MGNREGA Job Card:ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಗ್ರಾಮೀಣ ಜನರಿಗೆ ಉದ್ಯೋಗವನ್ನು ಖಾತರಿಪಡಿಸುತ್ತದೆ. MGNREGA ಜಾಬ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಈಗ ಹಿಂದೆಂದಿಗಿಂತಲೂ ಸುಲಭವಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (MGNREGA) ಅಡಿಯಲ್ಲಿ ಸರ್ಕಾರವು ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ 100 ದಿನಗಳ ಉದ್ಯೋಗ ಖಾತ್ರಿಯನ್ನು ನೀಡುತ್ತದೆ.
ನೀವು ನಿಮ್ಮ ಗ್ರಾಮ ಪಂಚಾಯತ್ನಲ್ಲಿ MGNREGA ಅಡಿಯಲ್ಲಿ ಕೆಲಸ ಮಾಡಬೇಕಾದ್ರೆ MGNREGA ಜಾಬ್ ಕಾರ್ಡ್ ಹೊಂದಿರಬೇಕು. ಈ ಕಾರ್ಡ್ ನಿಮಗೆ ಅನೇಕ ಸರ್ಕಾರಿ ಯೋಜನೆಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ನಿಮ್ಮ ಕೆಲಸವನ್ನು ಅದರಲ್ಲಿ ದಾಖಲಿಸಲಾಗುತ್ತದೆ. ಇದರಿಂದ ನೀವು ಮಾಡಿದ ಕೆಲಸದ ಸಂಪೂರ್ಣ ದಾಖಲೆ ಸರ್ಕಾರದ ಬಳಿ ಇರುತ್ತದೆ. ಈ ಜಾಬ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ, ಅರ್ಹತೆಯ ಅವಶ್ಯಕತೆಗಳು ಯಾವುವು? ಅಗತ್ಯವಿರುವ ದಾಖಲೆಯ ವಿವರವಾದ ಮಾಹಿತಿ ಇಲ್ಲಿದೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?:ಮೊದಲನೆಯದಾಗಿ ನೀವು ಉಮಾಂಗ್ ಆಪ್ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಬೇಕು. ಇದರ ನಂತರ, ನೀವು ನೋಂದಾಯಿಸಿಕೊಳ್ಳಬೇಕು ಅಥವಾ ಲಾಗಿನ್ ಆಗಬೇಕು. ಆಗ MNREGA ಉದ್ಯೋಗ ಕಾರ್ಡ್ ಅರ್ಜಿಯ ಮೇಲೆ ಕ್ಲಿಕ್ ಮಾಡಿ. ನೀವು ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅದರಲ್ಲಿ ನಿಮ್ಮ ಸಾಮಾನ್ಯ ಮಾಹಿತಿ ಮತ್ತು ಕುಟುಂಬದ ಮುಖ್ಯಸ್ಥರ ಹೆಸರು, ಪಡಿತರ ಚೀಟಿ ಸಂಖ್ಯೆ ಇತ್ಯಾದಿಗಳನ್ನು ನೀವು ಭರ್ತಿ ಮಾಡಬೇಕು. ಅದರ ನಂತರ ನೀವು ನಿಮ್ಮ ಫೋಟೋವನ್ನು ಅಪ್ಲೋಡ್ ಮಾಡಬೇಕು ಮತ್ತು "Apply for Job Card" ಕ್ಲಿಕ್ ಮಾಡಬೇಕು. ಅದರ ನಂತರ, ನಿಮ್ಮ ಫಾರ್ಮ್ ಅನ್ನು ಸಲ್ಲಿಸಲಾಗುತ್ತದೆ. ಫಾರ್ಮ್ ಸಲ್ಲಿಸಿದ ಬಳಿಕ ನೀವು ನೋಂದಣಿ ಸಂಖ್ಯೆಯನ್ನು ಪಡೆಯುತ್ತೀರಿ.