ಕರ್ನಾಟಕ

karnataka

ETV Bharat / technology

ಪ್ಯಾನ್ ಕಾರ್ಡ್‌ಗಾಗಿ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ, ಶುಲ್ಕ ಎಷ್ಟು? - PAN Card Offline Apply

PAN Card Offline Apply: ಪ್ಯಾನ್ ಕಾರ್ಡ್ ಯಾವುದೇ ಭಾರತೀಯ ನಾಗರಿಕರಿಗೆ ಅಗತ್ಯವಾದ ಗುರುತಿನ ಪುರಾವೆ ದಾಖಲೆಯಾಗಿದೆ. ನಿಮ್ಮ ಎಲ್ಲಾ ತೆರಿಗೆ ನಿರ್ವಹಣಾ ಉದ್ದೇಶಗಳು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಪ್ಯಾನ್​ ಕಾರ್ಡ್​ ಬಳಕೆ ಮುಖ್ಯವಾಗಿದೆ. ಈ ಹಿಂದೆ ನಾವು ಆನ್​ಲೈನ್​ ಮೂಲಕ ಪ್ಯಾನ್​ ಕಾರ್ಡ್​ ಅಪ್ಲೈ ಮಾಡುವುದು ಹೇಗೆ ಎಂದು ತಿಳಿದುಕೊಂಡಿದ್ದೆವು. ಈಗ ಆಫ್​ಲೈನ್​ ಮೂಲಕ ಪ್ಯಾನ್​ ಕಾರ್ಡ್​ ಅಪ್ಲೈ ಮಾಡುವುದು ಹೇಗೆ ಎಂಬುದು ತಿಳಿದುಕೊಳ್ಳೋಣ..

PAN CARD 49A FORM  HOW TO PAN CARD OFFLINE APPLY  PAN CARD DETAILS  PAN CARD FEES
ಪ್ಯಾನ್ ಕಾರ್ಡ್‌ಗಾಗಿ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ (www.protean-tinpan.com)

By ETV Bharat Tech Team

Published : Sep 8, 2024, 5:03 AM IST

PAN Card Offline Apply: ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಅಥವಾ ಖಾಯಂ ಖಾತೆ ಸಂಖ್ಯೆಯು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದು ಅಗತ್ಯ. ಪ್ಯಾನ್ ಕಾರ್ಡ್ ಹಲವಾರು ಉಪಯೋಗಗಳನ್ನು ಹೊಂದಿದೆ. ಉದ್ಯಮದ ನೋಂದಾವಣೆ, ಹಣಕಾಸು ವಹಿವಾಟುಗಳು, ಬ್ಯಾಂಕ್ ಖಾತೆಯನ್ನು ತೆರೆಯಲು, ಫೋನ್/ಗ್ಯಾಸ್ ಸಂಪರ್ಕ ಪಡೆಯಲು, ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಹೂಡಿಕೆ ಸೇರಿದಂತೆ ಇತ್ಯಾದಿಗಳಿಗೂ ಪ್ಯಾನ್​ ಕಾರ್ಡ್‌ನ್ನು ಬಳಸಬಹುದು. ಈ ಪ್ಯಾನ್​ ಕಾರ್ಡ್​ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎಂಬುದು ನಾವು ಈಗಾಗಲೇ ತಳಿಸುವ ಪ್ರಯತ್ನ ಮಾಡಿದ್ದಾವೆ. ಈಗ ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ, ಆನ್​ಲೈನ್​ ಮತ್ತು ಆಫ್​ಲೈನ್​ ಶುಲ್ಕ ಎಷ್ಟು ಎಂಬುದು ತಿಳಿಯೋಣಾ ಬನ್ನಿ..

PAN ಕಾರ್ಡ್‌ಗಾಗಿ ಆಫ್‌ಲೈನ್ ಅರ್ಜಿಯನ್ನು ಸಹ ಸಲ್ಲಿಸಬಹುದು (PAN Card Offline Apply). ಮೊದಲು ಅರ್ಜಿದಾರರು ಹತ್ತಿರದ TIN NSDL ಕೇಂದ್ರಕ್ಕೆ ಭೇಟಿ ನೀಡಬೇಕು. ಆಗ ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು ಆಫ್​ಲೈನ್​ ಪ್ಯಾನ್​ ಕಾರ್ಡ್​ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಹಂತ-1: ನೀವು ಮೊದಲು ಆನ್​ಲೈನ್​ಲ್ಲಿ https://www.protean-tinpan.com/downloads/pan/download/Form_49A.PDF ಈ ವಿಳಾಸಕ್ಕೆ ಭೇಟಿ ನೀಡಿ ಫಾರ್ಮ್ 49A ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಹಂತ-2:ಫಾರ್ಮ್ 49A ಫಾರ್ಮ್​ ಅನ್ನು ಪ್ರಿಂಟ್​ ತೆಗೆದುಕೊಂಡು ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಿ. ಬಳಿಕ ಫಾರ್ಮ್‌ನಲ್ಲಿ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಲಗತ್ತಿಸಿಬೇಕು.

