PAN Card Application Status Track:ಆರ್ಥಿಕ, ಹಣಕಾಸು ವಹಿವಾಟು ನಡೆಸುವ ಪ್ರತಿಯೊಬ್ಬರೂ ಪ್ಯಾನ್ ಕಾರ್ಡ್ ಹೊಂದಿರುವುದು ಅವಶ್ಯಕ. ಈಗಾಗಲೇ ನಾವು ಪ್ಯಾನ್ ಕಾರ್ಡ್‌ಗೆ ಆಫ್ಲೈನ್ ಮತ್ತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದರ ಕುರಿತು ವಿವರ ನೀಡಿದ್ದೇವೆ. NSDL, UTIITSL ವೆಬ್‌ಸೈಟ್, ಫೋನ್ ಕರೆ ಮತ್ತು SMS ಮೂಲಕ ನಿಮ್ಮ ಅಪ್ಲಿಕೇಶನ್‌ನ ಸ್ಟೇಟಸ್ ಟ್ರ್ಯಾಕ್ ಮಾಡುವುದು ಹೇಗೆ ಗೊತ್ತೇ?.
- ಪ್ಯಾನ್ ಕಾರ್ಡ್ ಸ್ಟೇಟಸ್ ಪರಿಶೀಲಿಸಲು ಬೇಕಾಗಿರುವ ದಾಖಲೆಗಳು:
NSDL ವೆಬ್‌ಸೈಟ್ ಮೂಲಕ ಸ್ಟೇಟಸ್ ಪರಿಶೀಲಿಸಲು ಸ್ವೀಕೃತಿ ಸಂಖ್ಯೆಯ ಅಗತ್ಯ.
UTITSL ಮೂಲಕ ಸ್ಥಿತಿಯನ್ನು ಪರಿಶೀಲಿಸಲು ಅಪ್ಲಿಕೇಶನ್ ಕೂಪನ್ ಸಂಖ್ಯೆ ಅಗತ್ಯ.
- ದೂರವಾಣಿ ಕರೆ:
ಯಾವುದೇ ದಿನ ಬೆಳಗ್ಗೆ 7ರಿಂದ ರಾತ್ರಿ 11ರವರೆಗೆ ನಿಮ್ಮ ಪ್ಯಾನ್ ಕಾರ್ಡ್ ಸ್ಟೇಟಸ್ ಪರಿಶೀಲಿಸಲು 15-ಅಂಕಿಯ ಸ್ವೀಕೃತಿ ಸಂಖ್ಯೆಯೊಂದಿಗೆ 020-27218080ಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು.
- ವೆಬ್‌ಸೈಟ್:
NSDL ವೆಬ್‌ಸೈಟ್ ಮೂಲಕ ಸ್ಟೇಟಸ್ ಪರಿಶೀಲಿಸುವ ವಿಧಾನ:
ಹಂತ 1 - https://tin.tin.nsdl.com/pantan/StatusTrack.html ಗೆ ಭೇಟಿ ನೀಡಿ
ಹಂತ 2 - ನಿಮ್ಮ 'Application Type' ಆಯ್ಕೆಮಾಡಿ ಮತ್ತು 'PAN- New/Change Request' ಮೇಲೆ ಕ್ಲಿಕ್ ಮಾಡಿ
ಹಂತ 3 - ನಿಮ್ಮ Acknowledge Number ನಮೂದಿಸಿ
ಹಂತ 4 - ಸ್ಟೇಟಸ್ ಪರಿಶೀಲಿಸಲು ಒದಗಿಸಿದ ಕ್ಯಾಪ್ಚಾ ಎಂಟ್ರಿ ಮಾಡಿ
ಹಂತ 5 - 'Submit' ಮೇಲೆ ಕ್ಲಿಕ್ ಮಾಡಿ
ಗಮನಿಸಿ:ಪ್ಯಾನ್ ಕಾರ್ಡ್ ಅಪ್ಲಿಕೇಶನ್‌ನ ಆನ್‌ಲೈನ್ ಟ್ರ್ಯಾಕಿಂಗ್ ಅನ್ನು ಒಬ್ಬ ವ್ಯಕ್ತಿ ಅರ್ಜಿ ಸಲ್ಲಿಸಿದ 24 ಗಂಟೆಗಳ ನಂತರ ಮಾತ್ರ ಪರಿಶೀಲಿಸಬಹುದು.
- UTIITSL (UTI ಇನ್‌ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಮತ್ತು ಸರ್ವಿಸಸ್ ಲಿಮಿಟೆಡ್) ಮೂಲಕ ಪ್ಯಾನ್ ಕಾರ್ಡ್‌ಗೆ ಸಲ್ಲಿಸಿದ ಅರ್ಜಿದಾರರು ಅರ್ಜಿಯ ಸ್ಥಿತಿ ಪರಿಶೀಲಿಸಲು ಅಪ್ಲಿಕೇಶನ್ ಸಂಖ್ಯೆಯನ್ನು ಹೊಂದಿರಬೇಕು.
PAN ಕಾರ್ಡ್ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಲು ಅರ್ಜಿದಾರರು ಕೆಳಗೆ ನೀಡಿರುವ ಸೂಚನೆಗಳನ್ನು ಅನುಸರಿಸಿ.
ಹಂತ 1 - UTIITSLಗೆ ಭೇಟಿ ನೀಡಿ
ಹಂತ 2 - ನಿಮ್ಮ 'PAN ಸಂಖ್ಯೆ' ಅಥವಾ 'ಅಪ್ಲಿಕೇಶನ್ ಕೂಪನ್ ಸಂಖ್ಯೆ' ನಮೂದಿಸಿ
ಹಂತ 3 - ನಿಮ್ಮ 'ಹುಟ್ಟಿದ ದಿನಾಂಕ' ನಮೂದಿಸಿ
ಹಂತ 4 - 'ಕ್ಯಾಪ್ಚಾ ಕೋಡ್' ಎಂಟರ್ ಮಾಡಿ