ಕರ್ನಾಟಕ

karnataka

ETV Bharat / technology

ಕೇವಲ ₹11ಕ್ಕೆ 10 GB ಹೈಸ್ಪೀಡ್​ ಡೇಟಾ! ಅತೀ ಕಡಿಮೆ ವೆಚ್ಚದ ರಿಚಾರ್ಚ್‌ ಪ್ಲಾನ್ ತಂದ ಜಿಯೋ - JIO NEW DATA VOUCHER

Jio Cheapest Data Voucher: ಜಿಯೋ ತನ್ನ ಬಳಕೆದಾರರಿಗೆ ಅದ್ಭುತ ಕೊಡುಗೆಯೊಂದನ್ನು ನೀಡುತ್ತಿದೆ. ಕೇವಲ 11 ರೂಪಾಯಿಗೆ 10 ಜಿಬಿ ಡೇಟಾ ನೀಡುತ್ತಿದೆ. ಆದ್ರೆ ಷರತ್ತುಗಳು ಅನ್ವಯ.

JIO INTRODUCES NEW DATA VOUCHER  JIO CHEAPEST RECHARGE PLAN  JIO CHEAPEST DATA VOUCHER  JIO NEW RS 11 DATA PACK
ಜಿಯೋ (ETV Bharat)

By ETV Bharat Tech Team

Published : Nov 15, 2024, 11:55 AM IST

Jio Cheapest Data Voucher: ಭಾರತದ ನಂಬರ್ ಒನ್ ಮೊಬೈಲ್ ನೆಟ್‌ವರ್ಕ್ ರಿಲಯನ್ಸ್ ಜಿಯೋ, ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಹುಟ್ಟಿಹಾಕಿತ್ತು. ಅತೀ ಕಡಿಮೆ ಬೆಲೆಯಲ್ಲಿ ಅನಿಯಮಿತ ಡೇಟಾ ಪರಿಚಯಿಸಿತ್ತು. ವರ್ಷ ಕಳೆದಂತೆ ಇನ್ನೂ ಅನೇಕ ಅಚ್ಚರಿಯ ಪ್ಲಾನ್​ಗಳ ಘೋಷಣೆಗಳನ್ನು ಮಾಡುತ್ತಲೇ ಇದೆ.

ಇತ್ತೀಚೆಗೆ ಈ ಟೆಲಿಕಾಂ ದೈತ್ಯ ಹೊಸ ಅಗ್ಗದ ರೀಚಾರ್ಜ್ ಯೋಜನೆ ತಂದಿದೆ. ಕೇವಲ 11 ರೂಪಾಯಿ ರೀಚಾರ್ಜ್‌ನೊಂದಿಗೆ 10GB ಹೈ-ಸ್ಪೀಡ್ ಡೇಟಾ ಯೋಜನೆ ಪ್ರಾರಂಭಿಸಿದೆ. ಆದರೆ ಇದರಲ್ಲಿ ಒಂದು ಟ್ವಿಸ್ಟ್ ಇದೆ.

ರಿಲಯನ್ಸ್ ಜಿಯೋ ತಂದಿರುವ ಹೊಸ ರಿಚಾರ್ಜ್ ಯೋಜನೆಯು ದೈನಂದಿನ ಡೇಟಾ ಮಿತಿ ಮುಗಿದ ನಂತರ ಹೆಚ್ಚುವರಿ ಡೇಟಾ ಅಗತ್ಯವಿರುವ ಬಳಕೆದಾರರಿಗೆ ಉಪಯುಕ್ತವಾಗಿದೆ. ಆದರೆ ಇದರ ವ್ಯಾಲಿಡಿಟಿ ಕೇವಲ ಒಂದು ಗಂಟೆ ಮಾತ್ರ. ಒಂದು ಗಂಟೆಯೊಳಗೆ 10GB ಡೇಟಾವನ್ನು ಪೂರ್ಣಗೊಳಿಸಿದರೂ, ನೀವು 64kbps ವೇಗದಲ್ಲಿ ಅನಿಯಮಿತ ಡೇಟಾ ಬಳಸಬಹುದು ಎಂದು ಜಿಯೋ ಹೇಳಿದೆ.

ಇದು ದೇಶದ ಅಗ್ಗದ ರೀಚಾರ್ಜ್ ಯೋಜನೆ!: ಜಿಯೋ ತಂದಿರುವ ಈ ರಿಚಾರ್ಜ್ ಯೋಜನೆಯು ಭಾರತದಲ್ಲಿನ ಅಗ್ಗದ ಡೇಟಾ ಪ್ಯಾಕ್ ಆಗಿದೆ. ಇದರ ಇನ್ನೊಂದು ವಿಶೇಷತೆ ಎಂದರೆ, ಈ ವೋಚರ್ ಬೇಸ್ ಪ್ಯಾಕ್ ಇಲ್ಲದಿದ್ದರೂ ಕೆಲಸ ಮಾಡುತ್ತದೆ. ಆದರೆ ಈ ಸಂದರ್ಭದಲ್ಲಿ ನಿಮ್ಮ ಸಂಪರ್ಕ ಇಂಟರ್ನೆಟ್‌ಗೆ ಮಾತ್ರ ಸೀಮಿತವಾಗಿರುತ್ತದೆ. ಈ ಪ್ಯಾಕ್‌ನಲ್ಲಿ ಫ್ರೀ ಕಾಲ್​ ಮತ್ತು SMS ಪ್ರಯೋಜನಗಳು ಇರುವುದಿಲ್ಲ.

ಹೊಸ ಡೇಟಾ ಬೂಸ್ಟರ್ ಯೋಜನೆಗಾಗಿ ಕಾಯುತ್ತಿರುವ ಬಳಕೆದಾರರು ಈ ಪ್ಯಾಕ್ ಅನ್ನು ಪರಿಶೀಲಿಸಬಹುದು. ನೀವು ಈಗಾಗಲೇ ಕರೆಗಳು ಮತ್ತು SMS ಸೌಲಭ್ಯಗಳೊಂದಿಗೆ ಬೇಸ್ ಪ್ಯಾಕ್ ಅನ್ನು ಹೊಂದಿದ್ದರೂ ಸಹ ಈ ಡೇಟಾ ವೋಚರ್ ಬಳಸಬಹುದು.

ಡೇಟಾ ವೋಚರ್ My Jio ಅಪ್ಲಿಕೇಶನ್, ವೆಬ್‌ಸೈಟ್‌ನಲ್ಲಿ ಲಭ್ಯ. ಜಿಯೋ ನೀಡುವ ರೂ.11 ಡೇಟಾ ವೋಚರ್ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಲಭ್ಯವಿದೆ. ಆದರೆ ಈ ವೋಚರ್ ಕೆಲವು ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ ಕಾರ್ಯನಿರ್ವಹಿಸದೇ ಇರಬಹುದು.

ಇದನ್ನೂ ಓದಿ:ಬಿಎಸ್​ಎನ್​ಎಲ್‌ನಿಂದ ಹೊಸ ಸೇವೆಗಳ ಘೋಷಣೆ; 500 ಲೈವ್​ ಚಾನೆಲ್​ ಫ್ರೀ

ABOUT THE AUTHOR

...view details