ETV Bharat / international

ವಾಕಿ ಟಾಕಿಗಳು ಸ್ಫೋಟ: 20 ಸಾವು, 450 ಮಂದಿಗೆ ಗಾಯ; ಇದು ಯುದ್ಧದ ಹೊಸ ಅಧ್ಯಾಯ ಎಂದ ಇಸ್ರೇಲ್ - Lebanon Blast

author img

By ETV Bharat Karnataka Team

Published : 13 hours ago

Updated : 13 hours ago

ಲೆಬನಾನ್​ನಲ್ಲಿ ನಡೆದ ಸ್ಫೋಟದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಇದು ಯುದ್ಧದ ಹೊಸ ಹಂತ ಎಂದು ಇಸ್ರೇಲ್ ಘೋಷಿಸಿದೆ.

ಲೆಬನಾನ್​ನಲ್ಲಿ ಸ್ಫೋಟ
ಲೆಬನಾನ್​ನಲ್ಲಿ ಸ್ಫೋಟ (AFP)

ಲೆಬನಾನ್: ಲೆಬನಾನ್​ನಲ್ಲಿ ಹಲವೆಡೆ ಎಲೆಕ್ಟ್ರಾನಿಕ್ಸ್ ವಾಕಿಟಾಕಿ ಮತ್ತು ಸೋಲಾರ್ ಸಲಕರಣೆಗಳು ಸ್ಫೋಟಗೊಂಡಿದ್ದು, ಕನಿಷ್ಠ 20 ಜನರು ಮೃತಪಟ್ಟು, 450 ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಲೆಬೆನಾನ್ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಹಿಜ್ಬುಲ್ಲಾ ಬಳಸುತ್ತಿದ್ದ ವಾಕಿಟಾಕಿಗಳು ಸ್ಫೋಟಗೊಂಡಿವೆ ಎಂದು ವರದಿಯಾಗಿದೆ.

ಲೆಬನಾನ್​ನಲ್ಲಿ ಪೇಜರ್​ಗಳು ಸ್ಫೋಟಗೊಂಡು 12 ಜನ ಸಾವನ್ನಪ್ಪಿ, 280ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬುಧವಾರವಷ್ಟೇ ವರದಿಯಾಗಿತ್ತು. ಈ ಬೆನ್ನಲ್ಲೇ ದೇಶಾದ್ಯಂತ ಎಲೆಕ್ಟ್ರಾನಿಕ್ಸ್ ಸಂವಹನ ಸಾಧನಗಳು ಬ್ಲಾಸ್ಟ್ ಆಗಿದ್ದು, ಅಪಾರ ಸಾವು-ನೋವು ಸಂಭವಿಸಿದೆ. ಹಿಜ್ಬುಲ್ಲಾವನ್ನು ಗುರಿಯಾಗಿಟ್ಟುಕೊಂಡು ಇಸ್ರೇಲ್ ದಾಳಿ ನಡೆಸಿದ್ದು, ಯುದ್ಧದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಈ ದೇಶಗಳಲ್ಲಿ ಉಂಟಾಗಿದೆ.

ಈ ಮಧ್ಯೆ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಸಾಮಾಜಿಕ ಜಾಲಾತಾಣ 'ಎಕ್ಸ್'​ನಲ್ಲಿ ಪೋಸ್ಟ್ ಮಾಡಿ, 'ಇದು ಯುದ್ಧದ ಹೊಸ ಹಂತ. ನಾವು ದೇಶದ ಉತ್ತರದ ಪ್ರದೇಶಗಳತ್ತ ಗಮನ ಕೇಂದ್ರೀಕರಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.

'ನಾವು ಯುದ್ಧದ ಹೊಸ ಹಂತವನ್ನು ಆರಂಭಿಸಿದ್ದೇವೆ. ದೇಶದ ಉತ್ತರ ಭಾಗಗಳಿಗೆ ಸೇನೆ ಹಾಗೂ ಸಂಪನ್ಮೂಲಗಳನ್ನು ಕಳುಹಿಸುತ್ತಿದ್ದೇವೆ. ಇಸ್ರೇಲ್​ನ ಉತ್ತರ ಭಾಗದ ಜನರು ಸುರಕ್ಷಿತವಾಗಿ ಮನೆಗೆ ಮರಳಲು ಎಲ್ಲ ಕ್ರಮ ಕೈಗೊಳ್ಳಲು ಭದ್ರತಾ ವ್ಯವಸ್ಥೆ ಬಲಿಷ್ಠಗೊಳಿಸಿದ್ದೇವೆ' ಎಂದು ಇಸ್ರೇಲ್ ರಕ್ಷಣಾ ಸಚಿವರು ಪೋಸ್ಟ್ ಮಾಡಿದ್ದಾರೆ.

