ಸುರಕ್ಷತಾ ಪರಿಕರಗಳ ಅಳವಡಿಕೆಗೆ ಆದ್ಯತೆ ನೀಡುವಂತೆ ದ್ವಿಚಕ್ರ ವಾಹನ ತಯಾರಕರು, ಮಾರಾಟಗಾರರಿಗೆ ಪತ್ರ: ಪೊಲೀಸ್ ಆಯುಕ್ತ - Safety Equipment for Bikes - SAFETY EQUIPMENT FOR BIKES
ಸುರಕ್ಷತಾ ಪರಿಕರಗಳ ಅಳವಡಿಕೆಗೆ ಆದ್ಯತೆ ನೀಡುವಂತೆ ದ್ವಿಚಕ್ರ ವಾಹನ ತಯಾರಕರು ಮತ್ತು ಮಾರಾಟಗಾರರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪತ್ರ ಬರೆದಿದ್ದಾರೆ.
ಬೆಂಗಳೂರು : ನಗರದಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ತಡೆಗಟ್ಟುವ ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಅವುಗಳ ಮಾರಾಟದ ಸಂದರ್ಭದಲ್ಲಿಯೇ ಕೆಲವು ಕ್ರಮಗಳನ್ನ ಅನುಸರಿಸುವಂತೆ ತಯಾರಕರು ಹಾಗೂ ಮಾರಾಟಗಾರರಿಗೆ ಪತ್ರ ಬರೆಯುತ್ತಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.
ಆಟೋಮೊಬೈಲ್ ತಯಾರಕರು ಹಾಗೂ ಮಾರಾಟಗಾರರೊಂದಿಗೆ ಮಾತುಕತೆ ನಡೆಸಿರುವ ಪೊಲೀಸರು, ವಾಹನಗಳ ಸ್ಟೈಲ್ ಹಾಗೂ ಡಿಸೈನ್ ಮಾತ್ರವಲ್ಲದೆ ಆರಂಭಿಕ ಹಂತದಲ್ಲಿಯೇ ದ್ವಿಚಕ್ರ ವಾಹನಗಳಿಗೆ ಜಿಪಿಎಸ್, ವ್ಹೀಲ್ ಲಾಕಿಂಗ್, ಗಟ್ಟಿಮುಟ್ಟಾದ ಹ್ಯಾಂಡಲ್ ಲಾಕಿಂಗ್ ಅಳವಡಿಸುವುದರ ಕಡೆಯೂ ಗಮನ ಹರಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಮಾರಾಟದ ಸಂದರ್ಭದಲ್ಲಿ ಆ್ಯಂಟಿ ಥೆಫ್ಟ್ ಡಿವೈಸ್ ಮತ್ತಿತರ ಸುರಕ್ಷತಾ ಪರಿಕರಗಳ ಕುರಿತು ಖರೀದಾರರ ಗಮನ ಸೆಳೆಯುವಂತೆ ಸೂಚಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ''ಸೂಕ್ತ ಸುರಕ್ಷತಾ ಕ್ರಮಗಳಿಲ್ಲದಿರುವುದರಿಂದ ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳನ್ನ ಕಳ್ಳರು ಸುಲಭವಾಗಿ ಕಳ್ಳತನ ಮಾಡುತ್ತಿರುವುದು ಕಂಡು ಬಂದಿದೆ. ಅನೇಕ ಸಂದರ್ಭಗಳಲ್ಲಿ ಕಳ್ಳತನವಾಗಿರುವ ದ್ವಿಚಕ್ರ ವಾಹನಗಳನ್ನ ಸರಗಳ್ಳತನ ಸೇರಿದಂತೆ ಮತ್ತಿತರ ಗಂಭೀರ ಅಪರಾಧ ಕೃತ್ಯಗಳಿಗೆ ಬಳಸಿರುವ ನಿದರ್ಶನಗಳಿವೆ. ಆದ್ದರಿಂದ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳನ್ನು ಮತ್ತಷ್ಟು ಗಂಭೀರವಾಗಿ ಪರಿಣಿಸಿದ್ದೇವೆ'' ಎಂದರು.
ಹಿಂದಿನ ಮೂರು ವರ್ಷಗಳಲ್ಲಿ ಕಳುವು ಮತ್ತು ಪತ್ತೆಯಾದ ದ್ವಿಚಕ್ರ ವಾಹನಗಳ ಅಂಕಿ ಅಂಶಗಳು ಇಲ್ಲಿವೆ..