ETV Bharat / technology

ಹೊಂಡಾ ಬೈಕ್​ಗಳು ರಿಕಾಲ್​: ಈ ಮಾಡೆಲ್​ಗಳ ಬಿಡಿಭಾಗಗಳು ಉಚಿತ - Honda Recall - HONDA RECALL

Honda Recall: ಗ್ರಾಹಕರ ನಂಬಿಕೆಯನ್ನು ಕಾಪಾಡಿಕೊಳ್ಳಲು ಹೊಂಡಾ ತನ್ನ ಹೆಚ್ಚಿನ ಸಂಖ್ಯೆಯ ಬೈಕ್‌ಗಳನ್ನು ಹಿಂಪಡೆಯಲು ಕ್ರಮ ಕೈಗೊಂಡಿದೆ.

HONDA BIKES  HONDA BIKES FEATURES  HONDA SPEED ​​SENSOR
ಹೊಂಡಾ ಬೈಕ್​ (Honda)
author img

By ETV Bharat Tech Team

Published : Sep 19, 2024, 10:15 AM IST

Honda Recall: ಪ್ರಮುಖ ಮೋಟಾರ್‌ಸೈಕಲ್ ತಯಾರಕ ಹೊಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) 300-350 ಸಿಸಿ ಬೈಕ್‌ಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಸ್ಪೀಡ್​ ಸೆನ್ಸಾರ್​ ಮತ್ತು ಕ್ಯಾಮ್‌ಶಾಫ್ಟ್‌ನಲ್ಲಿನ ದೋಷಗಳಿಂದಾಗಿ ಈ ಬೈಕ್‌ಗಳನ್ನು ಹಿಂಪಡೆಯಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಕಂಪನಿ ಹಿಂಪಡೆದಿರುವ ಮಾದರಿಗಳಲ್ಲಿ CB300F, CB300R, CB359, HNES 350 ಮತ್ತು CB350RS ಸೇರಿವೆ. ಇದು ಅಕ್ಟೋಬರ್ 2020 ಮತ್ತು ಏಪ್ರಿಲ್ 2024ರ ನಡುವೆ ತಯಾರಿಸಲಾದ ಮಾದರಿಗಳನ್ನು ಒಳಗೊಂಡಿದೆ.

ಮೋಲ್ಡಿಂಗ್ ಪ್ರಕ್ರಿಯೆಯಲ್ಲಿನ ತಪ್ಪಿನಿಂದಾಗಿ ಸ್ಪೀಡ್​ ಸೆನ್ಸಾರ್​ನಲ್ಲಿ ನೀರು ಒಳನುಸುಳುವ ಸಾಧ್ಯತೆಯಿದೆ. ಇದರಿಂದಾಗಿ ಸ್ಪೀಡ್​ ಸೆನ್ಸಾರ್​ದೊಂದಿಗೆ ಟ್ರಾಕ್ಷನ್​ ಕಂಟ್ರೋಲ್​ ಅಥವಾ ಎಬಿಎಸ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಬಹುದು ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಕೆಲವು ಸಂದರ್ಭಗಳಲ್ಲಿ ಬ್ರೇಕಿಂಗ್‌ನಲ್ಲಿ ದೋಷಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಅಕ್ಟೋಬರ್ 2020 ಮತ್ತು ಏಪ್ರಿಲ್ 2024ರ ನಡುವೆ ತಯಾರಿಸಲಾದ ಘಟಕಗಳಲ್ಲಿ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ. ಹೀಗಾಗಿ ಕಂಪನಿ 300-350 ಸಿಸಿ ಬೈಕ್​ಗಳನ್ನು ಹಿಂಪಡೆಯಲು ತೀರ್ಮಾನಿಸಿದೆ.

ಅಲ್ಲದೆ, ಜೂನ್ ಮತ್ತು ಜುಲೈ 2024ರ ನಡುವೆ ತಯಾರಿಸಲಾದ CB350, Hness CB350 ಮತ್ತು CB350RS ಮಾದರಿಗಳಲ್ಲಿ ಕ್ಯಾಮ್‌ಶಾಫ್ಟ್‌ನ ಕಾರ್ಯಕ್ಷಮತೆಯಲ್ಲಿ ದೋಷವಿದೆ ಎಂದು ಹೇಳಿದೆ. ಮುಂಜಾಗ್ರತಾ ಕ್ರಮವಾಗಿ ಸಂಬಂಧಿಸಿದ ಬಿಡಿ ಭಾಗಗಳನ್ನು ಉಚಿತವಾಗಿ ಬದಲಾಯಿಸಲಾಗುತ್ತಿದೆ ಎಂದಿದೆ. ವಾರಂಟಿಯನ್ನು ಲೆಕ್ಕಿಸದೆ ಕಂಪನಿಯ ಎಲ್ಲಾ ಬಿಗ್‌ವೀಲ್ ಡೀಲರ್‌ಶಿಪ್‌ಗಳಲ್ಲಿ ಈ ಬದಲಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ಕಂಪನಿ ಬಹಿರಂಗಪಡಿಸಿದೆ.

ಇದನ್ನೂ ಓದಿ: ಆಕರ್ಷಕ ಬೈಕ್‌ಗಳನ್ನು ಪರಿಚಯಿಸಿದ BMW: ಉತ್ಸಾಹಿ ಪ್ರವಾಸಿಗರಿಗೆ ಹಬ್ಬ! - BMW New Bikes

ETV Bharat Logo

Copyright © 2025 Ushodaya Enterprises Pvt. Ltd., All Rights Reserved.