ETV Bharat / spiritual

ಸೋಮವಾರದ ಭವಿಷ್ಯ, ಪಂಚಾಂಗ : ಈ ರಾಶಿಯವರಿಗಿಂದು ಯಶಸ್ಸಿನ ಬೆಳಕಿನಿಂದ ಕೂಡಿದ ದಿನ - MONDAY HOROSCOPE

ಸೋಮವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ ಹೀಗಿದೆ..

ಸೋಮವಾರದ ಭವಿಷ್ಯ
ಸೋಮವಾರದ ಭವಿಷ್ಯ (ETV Bharat)
author img

By ETV Bharat Karnataka Team

Published : Jan 13, 2025, 5:01 AM IST

ಇಂದಿನ ಪಂಚಾಂಗ:

13-01-2025, ಸೋಮವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ಉತ್ತರಾಯಣ

ಮಾಸ: ಮಾರ್ಗಶಿರ

ಪಕ್ಷ: ಪೂರ್ಣಿಮಾ

ನಕ್ಷತ್ರ: ಆದ್ರ

ಸೂರ್ಯೋದಯ: ಬೆಳಗ್ಗೆ 06:44 ಗಂಟೆಗೆ

ಅಮೃತಕಾಲ: ಮಧ್ಯಾಹ್ನ 01:52 ರಿಂದ 03:17 ಗಂಟೆ ತನಕ

ದುರ್ಮುಹೂರ್ತಂ: ಮಧ್ಯಾಹ್ನ 01:08 ರಿಂದ 01:56 ಹಾಗೂ 03:32 ರಿಂದ 04:20 ಗಂಟೆ ವರೆಗೆ

ರಾಹುಕಾಲ: ಬೆಳಗ್ಗೆ 08:10 ರಿಂದ 09:35 ಗಂಟೆ ತನಕ

ಸೂರ್ಯಾಸ್ತ: ಸಂಜೆ 06:08 ಗಂಟೆಗೆ

ಇಂದಿನ ರಾಶಿ ಭವಿಷ್ಯ:

ಮೇಷ: ನಿಮ್ಮ ದಿನ ಇಂದು ಯಶಸ್ಸಿನ ಬೆಳಕಿನಿಂದ ಹೊಳೆಯುತ್ತಿದೆ. ನೀವು ದೂರದೃಷ್ಟಿ ಉಳ್ಳ ತೀಕ್ಷ್ಣಮತಿಯಾಗಿದ್ದೀರಿ. ನಿಮ್ಮ ಮಹತ್ವಾಕಾಂಕ್ಷೆ ನಿಮಗೆ ಸಾಧ್ಯವಾಗುತ್ತದೆ. ಕೆಲಸದ ಒತ್ತಡ ಕಡಿಮೆ ಇರಲಿ. ನಿಮ್ಮ ಆಶಾವಾದದ ಸಾಮರ್ಥ್ಯಗಳು ನಿಮಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ನೀಡುತ್ತವೆ. ಸರ್ವಶಕ್ತನ ಮೇಲೆ ನಂಬಿಕೆ ಇರಲಿ.

ವೃಷಭ: ಇಂದು ನೀವು ನಿಮ್ಮೊಂದಿಗೆ ಸ್ವಲ್ಪ ಗುಣಮಟ್ಟದ ಸಮಯ ಕಳೆಯಲು ಸೂಕ್ತವಾದ ದಿನ. ಹಿಂದೆಂದೂ ಇಲ್ಲದಂತೆ ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ನವೋತ್ಸಾಹ ತುಂಬಿಕೊಳ್ಳಿರಿ. ನಿಮ್ಮ ದಿನವು ಮಿತ್ರರು ಹಾಗೂ ಕುಟುಂಬದೊಂದಿಗೆ ಆಕರ್ಷಕ ಭೋಜನ ಮತ್ತು ಮನರಂಜನೆಯೊಂದಿಗೆ ಸ್ನೇಹಮಯ ಭೋಜನಕೂಟ ಒಳಗೊಂಡಿರುತ್ತದೆ. ನೀವು ಕಟುವಾದ, ಭರ್ಜರಿಯಾದ ಮತ್ತು ಅತ್ಯಂತ ಸ್ವಾದಿಷ್ಟ ರುಚಿಯನ್ನು ಬಯಸುತ್ತೀರಿ, ನಿಮ್ಮ ಮನಸೋ ಇಚ್ಛೆ ಅದನ್ನು ನೆರವೇರಿಸಿಕೊಳ್ಳಿ.

