ಕರ್ನಾಟಕ

karnataka

ETV Bharat / technology

ಕಿಯಾ ಕಾಂಪ್ಯಾಕ್ಟ್ ಎಸ್​ಯುವಿ 'ಸಿರೋಸ್' ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆ - KIA NEW CAR

ಕಿಯಾ ತನ್ನ ಹೊಸ ಕಾಂಪ್ಯಾಕ್ಟ್​ ಕಾರನ್ನು ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಿದೆ.

ಕಿಯಾ ಕಾಂಪ್ಯಾಕ್ಟ್ ಎಸ್​ಯುವಿ 'ಸಿರೋಸ್'
ಕಿಯಾ ಕಾಂಪ್ಯಾಕ್ಟ್ ಎಸ್​ಯುವಿ 'ಸಿರೋಸ್' (IANS)

By ETV Bharat Karnataka Team

Published : Dec 22, 2024, 7:55 PM IST

ಸಿಯೋಲ್: ಕಾಂಪ್ಯಾಕ್ಟ್ ಎಸ್ ಯುವಿ 'ಸಿರೋಸ್' ಅನ್ನು ಮುಂದಿನ ವರ್ಷ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ದಕ್ಷಿಣ ಕೊರಿಯಾದ ಎರಡನೇ ಅತಿದೊಡ್ಡ ಕಾರು ತಯಾರಕ ಕಂಪನಿ ಕಿಯಾ ಭಾನುವಾರ ತಿಳಿಸಿದೆ.

ಕೆ5 ಸೆಡಾನ್ ಮತ್ತು ಸೊರೆಂಟೊ ಎಸ್ ಯುವಿಗಳ ತಯಾರಕ ಕಂಪನಿಯಾದ ಕಿಯಾ ತನ್ನ ಹೊಸ 'ಸಿರೋಸ್' ನ ಮಾದರಿಯನ್ನು ಭಾರತದಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿದೆ. ಸಿರೋಸ್ ಎಸ್ ಯುವಿಯನ್ನು ಎರಡು ಟ್ರಿಮ್ ಗಳಲ್ಲಿ ಬಿಡುಗಡೆ ಮಾಡಲಾಗುವುದು. ಒಂದು 1.0-ಲೀಟರ್ ಗ್ಯಾಸೋಲಿನ್ ಟರ್ಬೋಚಾರ್ಜ್ ಡ್ ಎಂಜಿನ್ ಮತ್ತು ಇನ್ನೊಂದು 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯಾಗಿರುತ್ತದೆ ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಆರಂಭದಲ್ಲಿ ಭಾರತದಲ್ಲಿ ಕಿಯಾ ಕಾಂಪ್ಯಾಕ್ಟ್ ಕಾರು ಬಿಡುಗಡೆಯಾಗಲಿದ್ದು, ನಂತರದ ದಿನಗಳಲ್ಲಿ ಏಷ್ಯಾ-ಪೆಸಿಫಿಕ್ ಪ್ರದೇಶ, ಲ್ಯಾಟಿನ್ ಅಮೆರಿಕ ಮತ್ತು ಮಧ್ಯಪ್ರಾಚ್ಯದಲ್ಲಿ ಇದನ್ನು ಪರಿಚಯಿಸಲಾಗುವುದು ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹೊಸ ಮಾದರಿಯು ಮುಂಭಾಗದ ಘರ್ಷಣೆ ತಪ್ಪಿಸುವಿಕೆ, ಲೇನ್-ಕೀಪಿಂಗ್ ಸಹಾಯ, ಸರೌಂಡ್ ವ್ಯೂ ಮಾನಿಟರ್ ಮತ್ತು ಚಾಲಕ ಜಾಗೃತಿ ಎಚ್ಚರಿಕೆ ವ್ಯವಸ್ಥೆಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ವಾಹನದ ಬೆಲೆ ಎಷ್ಟಿರಲಿದೆ ಎಂಬ ಬಗ್ಗೆ ಕಂಪನಿ ಈವರೆಗೆ ಮಾಹಿತಿ ನೀಡಿಲ್ಲ.

ಏತನ್ಮಧ್ಯೆ ಕಿಯಾ ಇಂಡಿಯಾ ತನ್ನ ಎಲ್ಲಾ ಕಾರುಗಳ ಬೆಲೆಗಳನ್ನು ಶೇಕಡಾ 2 ರಷ್ಟು ಹೆಚ್ಚಿಸಿದ್ದು, ಇದು ಜನವರಿ 1 ರಿಂದ ಜಾರಿಗೆ ಬರಲಿದೆ. ಸರಕು ಬೆಲೆಗಳು ಮತ್ತು ಸಾಗಾಟ ಸಂಬಂಧಿತ ಸಂಬಂಧಿತ ವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ದರ ಹೆಚ್ಚಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

"ನಮ್ಮ ಮೌಲ್ಯಯುತ ಗ್ರಾಹಕರಿಗೆ ಅತ್ಯುನ್ನತ ಗುಣಮಟ್ಟದ ಅಸಾಧಾರಣ, ತಾಂತ್ರಿಕವಾಗಿ ಮುಂದುವರಿದ ವಾಹನಗಳನ್ನು ತಲುಪಿಸಲು ನಾವು ಬದ್ಧರಾಗಿದ್ದೇವೆ. ಆದರೆ ಸರಕು ಬೆಲೆಗಳ ನಿರಂತರ ಏರಿಕೆ, ಪ್ರತಿಕೂಲ ವಿನಿಮಯ ದರಗಳು ಮತ್ತು ಹೆಚ್ಚಿದ ಇನ್ ಪುಟ್ ವೆಚ್ಚಗಳಿಂದಾಗಿ ದರ ಏರಿಸುವುದು ಅನಿವಾರ್ಯವಾಗಿದೆ "ಎಂದು ಕಿಯಾ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆಯ ಹಿರಿಯ ಉಪಾಧ್ಯಕ್ಷ ಹರ್ದೀಪ್ ಸಿಂಗ್ ಬ್ರಾರ್ ಹೇಳಿದರು.

ಕಿಯಾ ಇದುವರೆಗೆ ಭಾರತ ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿ 1.6 ಮಿಲಿಯನ್ ಕಾರುಗಳನ್ನು ಮಾರಾಟ ಮಾಡಿದೆ. ಕಂಪನಿಯ ಸೆಲ್ಟೋಸ್ ಅತ್ಯಧಿಕ 6 ಲಕ್ಷ 70 ಸಾವಿರದಷ್ಟು ಮಾರಾಟವಾಗಿದೆ. ಸೊನೆಟ್ 4 ಲಕ್ಷ 80 ಸಾವಿರ, ಕ್ಯಾರೆನ್ಸ್​ 2 ಲಕ್ಷ 14 ಸಾವಿರ ಮತ್ತು ಕಾರ್ನಿವಲ್ 15 ಸಾವಿರದಷ್ಟು ಮಾರಾಟವಾಗಿ ನಂತರದ ಸ್ಥಾನಗಳಲ್ಲಿವೆ.

ಇದನ್ನೂ ಓದಿ: ನಾಸಾ - ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ ಮಿಷನ್​ ಉಡಾವಣೆಗೆ ಸಿದ್ಧ: ಯಾವಾಗ ಎನ್ನುವ ಕುತೂಹಲವೇ? - NISAR MISSION 2025

For All Latest Updates

ABOUT THE AUTHOR

...view details