ಗ್ಯಾಸ್ ಸಿಲೆಂಡರ್ ವಿಚಾರದಲ್ಲಿ ಅಲಕ್ಷ್ಯ ಅಥವಾ ನಿರ್ಲಕ್ಷ್ಯ ಮಾಡುವುದು ಸೂಕ್ತವಲ್ಲ. ನೀವು ಮನೆಗೆ ಗ್ಯಾಸ್ ಕನೆಕ್ಷನ್ ಪಡೆದಿದ್ದೀರಿ ಎಂದರೆ ಅದರ ಬಗ್ಗೆ ಕಾಳಜಿ ವಹಿಸುವುದು ಸೂಕ್ತ. ಅಲ್ಪ-ಸ್ವಲ್ಪ ನಿರ್ಲಕ್ಷ್ಯ ವಹಿಸುವುದು ಒಂದಲ್ಲ ಒಂದು ದಿನ ಪ್ರಾಣಕ್ಕೆ ಸಂಚಕಾರ ತರುವ ವಿಷಯ ಎನ್ನುತ್ತಾರೆ ತಜ್ಞರು.
ಇತ್ತೀಚಿಗೆ ಪ್ರತಿಯೊಂದು ಮನೆಯಲ್ಲೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳು ಸಾಮಾನ್ಯವಾಗಿಬಿಟ್ಟಿವೆ. ಸಿಲಿಂಡರ್ ಎಷ್ಟೇ ಉಪಯುಕ್ತವಾಗಿದ್ದರೂ, ಅಜಾಗರೂಕತೆಯಿಂದ ನಿರ್ವಹಿಸಿದರೆ ಅಪಾಯ ತಪ್ಪಿದ್ದಲ್ಲ. ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುವಾಗ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದು ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು. ಹಾಗಾಗಿ ಸಿಲಿಂಡರ್ ಬಳಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಅತ್ಯಗತ್ಯ. ಯಾವ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಎಂಬ ಮಾಹಿತಿ ಇಲ್ಲಿದೆ.
- ಗ್ಯಾಸ್ ಸಿಲಿಂಡರ್ ಅನ್ನು ಯಾವಾಗಲೂ ನೇರವಾಗಿ ಇಡಬೇಕು.
- ಅಡುಗೆಗಾಗಿ ಒಲೆಯನ್ನು ಸಿಲಿಂಡರ್‌ಗಿಂತ ಎತ್ತರದಲ್ಲಿ ಇಡಬೇಕು.
- ಗ್ಯಾಸ್ ಆನ್ ಮಾಡುವುದು ಮತ್ತು ಲೈಟರ್ ಹಚ್ಚುವುದು ಒಂದೇ ಸಮಯದಲ್ಲಿ ಮಾಡಬೇಕು.
- ಗ್ಯಾಸ್ ಪೈಪ್‌ಗಳು ಎಲ್ಲಿಯೂ ಲೀಕೇಜ್ ಆಗದಂತೆ ನೋಡಿಕೊಳ್ಳಬೇಕು.
- ಸಿಗರೇಟ್, ದೀಪ, ಸೀಮೆಎಣ್ಣೆ ಒಲೆ ಮತ್ತು ಲ್ಯಾಂಟರ್ನ್‌ಗಳನ್ನು ಸಿಲಿಂಡರ್‌ನಿಂದ ದೂರವಿಡಬೇಕು.
- ಸಿಲಿಂಡರ್ ಬಳಸುತ್ತಿಲ್ಲದಿದ್ದರೆ, ಗ್ಯಾಸ್ ಇರಲಿ ಅಥವಾ ಇಲ್ಲದಿರಲಿ, ಅದರ ಮುಚ್ಚಳವನ್ನು ಬಿಗಿಯಾಗಿ ಹಾಕಬೇಕು.
- ಹೊರಗೆ ಹೋಗುವಾಗ ಮತ್ತು ರಾತ್ರಿ ಮಲಗುವ ಮುನ್ನ ಗ್ಯಾಸ್ ಆಫ್ ಮಾಡುವುದನ್ನು ಮರೆಯಬೇಡಿ.