ಮಿಥುನ: ಯಾವುದೋ ಒಂದು ಕಾರಣಕ್ಕೆ ನಿಮ್ಮ ಮನಸ್ಸು ವಿಚಲಿತ ಮತ್ತು ಆತಂಕದಿಂದ ಕೂಡಿರುತ್ತದೆ. ನಿಮ್ಮ ಆತಂಕಗಳನ್ನು ವ್ಯಕ್ತಪಡಿಸಲು ನೀವು ಅಶಕ್ತರಾಗುತ್ತೀರಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ನಿಮ್ಮ ಸಂಗಾತಿಯ ಪ್ರೀತಿಯನ್ನು ಗಳಿಸುವಲ್ಲಿ ಶಕ್ತರಾಗುತ್ತೀರಿ. ಹಿಂದಿನದು ಹೋಗಲಿ ಎಂದು ಬಿಟ್ಟು ವಿಶ್ವಾಸದಿಂದ ಮುಂದುವರೆಯಲು ಪ್ರಯತ್ನಿಸಿ.

ಕರ್ಕಾಟಕ: ನೀವು ಮನೆಯಲ್ಲಿ ಹೊಸರುಚಿಗಳನ್ನು ಪ್ರಯತ್ನಿಸುವ ಉಮೇದಿನಲ್ಲಿರುತ್ತೀರಿ. ಕುಟುಂಬ ಸದಸ್ಯರು ಇದರ ಪ್ರಯೋಜನ ಪಡೆದುಕೊಂಡು ಆನಂದಿಸುತ್ತಾರೆ. ನೀವು ಕಾಲಕ್ಷೇಪ ಮಾಡುತ್ತೀರಿ. ಅತಿಥಿಗಳ ಆಗಮನ ಹಬ್ಬ ಮತ್ತು ಸಂತೋಷದ ವಾತಾವರಣ ಮೂಡಿಸುತ್ತದೆ.

ಸಿಂಹ: ಇಂದು ಸಾಕಷ್ಟು ವಿಷಯಗಳಲ್ಲಿ ನೀವು ಇತರರ ಅಭಿಪ್ರಾಯ ಕೇಳುತ್ತೀರಿ. ಇತರರನ್ನು ನೀವು ತಾಳ್ಮೆಯಿಂದ ಆಲಿಸಬೇಕು ಮತ್ತು ಸಂವಹನದ ಸಮಯದಲ್ಲಿ ನೀವು ತುಟಿ ಬಿಚ್ಚದೇ ಇರಬೇಕು. ನಿಮ್ಮ ಆತ್ಮ ವಿಶ್ವಾಸ ಇಂದು ಏಟು ತಿನ್ನುತ್ತದೆ, ಆದ್ದರಿಂದ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದಿರಿ.

ಕನ್ಯಾ: ನೀವು ಅತ್ಯಂತ ಸ್ಫೂರ್ತಿಯುತವಾಗಿದ್ದೀರಿ. ನಿಮ್ಮ ಸೃಜನಶೀಲ ಪ್ರತಿಭೆಗಳು ಮತ್ತು ಸಾಮರ್ಥ್ಯಗಳು ನಿಮ್ಮ ಶ್ರೇಷ್ಠ ಕಲಾವಿದರಾಗಿ ಪ್ರತ್ಯೇಕವಾಗಿ ನಿಲ್ಲಿಸುತ್ತವೆ. ನೀವು ನಿಮ್ಮ ಸೃಜನಶೀಲತೆಗೆ ದಾರಿ ಮಾಡಿಕೊಟ್ಟರೆ ಮಾತುಗಳು ಸರಾಗವಾಗಿ ಹರಿದುಬರುತ್ತವೆ. ಹಾಡಲು ಮತ್ತು ನೃತ್ಯ ಮಾಡಲು ಬಯಸಿದರೆ ಎಲ್ಲರ ಕೇಂದ್ರಬಿಂದುವಾಗುತ್ತೀರಿ. ನೀವು ಪ್ರದರ್ಶನ ಕಲೆಗಳು ಅಥವಾ ಬರಹವನ್ನು ಹವ್ಯಾಸಗಳಾಗಿ ಹೊಂದುವುದು ಸೂಕ್ತ.

