Hyderabad Nexon EV Fire Case: ಟಾಟಾ ನೆಕ್ಸಾನ್ ಇವಿ ಸುಟ್ಟು ಹೋದ ಪ್ರಕರಣ ಸಂಬಂಧ ಟಾಟಾ ಮೋಟಾರ್ಸ್‌ಗೆ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಕಾರಿನ ಸಂಪೂರ್ಣ ಬೆಲೆಯನ್ನು ಮಾಲೀಕರಿಗೆ ಹಿಂದಿರುಗಿಸುವಂತೆ ಹೈದರಾಬಾದ್‌ನ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಪ್ರಕರಣವೇನು?: ಜೋನಾಥನ್ ಬ್ರೈನಾರ್ಡ್ ಎಂಬ ವ್ಯಕ್ತಿ 2022ರಲ್ಲಿ ಟಾಟಾ ಮೋಟಾರ್ಸ್‌ನ ಜನಪ್ರಿಯ ಮತ್ತು ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರು ಟಾಟಾ ನೆಕ್ಸಾನ್ ಖರೀದಿಸಿದ್ದರು. ಆದರೆ ಖರೀದಿಸಿದ ಕೆಲವು ತಿಂಗಳ ನಂತರ ಕಾರು ಚಲಿಸುತ್ತಿರುವಾಗಲೇ ದೊಡ್ಡ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು. ಆ ಸಮಯದಲ್ಲಿ ನಾನು ಕಾರನ್ನು ಗಂಟೆಗೆ 38 ಕಿಮೀ ವೇಗದಲ್ಲಿ ಅಂದ್ರೆ ಕಡಿಮೆ ವೇಗದಲ್ಲಿ ಓಡಿಸುತ್ತಿದ್ದೆ ಎಂದು ಬ್ರೈನಾರ್ಡ್ ನ್ಯಾಯಾಲಯಕ್ಕೆ ವಿವರಿಸಿದ್ದರು.
ಜೂನ್ 1, 2023ರಂದು ನಡೆದ ಈ ಘಟನೆಯಲ್ಲಿ, ಕಾರು ಬೆಂಕಿಯಿಂದ ಸಂಪೂರ್ಣ ಸುಟ್ಟುಹೋಗಿತ್ತು. ಕಾರಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬ್ರೈನ್ಡ್ ಕೂಡಲೇ ಇಳಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದರು. ಬೆಂಕಿ ವೇಗವಾಗಿ ಹರಡುತ್ತಿದ್ದಂತೆ ಕಾರಿನ ಬಾಗಿಲುಗಳು ಜಾಮ್ ಆಗಿದ್ದವು. ಅಷ್ಟರಲ್ಲಿ ಪಕ್ಕದ ಬಾಗಿಲಿನಿಂದ ಹೊರಬಂದು ಪ್ರಾಣ ಉಳಿಸಿಕೊಂಡೆ ಎಂದು ಕೋರ್ಟ್ಗೆ ತಿಳಿಸಿದರು.