- ಕಂಪನಿ ಒಡೆತನದ ಗ್ಯಾಸ್ ಟ್ಯೂಬ್‌ಗಳನ್ನು ಮಾತ್ರ ಬಳಸಬೇಕು. ಇವುಗಳನ್ನು ಪ್ರತಿ 4-5 ವರ್ಷಗಳಿಗೊಮ್ಮೆ ಬದಲಾಯಿಸಬೇಕು.
- ಅಡುಗೆ ಮಾಡುವಾಗ ಹತ್ತಿ ಬಟ್ಟೆ ಮತ್ತು ಹತ್ತಿ ಏಪ್ರನ್‌ಗಳನ್ನು ಮಾತ್ರ ಧರಿಸಿ. ವಿಶೇಷವಾಗಿ, ಇತರ ಕೆಲಸಗಳನ್ನು ಮಾಡುವಾಗ ಒಲೆಯನ್ನು ಆನ್ ಆಗಿ ಇಡಬೇಡಿ.
- ಒಲೆಯಲ್ಲಿ ಸಮಸ್ಯೆ ಇದ್ದರೆ, ಅದನ್ನು ನೀವೇ ದುರಸ್ತಿ ಮಾಡಬೇಡಿ, ದುರಸ್ತಿಗಳನ್ನು ಸಂಬಂಧಿತ ವೃತ್ತಿಪರರು ಮಾತ್ರ ನಡೆಸಬೇಕು.
- ಸಿಲಿಂಡರ್ ಅನ್ನು ಸರಿಯಾಗಿ ಹೇಗೆ ಉಪಯೋಗಿಸಬೇಕು ಎಂಬುದರ ಕುರಿತು ನಿಮಗೆ ಗೊತ್ತಿಲ್ಲದಿದ್ದರೆ ವೃತ್ತಿಪರರ ಸಹಾಯ ಪಡೆಯಿರಿ.
- ಸಿಲಿಂಡರ್ ಅನ್ನು ಗಾಳಿ ಮತ್ತು ಬೆಳಕಿಗೆ ಚೆನ್ನಾಗಿ ಒಡ್ಡಿಕೊಳ್ಳುವ ಸ್ಥಳದಲ್ಲಿ ಇಡಬೇಕು.
- ಅಧಿಕೃತ ಗ್ಯಾಸ್ ಸರಬರಾಜು ದಾರರಿಂದಲೇ ಗ್ಯಾಸ್ ಖರೀದಿ ಮಾಡಿ.
- ಅಗತ್ಯವಿದ್ದಷ್ಟು ಮಾತ್ರ ಗ್ಯಾಸ್ ಸಿಲಿಂಡರ್ ಅನ್ನು ತಂದಿಡಿ.
- ವಿತರಣೆಯ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಸೀಲ್ ಸರಿಯಾಗಿದೆಯೇ ಎಂದು ಪರಿಶೀಲಿಸಬೇಕು.
- ಸಿಲಿಂಡರ್ನಲ್ಲಿ ಕಂಪನಿಯ ಸೀಲ್ ಮತ್ತು ಕ್ಯಾಪ್ ಸರಿಯಾಗಿ ಇದೆಯಾ ಎಂದು ಪರಿಶೀಲನೆ ಮಾಡಿ.
- ಮಕ್ಕಳನ್ನು ಯಾವಾಗಲೂ ಅಡುಗೆಮನೆ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳಿಂದ ದೂರವಿಡಬೇಕು.
- ಎಲ್ಲ ಕ್ರಮಗಳ ಹೊರತು ಆಕಸ್ಮಿಕ ಅನಿಲ ಸೋರಿಕೆಯಾದರೆ ಕಿಟಕಿಗಳನ್ನು ತೆರೆಯಿರಿ, ತಕ್ಷಣ ಸಂಬಂಧಿತರಿಗೆ ಮಾಹಿತಿ ನೀಡಿ.
Note: ಇಲ್ಲಿ ನಿಮಗೆ ನೀಡಿರುವ ಮಾಹಿತಿ ನಿಮ್ಮ ತಿಳಿವಳಿಕೆಗಾಗಿ ಮಾತ್ರ. ಇವುಗಳನ್ನು ಪಾಲಿಸುವ ಮುನ್ನ ಮೊದಲು ಸಂಬಂಧಿತ ತಜ್ಞರನ್ನು ಸಂಪರ್ಕಿಸುವುದು ಉತ್ತಮ.