ಕರ್ನಾಟಕ

karnataka

ETV Bharat / technology

ನೀವು ನಿಮ್ಮ ಡೇಟಾ ಡಿಲೀಟ್​ ಮಾಡುವ ಅಗತ್ಯವಿಲ್ಲ: ಗೂಗಲ್​ ನೀಡಲಿದೆ 30 ಜಿಬಿ ಉಚಿತ ಕ್ಲೌಡ್ ಸ್ಟೋರೇಜ್ - Google One Lite Plan

Google One Lite Plan: ಗೂಗಲ್ ತನ್ನ ಬಳಕೆದಾರರಿಗಾಗಿ ಹೊಸ ಕ್ಲೌಡ್ ಸ್ಟೋರೇಜ್ ಸೇವೆ ಪರಿಚಯಿಸಿದೆ. ಇದರಲ್ಲಿ ಬಳಕೆದಾರರು ತಮ್ಮ ಶೇಖರಣಾ ಸಾಮರ್ಥ್ಯ ಹೆಚ್ಚಿಸಬಹುದು. ಇದರ ಅಡಿ, ಕಂಪನಿಯು Google One ಕ್ಲೌಡ್ ಸ್ಟೋರೇಜ್ ಚಂದಾದಾರಿಕೆ ಒದಗಿಸುತ್ತದೆ. ಇದು 100GB ಹೆಚ್ಚುವರಿ ಸಂಗ್ರಹಣೆ ಸ್ಥಳವನ್ನು ಒದಗಿಸುತ್ತದೆ. ಈಗ, ಕಂಪನಿಯು ಈ ಸೇವೆಯ ಹೊಸ ಮತ್ತು ಕೈಗೆಟುಕುವ ಆವೃತ್ತಿಯನ್ನು ಪರಿಚಯಿಸಿದೆ. ಇದನ್ನು Google One Lite ಎಂದು ಹೆಸರಿಸಲಾಗಿದೆ.

By ETV Bharat Tech Team

Published : Sep 12, 2024, 4:27 PM IST

GOOGLE ONE LITE  GOOGLE CLOUD STORAGE SERVICE  GOOGLE ONE SERVICE  GOOGLE ONE LITE RATE
30 ಜಿಬಿ ಕ್ಲೌಡ್ ಸ್ಟೋರೇಜ್ ಉಚಿತ ನೀಡಲಿದೆ ಗೂಗಲ್ (ETV Bharat)

Google One Lite Plan:ಡಿಜಿಟಲ್ ಯುಗದಲ್ಲಿ ಡೇಟಾ ಸ್ಟೋರೇಜ್​ ಪ್ರಾಮುಖ್ಯತೆಯು ಇನ್ನಷ್ಟು ವೇಗವಾಗಿ ಹೆಚ್ಚುತ್ತಿದೆ. ನಾವು ಪ್ರತಿದಿನ ನಮ್ಮ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಸಾಧನಗಳಲ್ಲಿ ಹಲವಾರು ಫೋಟೋಗಳು, ವಿಡಿಯೋಗಳು, ಡಾಕ್ಯುಮೆಂಟ್‌ಗಳು ಮತ್ತು ಫೈಲ್‌ಗಳನ್ನು ಸಂಗ್ರಹಿಸುವುದು ಸಾಮಾನ್ಯ. ಆದರೆ, ಇದರಿಂದಾಗಿ ಸಾಧನದ ಸ್ಟೋರೇಜ್​ ಈ ಎಲ್ಲ ಫೈಲ್‌ಗಳಿಂದ ತುಂಬಿರುತ್ತದೆ. ಆಗ ನಾವು ಕೆಲವೊಂದು ಫೈಲ್​ಗಳು ಸಂಗ್ರಹಿಸುವುದರ ಸಲುವಾಗಿ ಕೆಲ ಫೈಲ್‌ಗಳನ್ನು ಡಿಲೀಟ್​ ಮಾಡುವ ಸ್ಥಿತಿ ಎದುರಾಗುವುದು ಸಾಮಾನ್ಯ.

