ನವದೆಹಲಿ: ಪಿಸಿ ಮತ್ತು ಪ್ರಿಂಟರ್ಗಳನ್ನು ತಯಾರಿಸುವ ಪ್ರಖ್ಯಾತ ಕಂಪನಿ ಎಚ್ಪಿ ಬುಧವಾರ ಭಾರತದಲ್ಲಿ ಸುಧಾರಿತ ಕೃತಕ ಬುದ್ಧಿಮತ್ತೆ (ಎಐ) ವೈಶಿಷ್ಟ್ಯಗಳನ್ನು ಹೊಂದಿರುವ ಎನ್ವಿ ಎಕ್ಸ್ 360 14 ಲ್ಯಾಪ್ ಟಾಪ್ಗಳನ್ನು (Envy x360 14) ಬಿಡುಗಡೆ ಮಾಡಿದೆ. ವಿಶೇಷವಾಗಿ ಕಂಟೆಂಟ್ ಕ್ರಿಯೇಟರ್ಗಳ ಸಮುದಾಯವನ್ನು ಗಮನದಲ್ಲಿರಿಸಿಕೊಂಡು ಈ ಲ್ಯಾಪ್ಟಾಪ್ಗಳನ್ನು ತಯಾರಿಸಲಾಗಿದೆ.
ಈ ಹೊಸ ಲ್ಯಾಪ್ಟಾಪ್ಗಳ ಕೀಬೋರ್ಡ್ನಲ್ಲಿ ಮೈಕ್ರೋಸಾಫ್ಟ್ ಕೋಪೈಲಟ್ ಬಟನ್ ನೀಡಲಾಗಿದೆ. ಇದು ಅಸಿಸ್ಟೆಡ್ ಸರ್ಚ್, ಕಂಟೆಂಟ್ ತಯಾರಿಕೆ ಸೇರಿದಂತೆ ಇನ್ನೂ ಹಲವಾರು ಕೆಲಸಗಳಿಗಾಗಿ ಎಐ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸುತ್ತದೆ.
ಎಚ್ಪಿ ಎಕ್ಸ್ 360 14 ಲ್ಯಾಪ್ಟಾಪ್ ಮೆಟಿಯೋರ್ ಸಿಲ್ವರ್ ಮತ್ತು ಅಟ್ಮಾಸ್ಫಿಯರ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. 1.4 ಕೆಜಿ ತೂಕದ ಈ ಸಾಧನವು 14 ಇಂಚಿನ ಒಎಲ್ಇಡಿ ಟಚ್ ಡಿಸ್ ಪ್ಲೇ ಒಳಗೊಂಡಿದೆ ಮತ್ತು ಅಡೋಬ್ ಫೋಟೋಶಾಪ್ನಂತಹ ಅಪ್ಲಿಕೇಶನ್ಗಳೊಂದಿಗೆ ಉನ್ನತ ಮಟ್ಟದ ಕಂಟೆಂಟ್ ಕ್ರಿಯೇಟ್ ಮಾಡಲು ಅನುಕೂಲವಾಗುವಂತೆ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ಗಳನ್ನು ಹೊಂದಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
"ಈ ಲ್ಯಾಪ್ಟಾಪ್ಗಳು ನ್ಯೂರಲ್ ಪ್ರೊಸೆಸಿಂಗ್ ಯುನಿಟ್ (ಎನ್ಪಿಯು) ಹೊಂದಿದ್ದು, ಇದು ನಿರಂತರ ಸೃಜನಶೀಲತೆ ಮತ್ತು ಉತ್ಪಾದಕತೆಗಾಗಿ ಬ್ಯಾಟರಿ ಆಪ್ಟಿಮೈಸೇಶನ್ಗೆ ಶೇಕಡಾ 65 ರಷ್ಟು ಸಹಾಯ ಮಾಡುತ್ತದೆ" ಎಂದು ಕಂಪನಿ ಹೇಳಿದೆ.