Highest Water Wading Capacity SUVs: ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆ ರೌದ್ರನರ್ತನ ರೂಪ ತಾಳುತ್ತಿದೆ. ಧಾರಾಕಾರ ಮಳೆಯಿಂದಾಗಿ ಅನೇಕ ಸ್ಥಳಗಳಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿರುವುದು ಗೊತ್ತಿರುವ ಸಂಗತಿ. ಈ ಪ್ರವಾಹದಲ್ಲಿ ಹಲವು ಮನೆಗಳು, ವಾಹನಗಳು ಹಾಗೂ ಇತರೆ ವಸ್ತುಗಳು ಕೊಚ್ಚಿಹೋಗಿದ್ದವು. ನೀವು ಸಹ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ ಮತ್ತು ನೀರಿನಿಂದ ತುಂಬಿದ ಕಷ್ಟಕರವಾದ ರಸ್ತೆಗಳನ್ನು ದಾಟಲು ಬಯಸಿದರೆ, ಭಾರತದಲ್ಲಿ ಕೆಲವು SUV ಗಳು ಮಾರಾಟವಾಗುತ್ತಿವೆ. ಅವುಗಳು ಉತ್ತಮವಾದ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿವೆ. ಈ ಕಷ್ಟಕರವಾದ ರಸ್ತೆಗಳನ್ನು ದಾಟಲು ನಿಮಗೆ ಸಹಾಯ ಮಾಡುವ ಐದು ಅಂತಹ SUVಗಳ ಬಗ್ಗೆ ತಿಳಿಯೋಣ..
Mahindra Thar (Mahindra & Mahindra) 5. Mahindra Thar: ಐದನೇ ಸ್ಥಾನದಲ್ಲಿ ಸ್ವದೇಶಿ ಎಸ್‌ಯುವಿಯನ್ನು ನೋಡಲು ಆಶ್ಚರ್ಯವಾಗಬಹುದು. ಮಹೀಂದ್ರಾ ಥಾರ್ ಅತ್ಯಂತ ಕಡಿಮೆ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯು 650 ಎಂಎಂವರೆಗೆ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ನೀಡಿದೆ. ಈ ಸಾಮರ್ಥ್ಯದೊಂದಿಗೆ ಈ SUV ಆನ್-ರೋಡಿಂಗ್ ಮತ್ತು ಆಫ್-ರೋಡಿಂಗ್ಗೆ ಅಚ್ಚುಮೆಚ್ಚಾಗಿದೆ.
4. Force Gurkha: ಈ ಕಾರು ಆಕರ್ಷಕ ನೋಟ ಮತ್ತು ಬಲವಾದ ಪರ್ಫಾರ್ಮನ್ಸ್ಸ್ಗೆ ಹೆಸರುವಾಸಿಯಾಗಿದೆ. ಫೋರ್ಸ್ ಗೂರ್ಖಾ ಆಫ್-ರೋಡಿಂಗ್ ಮತ್ತು ನೀರಿನಿಂದ ತುಂಬಿರುವ ಪ್ರದೇಶಗಳಲ್ಲಿ ಸಹ ಸೂಕ್ತವಾಗಿದೆ. ಇದು ಮಹೀಂದ್ರಾ ಥಾರ್ಗಿಂತ 50 ಮಿ.ಮೀ ಹೆಚ್ಚು ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಅಂದರೆ 700 ಎಂಎಂ. ಇಷ್ಟು ಮಾತ್ರವಲ್ಲದೆ, ನೀವು ತುಂಬಾ ಕಡಿಮೆ ಬೆಲೆಯಲ್ಲಿ ಈ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಪಡೆಯುತ್ತೀರಿ. ಇದು ಸುಲಭವಾಗಿ ಪ್ರವಾಹದ ರಸ್ತೆಗಳಲ್ಲಿ ಪ್ರಯಾಣಿಸಬಹುದು.