ಬುಧವಾರ, ಲೆಬನಾನ್‌ನಲ್ಲಿ ವಾಕಿ-ಟಾಕಿ ಸ್ಫೋಟಗಳ ನಂತರ ಗಾಯಗೊಂಡವರನ್ನು ರಕ್ಷಿಸಲು ಮತ್ತು ಸ್ಥಳಾಂತರಿಸಲು ಲೆಬನಾನಿನ ರೆಡ್‌ಕ್ರಾಸ್‌ನ ಡಜನ್​ಗಟ್ಟಲೆ ಆಂಬ್ಯುಲೆನ್ಸ್​ ಸಿಬ್ಬಂದಿ ಶ್ರಮಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ದಕ್ಷಿಣ ಲೆಬನಾನ್, ಬೈರುತ್‌ನ ದಕ್ಷಿಣ ಉಪನಗರಗಳು ಮತ್ತು ಮಧ್ಯ ಬೆಕಾ ಕಣಿವೆಯಲ್ಲಿ 30ಕ್ಕೂ ಹೆಚ್ಚು ಲೆಬನಾನಿನ ರೆಡ್‌ಕ್ರಾಸ್ ತುರ್ತು ವೈದ್ಯಕೀಯ ತಂಡಗಳು ಕೆಲಸ ಮಾಡುತ್ತಿವೆ. ಹೆಚ್ಚುವರಿಯಾಗಿ, ಮೌಂಟ್ ಲೆಬನಾನ್ ಮತ್ತು ಬೈರುತ್‌ನಲ್ಲಿ ಜನರನ್ನು ಸ್ಥಳಾಂತರಿಸಲು 50ಕ್ಕೂ ಆಂಬ್ಯುಲೆನ್ಸ್ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ.

ವಾಕಿ-ಟಾಕಿಗಳು ಸ್ಫೋಟಗೊಂಡ ಪರಿಣಾಮ 60 ಮನೆಗಳು ಮತ್ತು ಅಂಗಡಿಗಳಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟುಹೋಗಿವೆ. ಒಂದು ಲಿಥಿಯಂ ಬ್ಯಾಟರಿ ಅಂಗಡಿ ಹೊತ್ತು ಉರಿದಿದೆ. ಸುಮಾರು 15 ಕಾರುಗಳು ಮತ್ತು ಡಜನ್‌ಗಟ್ಟಲೆ ಮೋಟರ್‌ಸೈಕಲ್‌ಗಳು ಬೆಂಕಿಗೆ ಆಹುತಿಯಾದವು ಮತ್ತು ಎರಡು ಫಿಂಗರ್‌ಪ್ರಿಂಟ್ ಸಾಧನಗಳು ಸುಟ್ಟು ಹೋಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 7ರ ಬಳಿಕ ಇಸ್ರೇಲ್-ಹಿಜ್ಬುಲ್ಲಾ ಮಧ್ಯೆ ಗುಂಡಿನ ಚಕಮಕಿ ನಡೆಯುತ್ತಿದೆ. ಇದರಿಂದ ಹಲವು ಸಂದರ್ಭಗಳಲ್ಲಿ ಈ ದೇಶಗಳಲ್ಲಿ ಯುದ್ಧದ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಈವರೆಗೆ 41 ಸಾವಿರ ಪ್ಯಾಲೆಸ್ತೇನಿಯರು ಹತರಾಗಿದ್ದಾರೆ ಎಂಂದು ಗಾಜಾ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಇನ್ನು, ಇಸ್ರೇಲ್ ಈವರೆಗೆ 17 ಸಾವಿರ ಉಗ್ರರನ್ನು ಹೊಡೆದುರುಳಿಸಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಲೆಬನಾನ್, ಸಿರಿಯಾ ಮೇಲೆ ಪೇಜರ್‌ ದಾಳಿ: 9 ಸಾವು, 2,750ಕ್ಕೂ ಹೆಚ್ಚು ಮಂದಿಗೆ ಗಾಯ - Pager Attack

Last Updated : 13 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.