Ducati DesertX Discovery Motorcycle: ಆಫ್-ರೋಡಿಂಗ್ ಬೈಕ್‌ಗಳನ್ನು ಇಷ್ಟಪಡುವವರಿಗೆ ಡುಕಾಟಿ ಸಿಹಿ ಸುದ್ದಿ ನೀಡಿದೆ. ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಡೆಸರ್ಟ್‌ಎಕ್ಸ್ ಡಿಸ್ಕವರಿ ಬೈಕ್ ಪರಿಚಯಿಸಿದೆ.
ಈ ಸಾಹಸ ಪ್ರವಾಸಿ ಬೈಕ್ ಸ್ಟ್ಯಾಂಡರ್ಡ್ ಮತ್ತು ರ್ಯಾಲಿ ಡೆಸರ್ಟ್‌ಎಕ್ಸ್ ಲೈನ್‌ಅಪ್ ನಡುವೆ ಇದೆ. ಇದಲ್ಲದೆ ಡೆಸರ್ಟ್‌ಎಕ್ಸ್ ಡಿಸ್ಕವರಿ ಬೈಕ್ ಸ್ಟ್ಯಾಂಡರ್ಡ್ ರೂಪಾಂತರಕ್ಕಿಂತ ಹೆಚ್ಚುವರಿ ಟೂಲ್ಸ್ ಮತ್ತು ಹೊಸ ಬಣ್ಣದ ಸಂಯೋಜನೆಯನ್ನು ಹೊಂದಿದೆ. ಇದು ಪ್ರೀಮಿಯಂ ವೆಚ್ಚದಲ್ಲಿ ಹೆಚ್ಚು ಪ್ರವಾಸ ಮತ್ತು ಆಫ್-ರೋಡಿಂಗ್‌ಸ್ನೇಹಿಯಾಗಿದ್ದು, ಭಾರತದಾದ್ಯಂತ ಎಲ್ಲಾ ಡುಕಾಟಿ ಡೀಲರ್‌ಶಿಪ್‌ಗಳಲ್ಲಿ ಲಭ್ಯ.
From alpine roads to dirt tracks, the #DesertXDiscovery adapts effortlessly with its nimble chassis, long-travel suspension, and triple tyre options.
— Ducati India (@Ducati_India) February 25, 2025
Launched in India at an Ex-Showroom price of INR 21,78,200
One bike. Endless possibilities. pic.twitter.com/MKVhfTaQQe
ಡೆಸರ್ಟ್‌ಎಕ್ಸ್ ಡಿಸ್ಕವರಿ ಹೆಚ್ಚು ಸಾಹಸಮಯ ಮತ್ತು ಆಫ್-ರೋಡ್‌ಸ್ನೇಹಿಯಾಗಲು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಮೂಡಿಬಂದಿದೆ. ಇದರ ಬೆಲೆ 21.78 ಲಕ್ಷ ರೂ (ಎಕ್ಸ್-ಶೋರೂಂ).
ವೈಶಿಷ್ಟ್ಯಗಳು: ಬುಲ್‌ಬಾರ್ ಪ್ರೊಟೆಕ್ಷನ್, ಎಂಜಿನ್ ಗಾರ್ಡ್ ಪ್ಲೇಟ್ ಮತ್ತು ರಕ್ಷಣಾತ್ಮಕ ರೇಡಿಯೇಟರ್ ಗ್ರಿಲ್‌ನಂತಹ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳಿವೆ. ಹೆಚ್ಚಿನ ಅನುಕೂಲತೆ ಮತ್ತು ಹೆಚ್ಚುವರಿ ಸೌಕರ್ಯಕ್ಕಾಗಿ ಮೋಟಾರ್‌ಸೈಕಲ್ ಹೀಟ್ ಹ್ಯಾಂಡ್ ಗ್ರಿಪ್‌ಗಳು, ಟೂರಿಂಗ್ ವಿಂಡ್‌ಸ್ಕ್ರೀನ್, ಡುಕಾಟಿ ಲಿಂಕ್ ಅಪ್ಲಿಕೇಶನ್‌ನೊಂದಿಗೆ ಸ್ಮಾರ್ಟ್‌ಫೋನ್ ಅನ್ನು ಜೋಡಿಸಿದ ನಂತರ ಡ್ಯಾಶ್‌ನಲ್ಲಿ ಪ್ರದರ್ಶಿಸಲಾದ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮತ್ತು ಸ್ಥಿರತೆ, ಪರಿಕರಗಳಿಗೆ ಪ್ರವೇಶ ಮತ್ತು ನಿರ್ವಹಣೆಯ ಸಮಯದಲ್ಲಿ ಅನುಕೂಲತೆಯನ್ನು ಖಾತ್ರಿಪಡಿಸುವ ಸೆಂಟರ್ ಸ್ಟ್ಯಾಂಡ್ ಇದೆ. ಇದಲ್ಲದೇ,
- 5-ಇಂಚಿನ TFT ಡಿಸ್ಪ್ಲೇ
- ಟರ್ನ್-ಬೈ-ಟರ್ನ್ ನ್ಯಾವಿಗೇಷನ್
- ಕಾಲ್ ಮತ್ತು ಮೆಸೇಜ್ಗಳ ಅಲರ್ಟ್
- ಡುಕಾಟಿ ಲಿಂಕ್ ಅಪ್ಲಿಕೇಶನ್ ಮೂಲಕ ಮ್ಯೂಸಿಕ್ ಕಂಟ್ರೋಲ್ನಂತಹ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ
- ಟೂರಿಂಗ್, ಸ್ಪೋರ್ಟ್, ವೆಟ್, ಅರ್ಬನ್, ಎಂಡ್ಯೂರೋ ಮತ್ತು ರ್ಯಾಲಿ ಎಂಬ ಆರು ರೈಡಿಂಗ್ ಮೋಡ್‌ಗಳಿವೆ. ಪ್ರತಿ ಮೋಡ್ ಅನ್ನು ಎಂಜಿನ್ ಮ್ಯಾಪ್ಸ್, ಥ್ರೊಟಲ್ ರಿಯಾಕ್ಷನ್ ಮತ್ತು ABS ಮತ್ತು ಟ್ರಾಕ್ಷನ್ ಕಂಟ್ರೋಲ್ ಇಂಟರ್ವೆನ್ಟೆಶನ್ ಲೇವೆಲ್ಸ್ಗೆ ಕಸ್ಟಮೈಸ್ ಮಾಡಬಹುದು.
