TVS Apache RR 310 Launched: TVS ಮೋಟಾರ್ ಕಂಪನಿಯು ಅಪ್ಡೇಟೆಡ್ 2024 TVS Apache RR 310 ಬೈಕ್ ಹೊರತಂದಿದೆ. ಇದು ವಿಂಗ್ಲೆಟ್‌ಗಳ ಸೇರ್ಪಡೆ ಸೇರಿದಂತೆ ಕಾರ್ಯಕ್ಷಮತೆಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕ್ವಿಕ್‌ಶಿಫ್ಟರ್ ಇಲ್ಲದ ರೇಸಿಂಗ್ ರೆಡ್ ವೇರಿಯಂಟ್‌ನ ಬೆಲೆ 2.75 ಲಕ್ಷ ರೂ.ಯಿಂದ ಪ್ರಾರಂಭವಾದರೆ, ಕ್ವಿಕ್‌ಶಿಫ್ಟರ್ ಹೊಂದಿರುವ ರೂಪಾಂತರದ ಬೆಲೆ 2.92 ಲಕ್ಷ ರೂ.ಯಿಂದ ಶುರುವಾಗುತ್ತದೆ. ನ್ಯೂ ಬಾಂಬರ್ ಗ್ರೇ ಕಲರ್ ಆಯ್ಕೆ 2.97 ಲಕ್ಷ ರೂ.ಯಲ್ಲಿ ಲಭ್ಯ (ಎಲ್ಲ ಬೆಲೆಗಳು ಎಕ್ಸ್ ಶೋ ರೂಂನಂತೆ).
ಅಪಾಚೆ RR 310 ನ 2024 ಮಾದರಿಯನ್ನು ಉತ್ತಮ ಫರ್ಪಾರ್ಮೆನ್ಸ್ಗಾಗಿ ಆಪ್ಟಿಮೈಸ್ ಮಾಡಲಾಗಿದೆ. ಇದು ರೇಸಿಂಗ್ ಉತ್ಸಾಹಿಗಳಿಗೆ ಹೆಚ್ಚು ಸ್ಪರ್ಧಾತ್ಮಕ ಆಯ್ಕೆ ಎನ್ನಬಹುದು. ಒಂದು ಪ್ರಮುಖ ಅಂಶವೆಂದರೆ, ವಿಂಗ್ಲೆಟ್‌ಗಳ ಬಳಕೆಯಿಂದ ಸರಿಸುಮಾರು 3 ಕೆ.ಜಿ ಡೌನ್‌ಫೋರ್ಸ್ ಉತ್ಪಾದಿಸುತ್ತದೆ. ಇದರಿಂದ ಮೋಟಾರ್‌ಸೈಕಲ್‌ನ ಸ್ಥಿರತೆ ಸುಧಾರಿಸುತ್ತದೆ ಮತ್ತು ಹೆಚ್ಚಿನ ವೇಗದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ. ವಿನ್ಯಾಸ ಹಿಂದಿನ ಆವೃತ್ತಿಯಂತಿದೆ.
2024 ಅಪಾಚೆ RR 310 ಅದೇ 312 cc ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದೆ. ಆದರೆ ಈಗ ಈ ಎಂಜಿನ್ 9,800 rpmನಲ್ಲಿ 38 bhp ಪವರ್ ಮತ್ತು 7,900 rpmನಲ್ಲಿ 29 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು ಮೊದಲಿಗಿಂತ ಹೆಚ್ಚು.
ಈ ಬೈಕ್ 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್ ಹೊಂದಿದೆ. ಸಸ್ಪೆನ್ಷನ್ ಡ್ಯೂಟಿಗಳನ್ನು ಮುಂಭಾಗದಲ್ಲಿ USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅಬ್ಸಾರ್ಬರ್‌ನಿಂದ ನಿರ್ವಹಿಸಲಾಗುತ್ತದೆ. ಬಿಲ್ಡ್ ಟು ಆರ್ಡರ್ (BTO) ಕಿಟ್‌ನ ಮೂಲಕ ಸಂಪೂರ್ಣ ಹೊಂದಾಣಿಕೆಯ ಸಸ್ಪೆನ್ಷನ್ ಇದರಲ್ಲಿದೆ. ಬ್ರೇಕಿಂಗ್ ಅನ್ನು ಡ್ಯುಯಲ್-ಚಾನೆಲ್ ಎಬಿಎಸ್ ಸಪೋರ್ಟ್ ಮಾಡುತ್ತದೆ. ಆದರೆ ಬೈಕ್ ಟಿಎಫ್‌ಟಿ ಡಿಸ್ಪ್ಲೇ, ಆಲ್-ಎಲ್‌ಇಡಿ ಲೈಟಿಂಗ್, ಮಲ್ಟಿಪಲ್ ರೈಡ್ ಮೋಡ್‌ಗಳು ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನೊಂದಿಗೆ ಬ್ಲೂಟೂತ್ ಸಂಪರ್ಕದಂತಹ ಎಲೆಕ್ಟ್ರಾನಿಕ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. TVSನ BTO ಪ್ಲಾಟ್‌ಫಾರ್ಮ್ ಅಡಿಯಲ್ಲಿ ಫರ್ಪಾರ್ಮೆನ್ಸ್ ಹೆಚ್ಚಿಸಲು ಎರಡು ಹೆಚ್ಚುವರಿ ಕಿಟ್‌ಗಳನ್ನು ನೀಡಲಾಗಿದೆ.
2024 ಅಪಾಚೆ RR 310ಗಾಗಿ ಬುಕ್ಕಿಂಗ್‌ಗಳು ಈಗ TVS ಪ್ರೀಮಿಯಂ ಡೀಲರ್‌ಶಿಪ್‌ಗಳಲ್ಲಿ ಆರಂಭವಾಗಿದೆ. ಇದು ಸ್ಪೋರ್ಟ್ ಬೈಕ್ ವಿಭಾಗದಲ್ಲಿ KTM RC 390 ಮತ್ತು ಎಪ್ರಿಲಿಯಾ RS 457ನಂತಹ ಬೈಕ್‌ಗಳೊಂದಿಗೆ ಸ್ಪರ್ಧಿಸಲಿದೆ.
ಇದನ್ನೂ ಓದಿ: ಆಕರ್ಷಕ ಬೈಕ್‌ಗಳನ್ನು ಪರಿಚಯಿಸಿದ BMW: ಉತ್ಸಾಹಿ ಪ್ರವಾಸಿಗರಿಗೆ ಹಬ್ಬ! - BMW New Bikes