ನೀವು Android ಬಳಕೆದಾರರಾಗಿದ್ದರೆ Google ನ ಕ್ಲೌಡ್ ಸ್ಟೋರೇಜ್ ಸೇವೆಯ ಬಗ್ಗೆ ನಿಮಗೆ ತಿಳಿದಿರಬಹುದು. ಕಂಪನಿಯು Google One ಎಂಬ ಸೇವೆಯನ್ನು ಒದಗಿಸುತ್ತದೆ. ಇದರ ಅಡಿ ಬಳಕೆದಾರರು ತಿಂಗಳಿಗೆ Rs 130 ಶುಲ್ಕದಲ್ಲಿ ಚಂದಾದಾರಿಕೆಯನ್ನು ತೆಗೆದುಕೊಳ್ಳುತ್ತಿದೆ. ಈಗ ಕಂಪನಿಯು ಅದರ ಲೈಟ್ ಆವೃತ್ತಿ ಪರಿಚಯಿಸಿದೆ. ಇದನ್ನು ಗೂಗಲ್ ಒನ್ ಲೈಟ್ ಎಂದು ಕರೆಯಲಾಗುತ್ತಿದೆ. ಈ ಹೊಸ ಯೋಜನೆಯು ಮೂಲ ಯೋಜನೆಗಿಂತ ಹೆಚ್ಚು ಅಗ್ಗವಾಗಿದೆ.

ಕಂಪನಿಯು Google One Lite ನ ಬೆಲೆಯನ್ನು ತಿಂಗಳಿಗೆ 59 ರೂ. ನೀಡುತ್ತಿದೆ. ಈ ಯೋಜನೆಯಡಿ ಬಳಕೆದಾರರು ಪ್ರತಿ ತಿಂಗಳು 30GB ಸ್ಟೋರೇಜ್ ಪಡೆಯುತ್ತಾರೆ. ಅಂದರೆ ಬಳಕೆದಾರರಿಗೆ Google ನ ಉಚಿತ 15GB ಸ್ಟೋರೇಜ್​​​ಗಿಂತ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿದ್ದರೆ ಅವರು ತಿಂಗಳಿಗೆ 130 ರೂಗಳನ್ನು ಖರ್ಚು ಮಾಡುವ ಬದಲು ಈಗ ಕೇವಲ 59 ರೂಗಳಲ್ಲಿ 30 GB ಸ್ಟೋರೇಜ್​ ಪಡೆಯಬಹುದು. ಆದರೆ, ಪ್ರಸ್ತುತ ಈ ಯೋಜನೆಯು ಸೀಮಿತ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಕಂಪನಿಯು ಇದನ್ನು ಯೋಜನೆಯನ್ನು ಆದಷ್ಟು ಬೇಗ ವಿಸ್ತರಿಸಲಿದೆ.

Google One Lite ಯೋಜನೆಯನ್ನು ಮೊದಲು ಜುಲೈನಲ್ಲಿ Google ಫೋಟೋಗಳ ಅಪ್ಲಿಕೇಶನ್‌ನಲ್ಲಿ ಕಂಡು ಬಂದಿತ್ತು. ಈ ಯೋಜನೆಯಡಿ ಲಭ್ಯವಿರುವ 30GB ಸ್ಟೋರೇಜ್​ ಅನ್ನು Gmail, ಫೋಟೋಗಳು ಮತ್ತು ಡ್ರೈವ್‌ಗಾಗಿ ಬಳಸಬಹುದು. ಒಂದು ಪ್ರಮುಖ ವಿಷಯವೆಂದರೆ ಈ ಯೋಜನೆಯನ್ನು ಬೇರೆ ಯಾವುದೇ ಬಳಕೆದಾರರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ಈ ಸೌಲಭ್ಯವು 30 GB ಯೋಜನೆಯಲ್ಲಿ ಲಭ್ಯವಿಲ್ಲ.

ಈ ಯೋಜನೆಯೊಂದಿಗೆ ಒಂದು ತಿಂಗಳ ಪ್ರಾಯೋಗಿಕ ಅವಧಿಯನ್ನು ಸಹ ಒದಗಿಸಲಾಗಿದೆ. ಪ್ರಸ್ತುತ, Google One Lite ಯೋಜನೆಗೆ ಯಾವುದೇ ವಾರ್ಷಿಕ ಚಂದಾದಾರಿಕೆ ಬಗ್ಗೆ ಮಾಹಿತಿ ಲಭ್ಯವಿಲ್ಲ, ಆದರೆ, ಇತರ ಯೋಜನೆಗಳು ವಾರ್ಷಿಕ ಆಯ್ಕೆಗಳೊಂದಿಗೆ ಹೊರ ತರಲಾಗಿದೆ.

ಓದಿ:ಪ್ರಿಪೇಯ್ಡ್​-ಪೋಸ್ಟ್​ಪೇಯ್ಡ್​ ಕನೆಕ್ಷನ್​ ಬಗ್ಗೆ ನಿಮಗೆಷ್ಟು ಗೊತ್ತು, ಇದರಲ್ಲಿ ಯಾವ ಯೋಜನೆ ಬೆಸ್ಟ್? - Prepaid vs Postpaid

ABOUT THE AUTHOR

...view details