- ಮೂರು ಹಂತದ ಕಾರ್ನರಿಂಗ್ ABS, ವೀಲ್ ಕಂಟ್ರೋಲ್, ಎಂಜಿನ್ ಬ್ರೇಕಿಂಗ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸೆಲ್ಫ್-ಕ್ಯಾನ್ಸಲಿಂಗ್ ಇಂಡಿಕೆಟರ್ಸ್, ಸ್ಟೀರಿಂಗ್ ಡ್ಯಾಂಪರ್, USB ಚಾರ್ಜಿಂಗ್ ಪೋರ್ಟ್ ಅಳವಡಿಸಲಾಗಿದೆ.
ಬಣ್ಣ: ಡುಕಾಟಿ ಡೆಸರ್ಟ್‌ಎಕ್ಸ್ ಡಿಸ್ಕವರಿ ಆಕರ್ಷಕ ಬ್ಲ್ಯಾಕ್ ಮತ್ತು ಡುಕಾಟಿ ರೆಡ್ ಬಣ್ಣದಲ್ಲಿ ಮಾರಾಟಕ್ಕೆ ದೊರೆಯುತ್ತಿದೆ.
ಇನ್ನು, ಡುಕಾಟಿ ಡೆಸರ್ಟ್‌ಎಕ್ಸ್ ಡಿಸ್ಕವರಿ ಯಾಂತ್ರಿಕವಾಗಿ ಒಂದೇ ಆಗಿರುತ್ತದೆ. ಇದು 937 ಸಿಸಿ, ಲಿಕ್ವಿಡ್-ಕೂಲ್ಡ್ ಟೆಸ್ಟಾಸ್ಟ್ರೆಟ್ಟಾ ಎಂಜಿನ್‌ನೊಂದಿಗೆ ಆರು-ವೇಗದ ಗೇರ್‌ಬಾಕ್ಸ್‌ನೊಂದಿಗೆ ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್‌ಗಳೊಂದಿಗೆ ಬರುತ್ತದೆ. ಎಂಜಿನ್ 9,250 ಆರ್‌ಪಿಎಂನಲ್ಲಿ 108.4 ಬಿಎಚ್‌ಪಿ ಪವರ್ ಔಟ್‌ಪುಟ್ ಮತ್ತು 6,500 ಆರ್‌ಪಿಎಂನಲ್ಲಿ 92 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಇದಲ್ಲದೆ ಈ ಬೈಕ್ ಕೆವೈಬಿ ಅಪ್‌ಸೈಡ್-ಡೌನ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಕೆವೈಬಿ ಮೊನೊ ಶಾಕ್ ಹೊಂದಿದೆ. ಎರಡೂ ಫುಲ್ ಅಡ್ಜೆಸ್ಟ್ ಮಾಡಬಹುದಾಗಿದೆ. ಬ್ರೇಕ್ ಬಗ್ಗೆ ಹೇಳುವುದಾದರೆ, ಫ್ರಂಟ್ನಲ್ಲಿ ಟ್ವಿನ್ 320 ಎಂಎಂ ಡಿಸ್ಕ್‌ಗಳು ಮತ್ತು ರಿಯರ್ನಲ್ಲಿ ಸಿಂಗಲ್ 256 ಎಂಎಂ ಡಿಸ್ಕ್ ಕಾರ್ಯ ನಿರ್ವಹಿಸುತ್ತದೆ. ಇದನ್ನು 21 ಇಂಚಿನ ಮುಂಭಾಗ ಮತ್ತು 18 ಇಂಚಿನ ಹಿಂಭಾಗದ ಟ್ಯೂಬ್‌ಲೆಸ್ ವೀಲ್ಗಳಿಗೆ ಜೋಡಿಸಲಾಗಿದೆ. ಬೈಕ್ 21 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ ಮತ್ತು 210 ಕೆ.ಜಿ ಕರ್ಬ್ ತೂಗುತ್ತದೆ.
ಇದನ್ನೂ ಓದಿ: ಸೋಲಾರ್ ಪ್ಯಾನೆಲ್ ಅಳವಡಿಕೆ: ಸೌರಶಕ್ತಿಗೆ ಸರ್ಕಾರದ ಕೆಲ ಯೋಜನೆಗಳೇ ಅಡ್ಡಿಯಾಗುತ್ತಿವೆಯೇ?