ಹಂತ-3:'NSDL - PAN' ಪರವಾಗಿ ಬೇಡಿಕೆ ಡ್ರಾಫ್ಟ್ ರೂಪದಲ್ಲಿ ಶುಲ್ಕವನ್ನು ಪಾವತಿಸಬೇಕು. ಬಳಿಕ ಫಾರ್ಮ್‌ನೊಂದಿಗೆ ಪುರಾವೆಗಳ ಸ್ವಯಂ-ದೃಢೀಕರಿಸಿದ ಫೋಟೋಕಾಪಿಗಳನ್ನು ಅಂದ್ರೆ ಝಿರಾಕ್ಸ್​ ಕಾಪಿಗಳನ್ನು ಲಗತ್ತಿಸಬೇಕು.

ಹಂತ-4:ಅರ್ಜಿ ನಮೂನೆಯನ್ನು ಒಳಗೊಂಡಿರುವ ಲಕೋಟೆಯ ಮೇಲೆ 'APPLICATION FOR PAN-N-Acknowledgement Number' ಎಂದು ನಮೂದಿಸಿ ಮತ್ತು ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಬೇಕು.

ಹಂತ-5:Income Tax PAN Services Unit,
NSDL e-Governance Infrastructure Limited,
5th Floor, Mantri Sterling, Plot No. 341,
Survey No. 997/8, Model Colony,
Deep Near Bangla Chowk, Pune-411016

ಹಂತ-6: ಅರ್ಜಿಯ ಯಶಸ್ವಿ ಪ್ರಕ್ರಿಯೆಯ ನಂತರ PAN ಅನ್ನು ರಚಿಸಲಾಗುತ್ತದೆ ಮತ್ತು ಅರ್ಜಿದಾರರ ವಸತಿ ವಿಳಾಸಕ್ಕೆ ಕಳುಹಿಸಲಾಗುತ್ತದೆ.

ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಶುಲ್ಕ: ಆನ್​ಲೈನ್​ ಅಥವಾ ಆಫ್​ಲೈನ್​ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಭಾರತೀಯ ವಿಳಾಸಕ್ಕೆ ಪ್ಯಾನ್ ಅರ್ಜಿ ಶುಲ್ಕ 107 ರೂ. ಮತ್ತು ಸಾಗರೋತ್ತರ ವಿಳಾಸಕ್ಕೆ PAN ಶುಲ್ಕ ರೂ.1017-(ಜೊತೆಗೆ GST). ಶುಲ್ಕವನ್ನು 'ಎನ್‌ಎಸ್‌ಡಿಎಲ್-ಪ್ಯಾನ್', ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ರಚಿಸಲಾದ ಬೇಡಿಕೆ ಡ್ರಾಫ್ಟ್ ಮೂಲಕ ಪಾವತಿಸಲಾಗುತ್ತದೆ.

ಪ್ಯಾನ್​ಗಾಗಿ ಅರ್ಜಿ ಸಲ್ಲಿಸುವ ವಿಧಾನದ ಹಿಂದಿನ ಲಿಂಕ್​ಗಳು..

ಹಂತ-1: ಉಚಿತ ಇ-ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ? ಇಲ್ಲಿದೆ ಸುಲಭ ವಿಧಾನ - Free e PAN Card

ಹಂತ-2:NSDL ಪೋರ್ಟಲ್ ಮೂಲಕ ಭೌತಿಕವಾಗಿ ಪ್ಯಾನ್​ ಕಾರ್ಡ್​ ಸಲ್ಲಿಸುವುದು ಹೀಗೆ - Submit PAN Through NSDL Portal

ಹಂತ-3:ಪರ್ಯಾಯ ಮಾರ್ಗದಿಂದ ಪ್ಯಾನ್​ ಕಾರ್ಡ್​ ಪಡೆಯುವುದು ಹೇಗೆ? - UTIITSL PAN Card Application

ABOUT THE AUTHOR

...view details