Maruti Dzire In Demand:ಈಗ ಹೊಸ ಮಾರುತಿ ಡಿಸೈರ್‌ಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಹೊಸ ಮಾರುತಿ ಡಿಸೈರ್ ನವೆಂಬರ್ 11 ರಂದು ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿರುವುದು ಗೊತ್ತಿರುವ ಸಂಗತಿ. ಬಿಡುಗಡೆಗೆ ಮುಂಚೆಯೇ ಈ ಕಾರು ಕ್ರ್ಯಾಶ್ ಟೆಸ್ಟ್ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದಿತ್ತು.
ಕಂಪನಿಯು ಹೊಸ ಡಿಸೈರ್‌ನಲ್ಲಿ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸಿದೆ. ಇದರಿಂದಾಗಿ ಈ ಕಾರು 5-ಸ್ಟಾರ್ ರೇಟಿಂಗ್ ಪಡೆದ ಮಾರುತಿಯ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇಂದಿನ ದಿನಗಳಲ್ಲಿ ಡಿಸೈರ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಈ ಕಾರು ಬಿಡುಗಡೆಗೊಂಡು ಒಂದು ತಿಂಗಳು ಕೂಡ ಕಳೆದಿಲ್ಲ. ಆದ್ರೆ 30 ಸಾವಿರಕ್ಕೂ ಹೆಚ್ಚು ಯುನಿಟ್ಸ್ ಬುಕ್ಕಿಂಗ್ ಆಗಿದೆ.
ಮಾರುತಿ ಹೊಸ ಪೀಳಿಗೆಯ ಡಿಸೈರ್ ಮಾಡೆಲ್ಗಳು ದಿನಕ್ಕೆ ಸುಮಾರು 1000ಕ್ಕೂ ಹೆಚ್ಚು ಬುಕ್ಕಿಂಗ್ ಆಗುತ್ತಿವೆ. ವಾಹನ ತಯಾರಕರು ಈಗಾಗಲೇ ಐದು ಸಾವಿರಕ್ಕೂ ಹೆಚ್ಚು ಯುನಿಟ್‌ಗಳನ್ನು ವಿತರಿಸಿದ್ದಾರೆ. ಸದ್ಯ ಈ ಮಾರುತಿ ವಾಹನದ ವೇಟಿಂಗ್ ಟೈಂ ಸುಮಾರು ಮೂರು ತಿಂಗಳಿಗೆ ತಲುಪಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಪ್ರತಿದಿನ ಸುಮಾರು ಎರಡು ಪಟ್ಟು ಬುಕಿಂಗ್ ನಡೆಯುತ್ತಿದೆ ಎಂದು ಮಾರುತಿ ಹೇಳುತ್ತಿದೆ.