಡೇಟ್ನೊಂದಿಗೆ ಈ ಪ್ರೀಮಿಯಂ ರೇಂಜ್ ಅನ್ನು ಪ್ರಾರಂಭಿಸಿದೆ.
ಹೊಸ ಸೀರಿಸ್ನಲ್ಲಿ ಕರ್ವ್ಡ್ ಡಿಸ್‌ಪ್ಲೇ ಅನ್ನು ಫ್ಲಾಟ್ ಡಿಸ್‌ಪ್ಲೇ ಆಗಿ ಬದಲಾಯಿಸಲಾಗಿದೆ. ಕ್ಯಾಮೆರಾ ಬಂಪ್ನ ವಿನ್ಯಾಸವೂ ಸ್ವಲ್ಪಮಟ್ಟಿಗೆ ಬದಲಾಗಿದೆ. ಎಕ್ಸ್‌ಚೇಂಜ್ ಬೋನಸ್, ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್, ನೋ ಕಾಸ್ಟ್ ಇಎಂಐ, ಫ್ರೀ ಪ್ರೊಟೆಕ್ಷನ್ ಪ್ಲಾನ್, ಲೈಫ್ಟೈಂ ವಾರಂಟಿ ಮತ್ತು ಸದಸ್ಯತ್ವದ ವಿಶೇಷ ಪ್ರಯೋಜನಗಳನ್ನು ಮಾರಾಟದಲ್ಲಿ ನೀಡುತ್ತಿದೆ.
OnePlus 13 ವಿಶೇಷತೆಗಳು:6.82 ಇಂಚಿನ BOE X2 2K+ AMOLED ಡಿಸ್‌ಪ್ಲೇ ಹೊಂದಿದೆ. 4,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಸಪೋರ್ಟ್ ಮಾಡುತ್ತದೆ. ಇದರರ್ಥ ನೀವು ಸ್ಕ್ರೀನ್ ವೀಕ್ಷಿಸಲು ಡಾರ್ಕ್ ಸ್ಥಳಗಳು ಬೇಕಾಗಿಲ್ಲ. ಸ್ಕ್ರೀನ್ ಅನ್ನು ಸೂರ್ಯನ ಬೆಳಕಿನಲ್ಲಿಯೂ ಸುಲಭವಾಗಿ ನೋಡಬಹುದಾಗಿದೆ. ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ. ಈ ಸಾಧನವನ್ನು 24GB LPDDR5X RAM ಮತ್ತು 1TB UFS 4.0 ಸ್ಟೋರೇಜ್ನೊಂದಿಗೆ ಪ್ರಾರಂಭಿಸಲಾಗಿದೆ.
ಕ್ಯಾಮೆರಾ ಮತ್ತು ಬ್ಯಾಟರಿ:OnePlus 13 ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. 50MP ಸೋನಿ LYT-808 ಪ್ರಾಥಮಿಕ ಸೆನ್ಸಾರ್, 50MP ಟೆಲಿಫೋಟೋ ಲೆನ್ಸ್ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಫ್ರಂಟ್ ಕ್ಯಾಮೆರಾ ಹೊಂದಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್ ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸ್ ಹೊಂದಿದೆ. 6,000mAh ಬ್ಯಾಟರಿ ಇದರಲ್ಲಿದೆ. 100W SuperVOOC ಸ್ಪೀಡ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.
OnePlus 13R ವಿಶೇಷತೆಗಳು:OnePlus 13R ಈ ಸೀರಿಸ್ನ ಕೈಗೆಟುಕುವ ರೂಪಾಂತರವಾಗಿದೆ. 6.7 ಇಂಚಿನ 8T LTPO AMOLED ಡಿಸ್ಪ್ಲೇಯೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು 4,500 ನಿಟ್ಸ್ ಬ್ರೈಟ್‌ನೆಸ್ ನೀಡುತ್ತದೆ. ಇದು ಪ್ರೊಟೆಕ್ಷನ್ಗಾಗಿ ಒಪ್ಪೊ ಕ್ರಿಸ್ಟಲ್ ಶೀಲ್ಡ್ ಗ್ಲಾಸ್ ಪ್ರೊಟೆಕ್ಷನ್ ಹೊಂದಿದೆ. ಇದು Qualcomm Snapdragon 8 Gen 3 ಪ್ರೊಸೆಸರ್ ಹೊಂದಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಸಹ ಹೊಂದಿದೆ. ಇದರಲ್ಲಿ 50MP ಪ್ರಾಥಮಿಕ ಸೆನ್ಸಾರ್ ಇದೆ.