Hero MotoCorp:ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್‌ನಿಂದ ನಾಲ್ಕು ಹೊಸ ದ್ವಿಚಕ್ರ ವಾಹನಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ. ಇವುಗಳಲ್ಲಿ ಎಲೆಕ್ಟ್ರಿಕ್ ಸ್ಕೂಟಿಯೂ ಸೇರಿದೆ. ಇಟಲಿಯ ಮಿಲನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮೋಟಾರ್‌ಸೈಕಲ್ ಮತ್ತು ಆ್ಯಕ್ಸಸರಿಸ್ ಪ್ರದರ್ಶನದಲ್ಲಿ ಕಂಪನಿ ತನ್ನ ಬೈಕ್ಗಳನ್ನು ಪರಿಚಯಿಸಿದೆ.
ಮೋಟೋಕಾರ್ಪ್‌ನ ಹೊಸ ದ್ವಿಚಕ್ರ ವಾಹನಗಳು:
- ಎಕ್ಸ್ಟ್ರೀಮ್ 250R
- ಕರಿಜ್ಮಾ XMR 250
- ಎಕ್ಸ್‌ಪಲ್ಸ್ 210
- ಹೀರೋ ವಿಡಾ Z
Hero Extreme 250R ಮತ್ತು Karizma XMR 250 ಬೈಕ್‌ಗಳು ಒಂದೇ ಎಂಜಿನ್‌ನೊಂದಿಗೆ ಬರುತ್ತವೆ. ಇವುಗಳಲ್ಲಿ 250ಸಿಸಿ ಸಿಂಗಲ್ ಸಿಲಿಂಡರ್, ಡಿಒಎಚ್ಸಿ, 4 ವಾಲ್ವ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 30hp, 25Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಇದು 0-60 kmph ನಿಂದ 3.25 ಸೆಕೆಂಡುಗಳಲ್ಲಿ ವೇಗ ಪಡೆಯುತ್ತದೆ. ಕೆಲವೇ ತಿಂಗಳಲ್ಲಿ ಕಂಪನಿ ಇವುಗಳನ್ನು ಮಾರುಕಟ್ಟೆಗೆ ತರಲಿದೆ.
ಇತರ ವೈಶಿಷ್ಟ್ಯಗಳು:
- ವರ್ಗ-ಡಿ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲೈಟ್ಗಳು
- ಲ್ಯಾಪ್ ಟೈಮರ್
- ಡ್ರಾಗ್ ರೇಸ್ ಟೈಮರ್
- ಎಬಿಎಸ್ ಮೋಡ್ಸ್
- ಮ್ಯೂಸಿಕ್ ಕಂಟ್ರೋಲ್ಸ್
- ಟರ್ನ್-ಬೈ-ಟರ್ನ್ ನ್ಯಾವಿಗೇಷನ್