NRIs Now Use UPI:ಅನಿವಾಸಿ ಭಾರತೀಯರು (NRIs) ಈಗ ತಮ್ಮ ಭಾರತೀಯ ಬ್ಯಾಂಕ್ ಖಾತೆಗಳಿಗೆ ತಮ್ಮ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ಸೇರಿಸಬಹುದು. ಅಷ್ಟೇ ಅಲ್ಲ, ಇದರ ಮೂಲಕ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಬಳಸುವ ಅನುಕೂಲವನ್ನು ಹೊಂದಿದ್ದಾರೆ. ಈ ಹಂತವು ಪಾವತಿ ಪ್ರಕ್ರಿಯೆಗಳನ್ನು ಗಣನೀಯವಾಗಿ ಸರಾಗಗೊಳಿಸುತ್ತದೆ ಮತ್ತು ಎನ್‌ಆರ್‌ಐಗಳು ತಮ್ಮ ತಾಯ್ನಾಡಿನೊಂದಿಗೆ ತಡೆರಹಿತ ಆರ್ಥಿಕ ಸಂಪರ್ಕಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಅಂತಾರಾಷ್ಟ್ರೀಯ ಫೋನ್ ನಂಬರ್ ಅನ್ನು UPI ಜೊತೆ ಆ್ಯಕ್ಟಿವ್ ಮಾಡುವುದು ಹೇಗೆ?:
- ಎನ್‌ಆರ್‌ಐಗಳು ತಮ್ಮ ಅಂತಾರಾಷ್ಟ್ರೀಯ ಮೊಬೈಲ್ ನಂಬರ್ ಅನ್ನು ಭಾರತೀಯ NRE ಅಥವಾ NRO ಖಾತೆಗೆ ಲಿಂಕ್ ಮಾಡಿರಬೇಕು.
- BHIM ಅಥವಾ ಇತರ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಂತಹ UPI-ಹೊಂದಾಣಿಕೆಯ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು.
- ಅಪ್ಲಿಕೇಶನ್‌ನಲ್ಲಿ ಆನ್‌ಬೋರ್ಡಿಂಗ್ ಸೂಚನೆಗಳನ್ನು ಅನುಸರಿಸಿ.
- ಅಂತಾರಾಷ್ಟ್ರೀಯ ಸಂಖ್ಯೆಯನ್ನು ವೆರಿಫೈ ಮಾಡಿ.
- ಅಕೌಂಟ್ಗಾಗಿ ನೀವು UPI ಐಡಿಯನ್ನು ರಚಿಸಿ.
- ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿ ಮತ್ತು ಸಬ್ಮಿಟ್ ಮಾಡಿ.
ಎನ್‌ಆರ್‌ಐಗಳಿಗೆ ಯುಪಿಐ ಹೇಗೆ ಉಪಯೋಗ?
- ಭಾರತೀಯ ಬ್ಯಾಂಕ್ ಖಾತೆಗಳಿಗೆ ಅಥವಾ ಯುಪಿಐ ಐಡಿಗಳಿಗೆ ಭಾರತೀಯ ರೂಪಾಯಿಗಳಲ್ಲಿ ಹಣ ವರ್ಗಾಯಿಸಬಹುದು.
- ಕ್ಯೂಆರ್ ಕೋಡ್‌ಗಳನ್ನು ಬಳಸಿಕೊಂಡು ಸೇವೆಗಳು ಮತ್ತು ಸರಕುಗಳಿಗೆ ಪಾವತಿಸಬಹುದು.
- ಸ್ವೀಕರಿಸುವವರಿಗೆ ಯುಪಿಐ ಐಡಿ ಇಲ್ಲದಿದ್ದರೂ ಸಹ ನೇರ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಹಣ ವರ್ಗಾವಣೆ ಆಗುತ್ತದೆ.
- ವಿವಿಧ ಯುಪಿಐ ಐಡಿಗಳನ್ನು ಬಳಸುವ ಮೂಲಕ ಬಹು ಬ್ಯಾಂಕ್ ಖಾತೆಗಳನ್ನು ನಿರ್ವಹಿಸಬಹುದು.
- ಎನ್‌ಆರ್‌ಐಗಳು ಭಾರತಕ್ಕೆ ಭೇಟಿ ನೀಡಿದಾಗ ರಿ-ರಿಜಿಸ್ಟ್ರೇಷನ್ ಅಗತ್ಯವಿಲ್ಲದೇ ವಹಿವಾಟುಗಳನ್ನು ನಡೆಸಬಹುದು.