Mahindra EV Cars Launched:ಎಲೆಕ್ಟ್ರಿಕ್ ವಾಹನಪ್ರಿಯರಿಗೆ ಒಳ್ಳೆಯ ಸುದ್ದಿ. ಎರಡು ಹೊಸ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಬಂದಿವೆ. ದೇಶೀಯ ಕಾರು ತಯಾರಕ ಕಂಪೆನಿ ಮಹೀಂದ್ರ ಆ್ಯಂಡ್ ಮಹೀಂದ್ರ ತನ್ನ ಎರಡು ಹೊಸ ಇವಿಗಳನ್ನು ಬಿಡುಗಡೆ ಮಾಡಿದೆ. ಇವುಗಳಿಗೆ 'Mahindra XEV 9e' ಮತ್ತು 'Mahindra BE 6e' ಎಂದು ಹೆಸರಿಡಲಾಗಿದೆ.
'ಮಹೀಂದ್ರಾ XEV 9e' ಡಿಸೈನ್:ಹೊಸ XEV 9e ಪ್ರೊಜೆಕ್ಟರ್ ಹೆಡ್ಲ್ಯಾಂಪ್ಗಳ ಜೊತೆ ಈ ಕಾರಿನಲ್ಲಿ ಟ್ರೈಯಾಂಗಲ್ ಹೆಡ್ಲೈಟ್ಗಳು, ಇನ್ವರ್ಟೆಡ್ ಎಲ್-ಶೇಪ್ ಎಲ್ಇಡಿ ಡಿಆರ್ಎಲ್ಗಳು, ಮುಂಭಾಗದಲ್ಲಿ ಎಲ್ಇಡಿ ಲೈಟ್ ಬಾರ್, ಬ್ಯಾಕ್ ಆ್ಯಂಡ್ ಫ್ರಂಟ್ ಬಂಪರ್ಗಳು, ಬ್ಲಾಂಕ್ಡ್-ಆಫ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್ ಇದೆ. ಕಾಂಟ್ರಾಸ್ಟ್ ಕಲರ್ನ ORVMಗಳನ್ನು ಹೊಂದಿದೆ. ಇವುಗಳ ಹೊರತಾಗಿ, ರಿಫ್ರೆಶ್ ಮಾಡಿದ ಎಲ್ಇಡಿ ಟೈಲ್ಲೈಟ್ಗಳು, ಇಂಟಿಗ್ರೇಟೆಡ್ ಸ್ಪಾಯ್ಲರ್, ಸಿ-ಪಿಲ್ಲರ್-ಮೌಂಟೆಡ್ ರಿಯರ್ ಡೋರ್ ಹ್ಯಾಂಡಲ್, ಕನೆಕ್ಟೆಡ್ ಟೈಲ್ಲೈಟ್ ಸೆಟಪ್, ಏರೋ ಇನ್ಸರ್ಟ್ಗಳೊಂದಿಗೆ ಹೊಸ ಅಲಾಯ್ ವ್ಹೀಲ್ಗಳನ್ನು ಅಳವಡಿಸಲಾಗಿದೆ.
'ಮಹೀಂದ್ರ XEV 9e' ಇಂಟೀರಿಯರ್:ಈಕಾರು ಎರಡು-ಸ್ಪೋಕ್ ಮಲ್ಟಿಫಂಕ್ಷನ್ ಫ್ಲಾಟ್-ಬಾಟಮ್ ಸ್ಟೀರಿಂಗ್ ವ್ಹೀಲ್, ಪನೋರಮಿಕ್ ಸನ್ರೂಫ್, ಲೆವೆಲ್ 2 ಎಡಿಎಎಸ್ ಸೂಟ್, 360-ಡಿಗ್ರಿ ಕ್ಯಾಮೆರಾ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ತ್ರೀ-ಸ್ಕ್ರೀನ್ ಸೆಟಪ್, ಡ್ಯಾಶ್ಬೋರ್ಡ್, ಟ್ವೀಕ್ಡ್ ಸೆಂಟರ್ ಕನ್ಸೋಲ್, ನ್ಯೂ ಗೇರ್ ಲಿವರ್ ಮತ್ತು ರೋಟರಿ ಡಯಲ್ ಒಳಗೊಂಡಿದೆ.
ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (EPB), 1400-ವ್ಯಾಟ್ ಹರ್ಮನ್-ಕಾರ್ಡನ್ ಮೂಲದ 16-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಆಟೋ ಪಾರ್ಕ್ ಫಂಕ್ಷನ್, ವೈರ್ಲೆಸ್ ಮೊಬೈಲ್ ಪ್ರೊಜೆಕ್ಷನ್, ಸವೆನ್ ಏರ್ಬ್ಯಾಗ್ಸ್, 65W ಯುಎಸ್ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಶೆಡೂಲ್ಡ್ ಚಾರ್ಜಿಂಗ್ ಜೊತೆ ಫಂಕ್ಷನ್ ಆ್ಯಂಡ್ ಕ್ಯಾಬಿನ್ ಪ್ರಿ-ಕೂಲಿಂಗ್ ಫಂಕ್ಷನ್ ಕಾರಿನಲ್ಲಿದೆ.
'ಮಹೀಂದ್ರ XEV 9e' ಪವರ್ಟ್ರೇನ್: ಈ ಕಾರು 59kWh ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತದೆ. ವಿದ್ಯುತ್ ಮೋಟರ್ಗೆ ಸಂಪರ್ಕ ಹೊಂದಿದೆ. 228bhp ಪವರ್ ಮತ್ತು 380Nm ಟಾರ್ಕ್ ಉತ್ಪಾದಿಸುತ್ತದೆ. ಫುಲ್ ಚಾರ್ಜ್ನಲ್ಲಿ 656 ಕಿಲೋಮೀಟರ್ಗಳಷ್ಟು ದೂರ ಕ್ರಮಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಬ್ಯಾಟರಿಯನ್ನು 140kW DC ಫಾಸ್ಟ್ ಚಾರ್ಜರ್ ಮೂಲಕ ಕೇವಲ 20 ನಿಮಿಷಗಳಲ್ಲಿ ಶೇ 20-80ರಷ್ಟು ಚಾರ್ಜ್ ಮಾಡಬಹುದು. 0-100 kmph ವೇಗವನ್ನು ಈ ಕಾರು 6.8 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.