ನವದೆಹಲಿ: ತನ್ನ ಎಡ್ಜ್ 50 ಸರಣಿಯನ್ನು ಮತ್ತಷ್ಟು ವಿಸ್ತರಿಸಿರುವ ಮೊಟೊರೊಲಾ ಸೋಮವಾರ ತನ್ನ ಹೊಸ ಸ್ಮಾರ್ಟ್ಫೋನ್ ಮೊಟೊರೊಲಾ 50 ಎಡ್ಜ್ ನಿಯೋವನ್ನು (Motorola 50 Edge Neo) ಭಾರತದಲ್ಲಿ ಬಿಡುಗಡೆ ಮಾಡಿದೆ. ಎಡ್ಜ್ 50, ಎಡ್ಜ್ 50 ಫ್ಯೂಷನ್, ಎಡ್ಜ್ 50 ಅಲ್ಟ್ರಾ ಮತ್ತು ಎಡ್ಜ್ 50 ಪ್ರೊನಂತಹ ಈ ಹಿಂದೆ ಬಿಡುಗಡೆಯಾದ ಫೋನ್ಗಳ ನಂತರ ಎಡ್ಜ್ 50 ಸರಣಿಯ ಐದನೇ ಸ್ಮಾರ್ಟ್ ಫೋನ್ ಇದಾಗಿದೆ.
ಹೊಸದಾಗಿ ಬಿಡುಗಡೆಯಾಗಿರುವ ಮೊಟೊರೊಲಾ ಎಡ್ಜ್ 50 ನಿಯೋ ಐಪಿ 68 ನೀರು ಪ್ರತಿರೋಧ ಮತ್ತು ಮಿಲಿಟರಿ ದರ್ಜೆಯ ಬಾಳಿಕೆ ಮಾನದಂಡಗಳನ್ನು ಹೊಂದಿದೆ. ಈ ಪ್ರಮಾಣೀಕರಣಗಳನ್ನು ಹೊಂದಿರುವ ಭಾರತದ ಅತ್ಯಂತ ಹಗುರವಾದ ಸ್ಮಾರ್ಟ್ ಫೋನ್ ಇದಾಗಿದೆ. ಇದು 6.4 ಇಂಚಿನ ಪಿಒಎಲ್ಇಡಿ ಎಲ್ಟಿಪಿಒ 1.5 ಕೆ ಡಿಸ್ ಪ್ಲೇ, ಎಚ್ಡಿಆರ್ 10 + ಬೆಂಬಲ, 3,000 ನಿಟ್ಸ್ ಪೀಕ್ ಬ್ರೈಟ್ನೆಸ್, 10 ಹರ್ಟ್ಸ್ನಿಂದ 120 ಹರ್ಟ್ಸ್ ರಿಫ್ರೆಶ್ ರೇಟ್ ಹೊಂದಿದೆ. ಡಾಲ್ಬಿ ಅಟ್ಮೋಸ್ ಅನ್ನು ಬೆಂಬಲಿಸುವ ಸ್ಟಿರಿಯೊ ಸ್ಪೀಕರ್ ಗಳನ್ನು ಇದು ಒಳಗೊಂಡಿದೆ.
ವೈರ್ಲೆಸ್ ಚಾರ್ಜಿಂಗ್ಗೆ ಸಪೋರ್ಟ್:4,310 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇದರಲ್ಲಿದ್ದು, ಇದರೊಂದಿಗೆ 68 ವ್ಯಾಟ್ ಚಾರ್ಜರ್ ನೀಡಲಾಗುತ್ತಿದೆ. ಈ ಫೋನ್ 15 ವ್ಯಾಟ್ ವೈರ್ ಲೆಸ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. 8 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಹೊಂದಿರುವ ಇದರಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಆಂಡ್ರಾಯ್ಡ್ 14 ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಇದರಲ್ಲಿದ್ದು, 5 ಬಾರಿ ಆಪರೇಟಿಂಗ್ ಸಿಸ್ಟಂ ಅಪ್ಡೇಟ್ಗಳನ್ನು ಮತ್ತು 5 ವರ್ಷಗಳವರೆಗೆ ಸೆಕ್ಯೂರಿಟಿ ಅಪ್ಡೇಟ್ಗಳನ್ನು ನೀಡಲಾಗುವುದು.