ಹೈದರಾಬಾದ್: ಐಫೋನ್ SE 4 ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದು 2022ರಲ್ಲಿ ಬಿಡುಗಡೆಯಾದ ವಿಶೇಷ ಆವೃತ್ತಿಯ ಐಫೋನ್ (Special Edition iPhone) ನಂತರ ಬಿಡುಗಡೆಯಾಗುತ್ತಿರುವ iPhone ಆಗಿದೆ. ಈ ಫೋನ್ ಬಗ್ಗೆ ಐಫೋನ್ ಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದ್ದು, ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಹೊಸ SE ಬಗೆಗಿನ ವಿವರಗಳು ಆನ್‌ಲೈನ್ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಅವುಗಳಲ್ಲಿ ಇತ್ತೀಚೆಗೆ ಸೋರಿಕೆಯಾದ ಮಾಹಿತಿಯಂತೆ, ಮುಂಬರುವ ಐಫೋನ್ SE 4 ರಲ್ಲಿ ಅಲರ್ಟ್ಸ್, ಆಧುನಿಕ ಐಫೋನ್ ಟ್ರೆಂಡ್ನಲ್ಲಿರುವ ನೋಟಿಫಿಕೇಶನ್ ಅಥವಾ ಇತರ ಚಟುವಟಿಕೆಗಳ ಮಾಹಿತಿಯನ್ನು ತೋರಿಸಲು ಸಹಾಯ ಮಾಡುವಂತಹ ಮಾತ್ರೆ ಆಕಾರದ ಅಂಶ ಡೈನಾಮಿಕ್ ಐಲ್ಯಾಂಡ್ ಫೀಚರ್ ಹೊಂದಿರುವ ಸಾಧ್ಯತೆ ಇಂದು ಹೇಳಲಾಗುತ್ತಿದೆ.
ಈ ಫೀಚರ್ ಅನ್ನು 2022 ರಲ್ಲಿ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಮಾದರಿಗಳಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ನಂತರದ ವರ್ಷಗಳಲ್ಲಿ ಬಿಡುಗಡೆಯಾದ 15 ಸರಣಿ ಮತ್ತು ಐಫೋನ್ 16 ಸರಣಿಯ ಫೋನ್ಗಳಲ್ಲಿ ಐಫೋನ್ ಈ ವೈಶಿಷ್ಟ್ಯ ವಿಸ್ತರಿಸಿತ್ತು.
ಐಫೋನ್ SE 4 ನಲ್ಲಿ ಡೈನಾಮಿಕ್ ಐಲ್ಯಾಂಡ್:ಐಫೋನ್ SE 4 ರ ಹೊಸ ಮಾಹಿತಿಗಳನ್ನು ಪ್ರಸಿದ್ಧ ಟಿಪ್‌ಸ್ಟರ್ ಇವಾನ್ ಬ್ಲಾಸ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಡೈನಾಮಿಕ್ ಐಲ್ಯಾಂಡ್ ಫೀಚರ್ ಸ್ಟ್ಯಾಟಿಕ್ ನಾಚ್ ಬದಲಿಗೆ ಡಿಸ್ಪ್ಲೇಯ ಮೇಲ್ಭಾಗದಲ್ಲಿ ಹೊಂದಿರಬಹುದು. ಹಾಗೂ ಐಫೋನ್ SE 4 ಇತ್ತೀಚೆಗೆ ಬಿಡುಗಡೆಯಾದ ಐಫೋನ್ 16 ಮಾದರಿಯ ವಿನ್ಯಾಸ ಹೋಲಿಕೆಗಳನ್ನು ಹಂಚಿಕೊಳ್ಳಬಹುದು ಎಂದು ಹೇಳುತ್ತದೆ ಸೋರಿಕೆಯಾದ ಮಾಹಿತಿ.