ನವದೆಹಲಿ: ಆಮ್ ಆದ್ಮಿ ಪಕ್ಷದ ಹಿರಿಯ ನಾಯಕಿ ಹಾಗೂ ದಿಲ್ಲಿ ಮುಖ್ಯಮಂತ್ರಿ ಅತಿಶಿ ಸಾವಿರಕ್ಕೂ ಹೆಚ್ಚಿನ ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ. ಅರವಿಂದ್ ಕೇಜ್ರಿವಾಲ್ ಹಾಗೂ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಈ ಇಬ್ಬರ ಸೋಲಿನ ನಡುವೆ ಅತಿಶಿ ಗೆಲುವಿನ ನಗೆ ಬೀರಿದ್ದಾರೆ. ಇದು ಪಕ್ಷಕ್ಕೆ ತುಸು ನೆಮ್ಮದಿ ತಂದಿದೆ. ಸಿಎಂ ಸ್ಥಾನದಲ್ಲಿದ್ದೂ ಸತತ ಹಿನ್ನಡೆ ಅನುಭವಿಸಿದ್ದ ಅತಿಶಿ ಅಂತಿಮ ಹಂತದಲ್ಲಿ ಗೆಲುವಿನ ನಗೆ ಬೀರಿ, ತಮ್ಮ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ.
ಕಲ್ಕಾಜಿ ಕ್ಷೇತ್ರವು ಹಾಲಿ ಮುಖ್ಯಮಂತ್ರಿ ರೇಸ್‌ನಲ್ಲಿ ತ್ರಿಕೋನ ಕದನಕ್ಕೆ ಸಾಕ್ಷಿಯಾಗಿದೆ. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮುನ್ನಡೆಸುತ್ತಿರುವ ಕಾಂಗ್ರೆಸ್‌ನ ಅಲ್ಕಾ ಲಾಂಬಾ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಮೊದಲ ಸುತ್ತಿನ ಅಂಚೆ ಮತ ಎಣಿಕೆಯಲ್ಲಿ ಬಿಧುರಿ ಮುನ್ನಡೆ ಸಾಧಿಸಿದ್ದರು. ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಿತ್ತು. ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಸಲಾಯಿತು. ಬೆಳಗ್ಗೆ 8.30ಕ್ಕೆ ವಿದ್ಯುನ್ಮಾನ ಮತಯಂತ್ರದ ಎಣಿಕೆ ಕಾರ್ಯ ಆರಂಭವಾಗಿತ್ತು.
ಇದನ್ನು ಓದಿ:ಆಪ್ ವರಿಷ್ಠ ಅರವಿಂದ್ ಕೇಜ್ರಿವಾಲ್ಗೆ ಭಾರಿ ಆಘಾತ: ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೂ ಸೋಲು