ETV Bharat / technology

ಮಾರುಕಟ್ಟೆಯಲ್ಲಿ ಮಹೀಂದ್ರ ಥಾರ್ 'ರಾಕ್ಸ್' - ಗಂಟೆಯೊಳಗೆ 1.76 ಲಕ್ಷಕ್ಕೂ ಹೆಚ್ಚು ಬು‘ಕಿಂಗ್’! - Mahindra Thar ROXX Bookings

Mahindra Thar ROXX Bookings: ಹೊಸದಾಗಿ ಬಿಡುಗಡೆಯಾದ ಮಹೀಂದ್ರ ಥಾರ್ ರಾಕ್ಸ್ ಬುಕಿಂಗ್‌ನಲ್ಲಿ ಗಗನಕ್ಕೇರುತ್ತಿದೆ. ಗುರುವಾರದಿಂದ ಈ ಕಾರಿನ ಬುಕಿಂಗ್​​​ ಆರಂಭವಾಗಿದೆ.. ಒಂದು ಗಂಟೆಯೊಳಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಬುಕಿಂಗ್​ಗಳು ನೋಂದಣಿಯಾಗಿವೆ.

MAHINDRA THAR ROXX PRICE  MAHINDRA THAR ROXX FEATURES  MAHINDRA THAR ROXX BOOKING OPEN  MAHINDRA THAR ROXX RATE
ಮಾರುಕಟ್ಟೆಯಲ್ಲಿ ಮಹೀಂದ್ರ ಥಾರ್ 'ರಾಕ್ಸ್' (Mahindra)
author img

By ETV Bharat Tech Team

Published : Oct 4, 2024, 1:08 PM IST

Mahindra Thar ROXX Bookings: ಆಟೋಮೊಬೈಲ್ ಕಂಪನಿ ಮಹೀಂದ್ರಾ ಮತ್ತು ಮಹೀಂದ್ರಾ ಹೊಸದಾಗಿ ಬಿಡುಗಡೆ ಮಾಡಿದ ಮಹೀಂದ್ರ ಥಾರ್ ರಾಕ್ಸ್ ಬುಕಿಂಗ್‌ನಲ್ಲಿ ಗಗನಕ್ಕೇರುತ್ತಿದೆ. ಒಂದು ಗಂಟೆಯೊಳಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಬುಕಿಂಗ್‌ಗಳು ದಾಖಲಾಗಿವೆ ಎಂದು ಕಂಪನಿ ತಿಳಿಸಿದೆ. 5 ಬಾಗಿಲುಗಳನ್ನು ಹೊಂದಿರುವ ಈ ಥಾರ್ ರಾಕ್ಸ್ ಬಿಡುಗಡೆಯಾದಾಗಿನಿಂದ ಮಾರುಕಟ್ಟೆಯಲ್ಲಿ ಉತ್ತಮ ಕ್ರೇಜ್ ಗಳಿಸಿದೆ.

ಈ ಹಿಂದೆ ಅಕ್ಟೋಬರ್ 3 ರಿಂದ ಬುಕಿಂಗ್ ಪ್ರಾರಂಭವಾಗಲಿದೆ ಎಂದು ಮಹೀಂದ್ರಾ ಬಹಿರಂಗಪಡಿಸಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 11 ಗಂಟೆಯಿಂದ ಇವುಗಳ ಬುಕಿಂಗ್​ ಪ್ರಕ್ರಿಯೆ ಆರಂಭವಾಗಿತ್ತು. ಪ್ರಾರಂಭವಾದ ಒಂದು ಗಂಟೆಯೊಳಗೆ 1,76,218 ಬುಕಿಂಗ್​ಗಳನ್ನು ಪಡೆದುಕೊಂಡಿದೆ. ಕಂಪನಿಯು ತನ್ನ ವಿನಿಮಯ ಫೈಲಿಂಗ್‌ನಲ್ಲಿ ಇದನ್ನು ಬಹಿರಂಗಪಡಿಸಿದೆ. ಹೊಸ ಥಾರ್ ರಾಕ್ಸ್‌ಗೆ ಗ್ರಾಹಕರ ಪ್ರತಿಕ್ರಿಯೆಯಿಂದ ಮಹೀಂದ್ರಾ ಸಂತೋಷವಾಗಿದೆ. ಥಾರ್ ರಾಕ್ಸ್‌ನ ವಿತರಣೆಯ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಕಂಪನಿಯು ಪ್ರಕಟಿಸಿದೆ.

ಮಹೀಂದ್ರ ಥಾರ್ ರಾಕ್ಸ್ ರೂಪಾಂತರಗಳು:

  • ಈ ಮಹೀಂದ್ರಾ 5 - ಬಾಗಿಲಿನ ಥಾರ್ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ಲಭ್ಯವಿದೆ.
  • ಹೊಸ ಥಾರ್ ರಾಕ್ಸ್ 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಅದು 160 bhp ಪವರ್ ಮತ್ತು 330 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
  • 2.2 ಲೀಟರ್ mHawk ಡೀಸೆಲ್ ಎಂಜಿನ್ 150 bhp ಪವರ್ ಮತ್ತು 330 mm ಟಾರ್ಕ್ ಉತ್ಪಾದಿಸುತ್ತದೆ.
  • ಈ ಎರಡೂ ಎಂಜಿನ್‌ಗಳು ಸ್ವಯಂಚಾಲಿತ ಗೇರ್ ಬಾಕ್ಸ್ ಮತ್ತು ಆರು - ವೇಗದ ಮ್ಯಾನುವಲ್​ನೊಂದಿಗೆ ಬರುತ್ತವೆ.

ಇದರ ವಿಶೇಷತೆ ಹೀಗಿದೆ:

  • ಈ ಥಾರ್ ರಾಕ್ಸ್ ಅನ್ನು ಅತ್ಯಂತ ಭದ್ರತಾ ವೈಶಿಷ್ಟ್ಯಗಳೊಂದಿಗೆ ತಂದಿರುವುದಾಗಿ ಕಂಪನಿ ಬಹಿರಂಗಪಡಿಸಿದೆ.
  • ಮಹೀಂದ್ರಾ ಥಾರ್ ರಾಕ್ಸ್ ಅನ್ನು 35 ಗುಣಮಟ್ಟದ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ತಂದಿದೆ.
  • ಥಾರ್ ರಾಕ್ಸ್ ಆರು ಏರ್‌ಬ್ಯಾಗ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ ಹೊಂದಿದೆ.
  • ಇದು ಲೇನ್ ಕೀಪ್ ಅಸಿಸ್ಟೆಂಟ್ ಮತ್ತು ಅಡಾಪ್ಟಿವ್ ಕ್ರೂಸ್‌ನಂತಹ ಸುಧಾರಿತ ಚಾಲಕ ಸಹಾಯಕ ವ್ಯವಸ್ಥೆಗಳೊಂದಿಗೆ ಬರುತ್ತದೆ.
  • ಇದು ಆರು ಡಬಲ್ ಸ್ಟಾಕ್ಡ್ ಸ್ಲಾಟ್‌ಗಳು ಮತ್ತು LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.
  • ಹಿಂಭಾಗವು ಸೀ-ಶೇಪ್ಡ್​ ಎಲ್ಇಡಿ ಟೈಲ್ಲೈಟ್​ಗಳು ಮತ್ತು ಟೈಲ್ಗೇಟ್-ಮೌಂಟೆಡ್ ಸ್ಪೇರ್ ವೀಲ್ ಪಡೆಯುತ್ತದೆ.
  • ಇದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ.
  • ಈ ಮಹೀಂದ್ರ ಥಾರ್ ರಾಕ್ಸ್ Apple CarPlay ಮತ್ತು Android Auto ಅನ್ನು ಸಪೋರ್ಟ್​ ಮಾಡುತ್ತದೆ.

ಮಹೀಂದ್ರ ಥಾರ್ ರಾಕ್ಸ್‌ನ ಇತರ ವೈಶಿಷ್ಟ್ಯಗಳು:

  • ಚಾಲಿತ ಆಸನಗಳು
  • ಎರಡು ಸನ್‌ರೂಫ್ ಆಪ್ಷನ್​
  • ಕನೆಕ್ಟಡ್​ ಕಾರು ಟೆಕ್​
  • ಲೆವೆಲ್​-2 ADAS
  • ಅಕೌಸ್ಟಿಕ್ ಗ್ಲಾಸೆಸ್​
  • 9-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್
  • 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ

ಮಹೀಂದ್ರ ಥಾರ್ ರಾಕ್ಸ್ ಬೆಲೆಗಳು:

  • ಪೆಟ್ರೋಲ್ ಬೇಸಿಕ್ ವೆರಿಯಂಟ್ ಬೆಲೆ: ರೂ 12.99 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ).
  • ಡೀಸೆಲ್ ಆವೃತ್ತಿಯ ಬೆಲೆ: ರೂ.13.99 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ).

ಓದಿ: ಜನ್​ ಧನ್​ ಯೋಜನೆ: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ದ್ವಿಚಕ್ರ ವಾಹನಗಳ ಮಾರಾಟ - Two Wheeler Sales Increase In Rural

ETV Bharat Logo

Copyright © 2024 Ushodaya Enterprises Pvt. Ltd., All Rights Reserved.