Force Gurkha (Force Motors) 3. Toyota Fortuner: ಫಾರ್ಚುನರ್ ಭಾರತದಲ್ಲಿ ಮಾರಾಟವಾಗುವ SUV ಆಗಿದ್ದು, ಅದರ ಐಷಾರಾಮಿ ಮತ್ತು ಪರ್ಫಾರ್ಮನ್ಸ್ಗೆ ಇದು ತುಂಬಾ ಮೆಚ್ಚುಗೆ ಗಳಿಸಿದೆ. ಇದು ಅತ್ಯಂತ ಸಾಮರ್ಥ್ಯದ SUV ಆಗಿದೆ. ಫಾರ್ಚುನರ್‌ನ ವಾಟರ್ ವೇಡಿಂಗ್ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದ್ರೆ, ಅದರ ಸಾಮರ್ಥ್ಯವು 700 ಎಂ.ಎಂ ಆಗಿದೆ. ಇದು ಫೋರ್ಸ್ ಗೂರ್ಖಾದಂತೆಯೇ ಇರುತ್ತದೆ. ಇದರಲ್ಲಿ, ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯು ಫಾರ್ಚುನರ್ 4x2 ಮತ್ತು 4x4 ಆವೃತ್ತಿಗಳಲ್ಲಿ ಲಭ್ಯವಿದೆ. ಫಾರ್ಚುನರ್‌ನ ಬಲವಾದ ವಿನ್ಯಾಸ ಮತ್ತು ಅಡಿಪಾಯವು ಆಫ್-ರೋಡಿಂಗ್ ಮತ್ತು ಪ್ರವಾಹ ಪ್ರದೇಶಗಳನ್ನು ದಾಟಲು ಸೂಕ್ತವಾಗಿದೆ.
Toyota Fortuner (Toyota Kirloskar) 2. Jeep Wrangler: ಈ ಜೀಪ್ ರಾಂಗ್ಲರ್ ಅನ್ನು ರಸ್ತೆಯ ಮೇಲೆ ನೋಡುವುದೇ ಒಂದು ಆಕರ್ಷಕ. ಕಂಪನಿಯು 760 ಎಂಎಂ ಪ್ರಭಾವಶಾಲಿ ವಾಟರ್ ವೇಡಿಂಗ್ ಸಾಮಾರ್ಥ್ಯ ಹೊಂದಿದೆ. ಈ ಸಾಮರ್ಥ್ಯದೊಂದಿಗೆ ಇದು SUV ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ರಾಂಗ್ಲರ್ 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು ಆಫ್-ರೋಡ್ ವೈಶಿಷ್ಟ್ಯಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ರಾಂಗ್ಲರ್ ಅನ್ನು ಆಫ್-ರೋಡಿಂಗ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ನೀರಿನಿಂದ ತುಂಬಿರುವ ಪ್ರದೇಶಗಳನ್ನು ಸುಲಭವಾಗಿ ದಾಟಲು ನಿಮಗೆ ಅನುವು ಮಾಡಿಕೊಡುತ್ತದೆ.
Jeep Wrangler (Jeep India) 1. Land Rover Defender: ಈ ಪಟ್ಟಿಯಲ್ಲಿ ಲ್ಯಾಂಡ್ ರೋವರ್ ಡಿಫೆಂಡರ್. ಇದು ಭಾರತದಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳಲ್ಲಿ ಅತ್ಯಧಿಕ ವಾಟರ್ ವೇಡಿಂಗ್ ಸಾಮರ್ಥ್ಯದೊಂದಿಗೆ ಬರುತ್ತದೆ. ಡಿಫೆಂಡರ್ ಅನ್ನು 900 ಎಂಎಂನ ಅತ್ಯಂತ ಪ್ರಭಾವಶಾಲಿ ವಾಟರ್ ವೇಡಿಂಗ್ ಸಾಮರ್ಥ್ಯದೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಈ ಕಾರು ಸುಲಭವಾಗಿ ಆಳವಾದ ಪ್ರದೇಶಗಳಿಗೆ ಹೋಗಬಹುದು. ಇದರೊಂದಿಗೆ 4x4 ಸಿಸ್ಟಂ ಅನ್ನು ನೀಡಲಾಗಿದ್ದು, ಇದು ಅತ್ಯಂತ ಅಪಾಯಕಾರಿ ಆಫ್ ರೋಡಿಂಗ್ ಅನ್ನು ಸಹ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
Land Rover Defender (Land Rover India) ಓದಿ:ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ ಇವೆ ಈ ಟಾಪ್ 4 ಕಾರುಗಳು! - Low Budget Cars