ತುಲಾ: ನಿಮ್ಮಲ್ಲಿರುವ ಒಳಗಿನ ಕಲಾವಿದ ಇಂದು ಮೇಲೆ ಬರುತ್ತಾನೆ ಮತ್ತು ನೀವು ನಿಮ್ಮ ಕಲ್ಪಾಶಕ್ತಿಯನ್ನೂ ಪ್ರದರ್ಶಿಸುತ್ತೀರಿ. ನೀವು ನಿಮ್ಮ ಆಸಕ್ತಿಯ ವಿಷಯಗಳತ್ತ ಗಮನ ನೀಡಲು ಸಾಧ್ಯವಾಗುತ್ತದೆ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಕೊಂಡವರು ಮತ್ತಷ್ಟು ಮುಂದೆ ಸಾಗುತ್ತಾರೆ. ನೀವು ಇಂದು ಅನುಕೂಲಕರ ಕಾನೂನು ವ್ಯವಹಾರಗಳನ್ನು ಸಹಿ ಹಾಕುವ ಸಾಧ್ಯತೆ ಇದೆ. ಈ ದಿನ ನಿಮಗೆ ಅತ್ಯಂತ ಉತ್ತಮ ಮತ್ತು ಯಶಸ್ವಿ ದಿನವಾಗಿರುತ್ತದೆ.

ವೃಶ್ಚಿಕ: ನಿಮ್ಮನ್ನು ಇಂದು ಖಂಡಿತವಾಗಿಯೂ ಪರ್ಫೆಕ್ಷನಿಸ್ಟ್ ಎಂದು ಕರೆಯಬಹುದು. ಸರಿಯಾದ ಸಮಯಕ್ಕೆ ಅಲ್ಲದೆ ಕೆಲಸದಲ್ಲಿ ವ್ಯವಸ್ಥಿತ ವಿಧಾನ ಅನುಸರಿಸುವ ಮೂಲಕ ಎಲ್ಲವನ್ನೂ ಮಾಡುತ್ತೀರಿ. ಒಟ್ಟಾರೆ, ನಿಮ್ಮ ಸುತ್ತಲಿನ ಜನರಿಗೆ ನೀವು ಸೂಕ್ತ ಉದಾಹರಣೆ ನಿರ್ಮಿಸಿದ್ದೀರಿ.

ಧನು: ಸಂಪೂರ್ಣ ಜಾಗರೂಕತೆಯ ದಿನವಾಗಿದೆ. ನಿಮ್ಮ ಹೃದಯ ಅದರ ಸಂಗಾತಿಯನ್ನು ಕಂಡುಕೊಳ್ಳುವ ದಿನವಾಗಿದ್ದು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ನೀವು ಪ್ರಣಯ ದೇವತೆಯ ಮುಂದಿನ ಬಲಿಪಶು. ಆದಾಗ್ಯೂ, ನಿಮ್ಮ ಹೆಜ್ಜೆಗಳನ್ನು ಗಮನಿಸಿ, ಬಾಂಧವ್ಯದ ಪ್ರಾರಂಭಿಕ ಹಂತಗಳು ಅತ್ಯಂತ ಸೂಕ್ಷ್ಮವಾಗಿವೆ ಮತ್ತು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ. ಅಲ್ಲದೆ, ನಿಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಬೇಕಾದ ಸಮಯವಾಗಿದೆ.

