X Update Block Features:ಎಲೋನ್ ಮಸ್ಕ್ ಒಡೆತನದ ಎಕ್ಸ್ ಸಾಮಾಜಿಕ ಜಾಲತಾಣ ವೇದಿಕೆ ಹೊಸ ಅಪ್ಡೇಟ್ ಒದಗಿಸಿದೆ. ಇದರಿಂದಾಗಿ ಇನ್ಮುಂದೆ ನೀವು ಬ್ಲಾಕ್ ಮಾಡಿದ ವ್ಯಕ್ತಿ ನಿಮ್ಮ ಪಬ್ಲಿಕ್ ಪೋಸ್ಟ್ ಅನ್ನು ನೋಡಬಹುದು. ಆದರೆ ಇದಕ್ಕೆ ಕೆಲವು ನಿಯಮಗಳಿವೆ.
ನಾವು ಬ್ಲಾಕ್ ಫಂಕ್ಷನ್ ಅನ್ನು ಅಪ್ಡೇಟ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಎಕ್ಸ್ ಮಾರ್ಗಸೂಚಿ ಪ್ರಕಾರ, ಹೊಸ ಅಪ್ಡೇಟ್ನಿಂದ ನೀವು ಬ್ಲಾಕ್ ಮಾಡಿದ ವ್ಯಕ್ತಿ ನಿಮ್ಮ ಪಬ್ಲಿಕ್ ಪೋಸ್ಟ್ ಅನ್ನು ಮಾತ್ರ ನೋಡಬಹುದು. ಆದ್ರೆ ಅವರು ನಿಮ್ಮ ಪೋಸ್ಟ್ಗೆ ಲೈಕ್, ರಿಪ್ಲೈ ಅಥವಾ ರಿಪೋಸ್ಟ್ ಮಾಡಲು ಸಾಧ್ಯವಿಲ್ಲ ಎಂದು ಎಕ್ಸ್ ತಿಳಿಸಿದೆ.
ಇತರೆ ಖಾತೆಗಳೊಂದಿಗೆ ನೀವು ಹೇಗೆ ಸಂವಹ ನಡೆಸುತ್ತೀರಿ ಎಂಬುದನ್ನು ನಿಯಂತ್ರಿಸಲು ಬ್ಲಾಕ್ ವೈಶಿಷ್ಟ್ಯ ನಿಮಗೆ ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯ ಬ್ಲಾಕ್ ಖಾತೆಗಳಿಂದ ನಿಮಗೆ ಡೈರೆಕ್ಟ್ ಮೆಸೇಜ್ ಬರುವುದು, ಅವರು ನಿಮ್ಮೊಂದಿಗೆ ಎಂಗೇಜ್ ಆಗುವುದನ್ನು ತಡೆಯಲು ನೆರವಾಗುತ್ತದೆ.
ನಿಮ್ಮ ಪಬ್ಲಿಕ್ ಪೋಸ್ಟ್‌ಗಳನ್ನು ಬ್ಲಾಕ್ ಮಾಡಿರುವ ವ್ಯಕ್ತಿಗಳು ನೋಡದಂತೆ ತಡೆಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಟೆಕ್ ಬಿಲಿಯನೇರ್ ಈ ಹಿಂದೆ ಹೇಳಿದ್ದರು. ಈಗ, ಎಕ್ಸ್ ತನ್ನ ವಿವಾದಾತ್ಮಕ ಬ್ಲಾಕ್ ವೈಶಿಷ್ಟ್ಯವನ್ನೇ ಅಪ್ಡೇಟ್ ಮಾಡುತ್ತಿದೆ. ಈ ಅಪ್ಡೇಟ್ನಿಂದಾಗಿ ನೀವು ಬ್ಲಾಕ್ ಮಾಡಿದ ವ್ಯಕ್ತಿಯೂ ಸಹ ನಿಮ್ಮ ಪಬ್ಲಿಕ್ ಪೋಸ್ಟ್‌ಗಳನ್ನು ನೋಡಲು ಅನುಮತಿಸುತ್ತಿದೆ.
ಇದರಿಂದ ನೀವು ಬ್ಲಾಕ್ ಮಾಡಿದ ಖಾತೆಗಳು ನಿಮ್ಮನ್ನು ಫಾಲೋ ಮಾಡಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ, ನೀವೂ ಸಹ ಆ ಬ್ಲಾಕ್ ಮಾಡಿದ ವ್ಯಕ್ತಿಯನ್ನು ಫಾಲೋ ಮಾಡಲಾಗದು. ನೀವು ಪ್ರಸ್ತುತ ಫಾಲೋ ಮಾಡುತ್ತಿರುವ ಖಾತೆಯನ್ನು ಬ್ಲಾಕ್ ಮಾಡುವುದರಿಂದ ಆ ಖಾತೆಯನ್ನು ಅನ್‌ಫಾಲೋ ಮಾಡದಂತಾಗುತ್ತದೆ. ಒಂದು ವೇಳೆ ನೀವು ಆ ಖಾತೆಯನ್ನು ಅನ್ಬ್ಲಾಕ್ ಮಾಡಲು ನಿರ್ಧರಿಸಿದರೆ, ಮತ್ತೆ ಆ ಖಾತೆಯನ್ನು ಫಾಲೋ ಮಾಡಬೇಕಾಗುತ್ತದೆ ಎಂದು ಎಕ್ಸ್ ಮಾಹಿತಿ ನೀಡಿದೆ.
ಇತರರಿಂದ ಹಾನಿಕಾರಕ/ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳಲು/ಮರೆಮಾಡಲು ಬ್ಲಾಕ್ ವೈಶಿಷ್ಟ್ಯವನ್ನು ಬಳಸಬಹುದು ಎಂದು ತಿಳಿಸಿದೆ. ಆದರೆ, ಜನರು ಈ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಿಮ್ಮ iPhone 14 Plus ಕ್ಯಾಮೆರಾದಲ್ಲಿ ದೋಷವಿದೆಯೇ?: ಆ್ಯಪಲ್ನಿಂದ ಫ್ರೀ ಸರ್ವೀಸ್ ಘೋಷಣೆ