ನವದೆಹಲಿ: ಕಳೆದ ನಾಲ್ಕು ತಿಂಗಳ ಸತತ ಕುಸಿತದ ಬಳಿಕ ಭಾರತದ ವಿದೇಶಿ ವಿನಿಮಯ ಸಂಗ್ರಹವು ಎರಡನೇ ವಾರವೂ ಕೂಡಾ ಏರಿಕೆ ಕಂಡಿದೆ. ಜನವರಿ 31ರ ವಾರಾಂತ್ಯಾದಲ್ಲಿ ವಿದೇಶಿ ದೇಶದ ವಿನಿಮಯ ಮೀಸಲು 1.05 ಬಿಲಿಯನ್ ಅಮೆರಿಕ ಡಾಲರ್ನಿಂದ 630.607 ಬಿಲಿಯನ್ ಅಮೆರಿಕನ್ ಡಾಲರ್ ಏರಿಕೆ ಕಂಡಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ದತ್ತಾಂಶಗಳು ತಿಳಿಸಿವೆ.
ಕಳೆದ ಎರಡು ವಾರಗಳ ಹೊರತಾಗಿ, ದೇಶದ ವಿದೇಶೀ ವಿನಿಮಯ ಮೀಸಲು ಕಳೆದ 16 ವಾರಗಳು ಕುಸಿತ ಕಂಡಿತ್ತು. ಈ ಮೂಲಕ ಸುಮಾರು 11 ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. ವಿದೇಶಿ ವಿನಿಮ ಮೀಸಲು ಸೆಪ್ಟೆಂಬರ್ನಲ್ಲಿ 704.80 ಬಿಲಿಯನ್ ಡಾಲರ್ ಗರಿಷ್ಠ ಮಟ್ಟ ತಲುಪಿದ ಬಳಿಕ ಕುಸಿಯಲಾರಂಭಿಸಿತ್ತು. ಒಟ್ಟಾರೆ ಶೇ 10 ರಷ್ಟು ಕುಸಿತ ಕಾಣುವ ಮೂಲಕ ಭೀತಿಗೆ ಕಾರಣವಾಗಿತ್ತು.
ತೀವ್ರವಾಗಿ ಕುಸಿತ ಕಾಣುತ್ತಿರುವ ರೂಪಾಯಿ ಬೆಲೆಯನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಆರ್ಬಿಐ ಮಧ್ಯ ಪ್ರವೇಶ ಮಾಡಿತ್ತು. ಇದರ ಹೊರತಾಗಿಯೂ, ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಹಾಗೂ ಹೊಸ ದಾಗಿ ಅಧಿಕಾರಕ್ಕೆ ಬಂದಿರುವ ಡೊನಾಲ್ಡ್ ಟ್ರಂಪ್ ಅವರ ನೀತಿಗಳಿಂದಾಗಿ ಡಾಲರ್ ಬಲವರ್ದನೆಗೊಳ್ಳುತ್ತಿದೆ. ಹೀಗಾಗಿ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ.
ಆರ್ಬಿಐನ ಇತ್ತೀಚಿನ ದತ್ತಾಂಶಗಳ ಪ್ರಕಾರ, ಭಾರತದ ವಿದೇಶಿ ವಿನಿಮಯ ಸಂಗ್ರಹವು 537.684 ಬಿಲಿಯನ್ ಅಮೆರಿಕನ್ ಡಾಲರ್ಗೆ ತಲುಪಿದೆ. ಪ್ರಸ್ತುತ ಬಂಗಾರದ ಮೀಸಲು 70.893 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಭಾರತದ ಬಳಿ ಇರುವ ಈ ವಿದೇಶಿ ವಿನಿಮಯ ಸಂಗ್ರಹ ಮೀಸಲು ಪ್ರಮಾಣ ಅಂದಾಜು 11 ತಿಂಗಳ ಯೋಜಿತ ಆಮದುಗಳನ್ನು ಸರಿದೂಗಿಸಲು ಸಾಕಾಗುತ್ತದೆ ಎಂದು ಆರ್ಬಿಐನ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಹಿಳೆಯರಿಗೆ ಅಷ್ಟೇ ಅಲ್ಲ ಇನ್ಮುಂದೆ ಪುರುಷರಿಗೂ ಸ್ವಸಹಾಯ ಸಂಘ: ಉಳಿತಾಯದ ಆರುಪಟ್ಟು ಸಾಲ ಸೌಲಭ್ಯ! ಏನೆಲ್ಲ ನಿಯಮ?