ಚಿಕಾಗೋ:ಕೃತಕ ಬುದ್ಧಿಮತ್ತೆಯು (AI) ಇಂದು ಅತಿ ಮುಖ್ಯ ತಂತ್ರಜ್ಞಾನವಾಗಿದೆ. ನಮ್ಮ ಸಾಧನಗಳಲ್ಲಿ ಇದನ್ನು ಪ್ರಮುಖವಾಗಿ ಬಳಸುತ್ತೇವೆ. ಈ ತಂತ್ರಾಂಶವನ್ನು ಬಳಸಲು ಒಬ್ಬ ಏಜೆಂಟ್ ನೀಡಿದರೆ ಹೇಗಿರುತ್ತದೆ.?
ಹೌದು, ಐಟಿ ದೈತ್ಯ ಮೈಕ್ರೋಸಾಫ್ಟ್ AI ಏಜೆಂಟ್ ನೀಡಲು ಮುಂದಾಗಿದೆ. ಈ ಏಜೆಂಟ್ ಮೂಲಕ ಬಳಕೆದಾರರು ಸುಲಭವಾಗಿ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯ. ಈ ಏಜೆಂಟ್ ಯಾವಾಗ ಬಳಕೆದಾರರಿಗೆ ಲಭ್ಯವಾಗುತ್ತದೆ ಎಂಬ ಬಗ್ಗೆ ಮೈಕ್ರೋಸಾಫ್ಟ್ ಮಾಹಿತಿ ನೀಡಿಲ್ಲ.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಮಂಗಳವಾರ ಚಿಕಾಗೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಹಕರಿಗೆ ಇನ್ನಷ್ಟು ಅತ್ಯುತ್ತಮ ಸೇವೆ ನೀಡಲು ಸಂಸ್ಥೆಯು ಹೊಸ ವಿಧಾನ ಪರಿಚಯಿಸಲಿದೆ. ನಮ್ಮ ಕೆಲಸ ಮತ್ತು ಜೀವನದಲ್ಲಿ AI ಹೇಗೆ ವರ್ತಿಸಬೇಕು ಎಂಬುದನ್ನು ಈ ಸಾಧನ ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಈಗಾಗಲೆ ಹಲವು AI ಡೆವಲಪರ್‌ಗಳು ಜನರ ಪರವಾಗಿ ಹೆಚ್ಚು ಉಪಯುಕ್ತವಾದ ಕೆಲಸಗಳನ್ನು ಮಾಡಬಹುದಾದ AI ಏಜೆಂಟ್‌ಗಳನ್ನು ಪರಿಚಯಿಸುತ್ತಿವೆ. ಜನರೇಟಿವ್ AI ಚಾಟ್‌ಬಾಟ್‌ಗಳ ಮುಂದಿನ ಹಂತವನ್ನು ನೀಡುತ್ತಿವೆ. ಮೈಕ್ರೋಸಾಫ್ಟ್ ಕೂಡ ಈ ಏಜೆಂಟ್ ಅನ್ನು ನೀಡಲಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಮೈಕ್ರೋಸಾಫ್ಟ್ ಸಂಸ್ಥೆಯು ಕಳೆದ ತಿಂಗಳು ಎಐ ಏಜೆಂಟ್ ನೀಡುವ ಬಗ್ಗೆ ಘೋಷಿಸಿತ್ತು. ಪ್ರತಿ ಐಟಿ ಸಂಸ್ಥೆಗಳು ಏಜೆಂಟ್‌ಗಳನ್ನು ಹೊಂದುತ್ತಿವೆ. ಸರಳವಾದ ಪ್ರಾಂಪ್ಟ್ ಮತ್ತು ಪ್ರತಿಕ್ರಿಯೆಯಿಂದ ಸಂಪೂರ್ಣ ಸ್ವಾಯತ್ತತೆ ನೀಡಲು ನಮ್ಮ ಸಂಸ್ಥೆಯು ತಯಾರಿ ನಡೆಸುತ್ತಿದೆ ಎಂದು ಹೇಳಿತ್ತು.