India vs England 2nd ODI: ಚಾಂಪಿಯನ್ಸ್ ಟ್ರೋಫಿಗೂ ಮೊದಲು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ಆಡುತ್ತಿವೆ. ಗುರುವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ರೋಹಿತ್ ಸೇನೆ ಆಂಗ್ಲರನ್ನು ಮಣಿಸಿ 1-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ಎರಡನೇ ಪಂದ್ಯಕ್ಕಾಗಿ ತಂಡಗಳು ಸಜ್ಜಾಗಿವೆ.
ಈ ಪಂದ್ಯಕ್ಕೆ ಒಡಿಶಾದ ಬಾರಾಬತಿ ಮೈದಾನ ಆತಿಥ್ಯ ವಹಿಸಿಕೊಂಡಿದೆ. 6 ವರ್ಷಗಳ ನಂತರ ಮೊದಲ ಬಾರಿಗೆ ಇಲ್ಲಿ ಏಕದಿನ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾ ಇಲ್ಲಿ ಆಡಿರುವ ಹೆಚ್ಚಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದೆ.
With @klrahul in the mix, who should be India's first choice? @ImRaina and @cricketaakash dive into the debate, alongside @akshar2026 impressive batting form and Rishabh Pant's game-changing potential!#INDvENGonJioStar 2nd ODI 👉 SUN, 9th FEB, PM on Disney+ Hotstar, Star… pic.twitter.com/BvWv9P9awm
— Star Sports (@StarSportsIndia) February 6, 2025
ಕಟಕ್ನಲ್ಲಿ ಟೀಂ ಇಂಡಿಯಾದ ದಾಖಲೆ: ಬಾರಾಬತಿ ಮೈದಾನದಲ್ಲಿ ಭಾರತ ಒಟ್ಟು 17 ಪಂದ್ಯಗಳನ್ನು ಆಡಿದೆ. ಇದರಲ್ಲಿ 13 ಬಾರಿ ಜಯಭೇರಿ ಬಾರಿಸಿದೆ. 4 ಪಂದ್ಯಗಳಲ್ಲಿ ಮಾತ್ರ ಹಿನ್ನಡೆ ಸಾಧಿಸಿದೆ. ಆದರೆ 2007ರಿಂದ 2019ರವರೆಗೆ ಭಾರತ ಈ ಮೈದಾನದಲ್ಲಿ ಆಡಿರುವ ಏಳು ಏಕದಿನ ಪಂದ್ಯದಲ್ಲಿ ಒಮ್ಮೆಯೂ ಸೋಲನುಭವಿಸಿಲ್ಲ.
ಹೆಡ್ ಟು ಹೆಡ್: ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈವರೆಗೆ ಒಟ್ಟು 108 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇವುಗಳಲ್ಲಿ ಇಂಗ್ಲೆಂಡ್ 44 ಬಾರಿ ಗೆಲುವು ಸಾಧಿಸಿದ್ದರೆ, ಭಾರತ 58 ಪಂದ್ಯಗಳನ್ನು ಗೆದ್ದುಕೊಂಡು ಆಂಗ್ಲರ ವಿರುದ್ಧ ಪ್ರಾಬಲ್ಯ ಮೆರೆದಿದೆ. ಉಳಿದಂತೆ ಈ ಎರಡೂ ತಂಡಗಳ ನಡುವಿನ 3 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡರೆ, 2 ಪಂದ್ಯಗಳು ರದ್ದಾಗಿವೆ.
Nagpur ✅
— BCCI (@BCCI) February 8, 2025
Hello Cuttack! 👋#TeamIndia have arrived for the 2nd #INDvENG ODI @IDFCFIRSTBank pic.twitter.com/XhdtAixiyF
IND vs ENG ODI ನೇರಪ್ರಸಾರ, ಲೈವ್ ಸ್ಟ್ರೀಮಿಂಗ್ ವಿವರ:
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ ಪ್ಲಸ್ ಮತ್ತು ಹಾಟ್ಸ್ಟಾರ್
ಪಂದ್ಯ ಪ್ರಾರಂಭ: ಮಧ್ಯಾಹ್ನ 1.30ಕ್ಕೆ
ಸಂಭಾವ್ಯ ತಂಡಗಳು- ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ರಿಷಭ್ ಪಂತ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅರ್ಷ್‌ದೀಪ್ ಸಿಂಗ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ.
ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಬೆನ್ ಡಕೆಟ್, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆಥೆಲ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್‌ಸ್ಟೋನ್, ಬ್ರೈಡನ್ ಕಾರ್ಸೆ, ಜೇಮೀ ಓವರ್ಟನ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಶಾಕಿಬ್ ಮಹಮೂದ್, ಮಾರ್ಕ್ ವುಡ್.
ಇದನ್ನೂ ಓದಿ: 2nd ODI: ಭಾರತಕ್ಕೆ ಡೇಂಜರಸ್ ಆಟಗಾರನ ಎಂಟ್ರಿ; ಇಂಗ್ಲೆಂಡ್ಗೆ ಹೆಚ್ಚಿತು ಆತಂಕ!