ETV Bharat / technology

ಸ್ಮಾರ್ಟ್​ಫೋನ್​ಗಳ ಮೇಲೆ ಭರಪೂರ ಡಿಸ್ಕೌಂಟ್​ ನೀಡಿದ ಫ್ಲಿಪ್​ಕಾರ್ಟ್​ - Flipkart Big Billion Days Sale - FLIPKART BIG BILLION DAYS SALE

Flipkart Big Billion Days Offers On Mobiles: ಹಬ್ಬದ ಸೀಸನ್ ಪ್ರಾರಂಭವಾಗುತ್ತಿದ್ದಂತೆ ಫ್ಲಿಪ್‌ಕಾರ್ಟ್, ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಆಫರ್​ಗಳನ್ನು ಘೋಷಿಸಿದೆ. ತನ್ನ ಅತಿದೊಡ್ಡ ಶಾಪಿಂಗ್ ಈವೆಂಟ್‌ಗಳಲ್ಲಿ ಒಂದಾದ ಬಿಗ್ ಬಿಲಿಯನ್ ಡೇಸ್ ಮಾರಾಟದ ಭಾಗವಾಗಿ ಕಂಪೆನಿ​ ಕೆಲವು ಮೊಬೈಲ್‌ಗಳಲ್ಲಿ ನೀಡುತ್ತಿರುವ ಡೀಲ್‌ಗಳನ್ನು ಬಹಿರಂಗಪಡಿಸಿದೆ.

OFFERS ON MOBILES  UPCOMING SALE ON FLIPKART 2024  FLIPKART OFFERS ON MOBILES
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇಸ್ (Flipkart)
author img

By ETV Bharat Tech Team

Published : Sep 19, 2024, 8:48 AM IST

Flipkart Big Billion Days Offers On Mobiles: ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್‌ಪ್ರಿಯರಿಗಾಗಿ ಬಂಪರ್ ಆಫರ್‌ಗಳನ್ನು ಹೊತ್ತು ತಂದಿದೆ. ಹಬ್ಬದ ಸೀಸನ್‌ಗಾಗಿ​ ಬಿಗ್ ಬಿಲಿಯನ್ ಡೇಸ್ ಮಾರಾಟ ದಿನಾಂಕಗಳನ್ನು ಇತ್ತೀಚೆಗೆ ಘೋಷಿಸಿದೆ. ಈ ಮಾರಾಟ ಇದೇ ತಿಂಗಳ 27ರಿಂದ ಆರಂಭವಾಗಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಮಾರಾಟ ಒಂದು ದಿನ ಮುಂಚಿತವಾಗಿ ಅಂದ್ರೆ ಸೆಪ್ಟೆಂಬರ್ 26ರಂದು ಲಭ್ಯವಿರುತ್ತದೆ.

ಈ ಸೇಲ್‌ನ ಭಾಗವಾಗಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇದರೊಂದಿಗೆ ಈ ಬಾರಿಯ ಮಾರಾಟದಲ್ಲಿ ಗ್ರಾಹಕರಿಗೆ ಭರ್ಜರಿ ಕೊಡುಗೆಗಳೂ ಸಿಗಲಿವೆ. ಇತ್ತೀಚೆಗೆ, ಫ್ಲಿಪ್‌ಕಾರ್ಟ್ ಕೆಲವು ಮೊಬೈಲ್‌ಗಳಲ್ಲಿ ನೀಡಲಾಗುವ ಡೀಲ್‌ಗಳನ್ನು ಬಹಿರಂಗಪಡಿಸಿತ್ತು.

ಸ್ಮಾರ್ಟ್‌ಫೋನ್‌ಗಳ ಮೇಲಿನ ಕೊಡುಗೆಗಳು:

  • ಗೂಗಲ್ ಪಿಕ್ಸೆಲ್ 8: ಬಿಗ್ ಬಿಲಿಯನ್ ಡೇಸ್‌ನ ಭಾಗವಾಗಿ ಗೂಗಲ್ ಪಿಕ್ಸೆಲ್ 8 ಫೋನ್‌ನಲ್ಲಿ ಫ್ಲಿಪ್‌ಕಾರ್ಟ್ ರಿಯಾಯಿತಿಗಳನ್ನು ನೀಡುತ್ತಿದೆ. ಈ ಮೊಬೈಲ್‌ನ 8GB + 128GB ರೂಪಾಂತರವು 75,999 ರೂ.ಗಿಂತ ಕಡಿಮೆ ಬೆಲೆಗೆ ಸಿಗಲಿದೆ.
  • Samsung Galaxy S23: Samsung Galaxy S23 8GB + 128GB ರೂಪಾಂತರವನ್ನು 40 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
  • Samsung Galaxy S23 FE: Samsung Galaxy S23 FE ಬೇಸ್ ವೇರಿಯಂಟ್ ಮೊಬೈಲ್ 30 ಸಾವಿರ ರೂ.ಯೊಳಗೆ ದೊರೆಯಲಿದೆ.
  • Poco X6 Pro 5G: Poco X6 Pro 5G 20 ಸಾವಿರ ರೂ.ಯಲ್ಲೂ ಖರೀದಿಸಬಹುದು.
  • ಇವುಗಳಲ್ಲದೆ CMF Phone 1, Nothing Phone 2A, Poco M6 Plus, Vivo T3X, Infinix Note 40 Pro ಸೇರಿದಂತೆ ಇತರೆ ಮೊಬೈಲ್‌ಗಳನ್ನು ಈ ಸೇಲ್‌ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು.

ಈ ಕಾರ್ಡ್ ಹೊಂದಿರುವವರಿಗೆ ಭಾರಿ ಆಫರ್:

  • HDFC ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಉತ್ತಮ ರಿಯಾಯಿತಿಯನ್ನು ಪಡೆಯಬಹುದು.
  • HDFC ಕಾರ್ಡ್ ಮೂಲಕ ಮಾಡಿದ ಪ್ರತಿ ಖರೀದಿಗೆ 10% ತ್ವರಿತ ರಿಯಾಯಿತಿ ಲಭ್ಯ.
  • ಯುಪಿಐ ಪಾವತಿಗಳ ಮೇಲೆ ರೂ.50 ರಿಯಾಯಿತಿ ನೀಡುತ್ತಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.
  • ಫ್ಲಿಪ್‌ಕಾರ್ಟ್ ಪೇ ಲೆಟರ್ ಪ್ರಕಾರ, ಗ್ರಾಹಕರು ಒಂದು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು.
  • ಇದಲ್ಲದೇ, ಫ್ಲಿಪ್‌ಕಾರ್ಟ್-ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ನೋ-ಕಾಸ್ಟ್ ಇಎಂಐ ಸೌಲಭ್ಯವೂ ಇದೆ.

ಇದನ್ನೂ ಓದಿ: ಡಿಜಿಟಲ್ ಜಾಹೀರಾತು ಪ್ರಕರಣದಲ್ಲಿ 1.5 ಬಿಲಿಯನ್ ಯುರೋ ದಂಡ: ಕಾನೂನು ಹೋರಾಟದಲ್ಲಿ ಗೂಗಲ್​ಗೆ ಜಯ - Google Wins Legal Bid

ETV Bharat Logo

Copyright © 2025 Ushodaya Enterprises Pvt. Ltd., All Rights Reserved.