ಮಕರ: ನೀವು ಅತ್ಯಂತ ಒತ್ತಡದಲ್ಲಿರುತ್ತೀರಿ. ನಿಮ್ಮ ಕೆಲಸದ ಬೇಡಿಕೆಗಳಿಂದ ಕೈ ಕಟ್ಟಿರುವುದರಿಂದ ನಿಮಗೆ ನಿಮ್ಮ ಕುರಿತು ಆಲೋಚಿಸುವುದೂ ಬಹಳ ಕಷ್ಟವಾಗಿದೆ. ನೀವು ಸೃಜನಶೀಲರಾಗಲು ಬಯಸಿದರೆ ಕಾರ್ಯದೊತ್ತಡದಿಂದ ಅಂತಹ ಸ್ವಾತಂತ್ರ್ಯ ದೊರೆಯುವುದಿಲ್ಲ. ನೀವು ಸಮಯ ನಿರ್ವಹಣೆಯ ಕಲೆಯನ್ನು ಕಲಿತಿದ್ದೀರಿ. ಆದ್ದರಿಂದ, ನೀವು ನಿಮ್ಮ ಆದ್ಯತೆಗಳನ್ನು ಸರಿಯಾಗಿ ರೂಪಿಸಿಕೊಂಡಿದ್ದೀರಿ ಮತ್ತು ನಿಮಗಾಗಿ ಯಶಸ್ಸು ಕಾಯುತ್ತಿದೆ.

ಕುಂಭ: ಇಂದು ನೀವು ಸರಿಯಾಗಿ ಗುರಿ ಇಟ್ಟು ಹೊಡೆಯುತ್ತೀರಿ. ಅತ್ಯಂತ ಸಣ್ಣದರಿಂದ ದೊಡ್ಡದರವರೆಗೆ, ನಿಮ್ಮ ಎಲ್ಲ ಯೋಜನೆಗಳೂ ವಾಸ್ತವಗೊಳ್ಳುತ್ತವೆ. ನಿಮ್ಮ ದಾರಿಯಲ್ಲಿ ಕೆಲ ಅಡೆತಡೆಗಳಿದ್ದರೆ ನಿರಾಶೆಗೊಳ್ಳಬೇಡಿ; ನೀವು ಸವಾಲುಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧರಾಗಿದ್ದೀರಿ ಮತ್ತು ವಿಜಯೋತ್ಸಾಹದಿಂದ ಹೊರಬರುತ್ತೀರಿ. ನಿಮ್ಮನ್ನು ಅತ್ಯಂತ ಉತ್ಸಾಹದಲ್ಲಿರಿಸಿ, ಖಂಡಿತವಾಗಿಯೂ ನೀವು ಯಶಸ್ವಿಯಾಗುತ್ತೀರಿ.

ಮೀನ: ನಿಮ್ಮ ಗ್ರಹಗಳ ಜೋಡಣೆ ಪೂರಕವಾಗಿಲ್ಲ, ನೀವು ಇಂದು ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸುವುದು ಉತ್ತಮವಲ್ಲ. ಇಂದು ಯಾವುದೇ ಯೋಜನೆಯಿಂದ ಪಡೆಯುವ ಅನುಕೂಲಗಳು ಅದರೊಂದಿಗೆ ಒಳಗೊಂಡಿರುವ ರಿಸ್ಕ್ ಗಳಿಂದಾಗಿ ಸಮರ್ಥನೀಯವಲ್ಲ. ವ್ಯಾಪಾರದಲ್ಲಿರುವ ಜನರು ತಮ್ಮ ಎಲ್ಲ ವ್ಯವಹಾರಗಳಲ್ಲೂ ಹೆಚ್ಚು ಜಾಗರೂಕರಾಗಿರಬೇಕು. ವೈಯಕ್ತಿಕ ಜೀವನ ದೇವರ ಕೃಪೆಯಿಂದ ಶಾಂತಿಯುತವಾಗಿರುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.