HONDA ACTIVA 125: ದ್ವಿಚಕ್ರ ವಾಹನ ತಯಾರಕ ಹೋಂಡಾ ಮೋಟಾರ್‌ಸೈಕಲ್ ತನ್ನ ಜನಪ್ರಿಯ ಸ್ಕೂಟರ್ ಹೋಂಡಾ ಆ್ಯಕ್ಟಿವಾ 125 ನ ಅಪ್ಡೇಟ್ನ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ಆವೃತ್ತಿಯು ಮುಂಬರುವ OBD2B ಮಾನದಂಡಗಳೊಂದಿಗೆ ಹೊಂದಿಕೊಳ್ಳುತ್ತದೆ ಮತ್ತು ಹೊಸ TFT ಡಿಸ್ಪ್ಲೇ ಸಹ ಒಳಗೊಂಡಿದೆ.
ಹೋಂಡಾ ಆ್ಯಕ್ಟಿವಾಗೆ ಹೊಸ ಟಚ್:ಪ್ರಸ್ತುತ ಹೋಂಡಾ ಆ್ಯಕ್ಟಿವಾ 125 ನಲ್ಲಿ LCD ಡಿಸ್ಪ್ಲೇ ಬಳಸಲಾಗಿದ್ದು, ಹೊಸ ಮಾದರಿಯು 4.2 ಇಂಚಿನ TFT ಡಿಸ್ಪ್ಲೇ ಹೊಂದಿದೆ. ವಿಶೇಷವೆಂದರೆ ಈ ಡಿಸ್ಪ್ಲೇಯನ್ನು ಹೋಂಡಾದ ರೋಡ್‌ಸಿಂಕ್ ಕನೆಕ್ಟ್ ಆಗಬಹುದು. ಇದು ಕಾಲ್ ಅಲರ್ಟ್ ಮತ್ತು ನ್ಯಾವಿಗೇಷನ್ ಅಸಿಸ್ಟ್‌ನಂತಹ ಕಾರ್ಯಗಳೊಂದಿಗೆ ಬರುತ್ತದೆ. ಸ್ಕೂಟರ್‌ನಲ್ಲಿ ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಅನ್ನು ಸಹ ನೀಡಲಾಗಿದೆ.
ಹೊಸ ಆ್ಯಕ್ಟಿವಾದಲ್ಲಿ ಇವೆಲ್ಲ ವಿಶೇಷತೆಗಳು:ಅಪ್ಡೇಟ್ಡ್ OBD2B ವಿಶೇಷತೆಗಳನ್ನು 2025 ರಲ್ಲಿ ಕಾರ್ಯಗತಗೊಳಿಸಬಹುದು. ಹೊಸ ಹೋಂಡಾ ಆ್ಯಕ್ಟಿವಾ 125 ನಲ್ಲಿ ಇವು ಕಾಣಬಹುದು. ಇದಕ್ಕಾಗಿ 123.9cc ಇಂಧನ ಇಂಜೆಕ್ಟೆಡ್ ಎಂಜಿನ್ ಅನ್ನು ಬಳಸಲಾಗಿದೆ. ಇದು 8.4hp ಪವರ್ ಮತ್ತು 10.5Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಸ್ಕೂಟರ್ ಮೋಟಾರ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಹೊಂದಿದೆ.