Air Quality Index: ಗೂಗಲ್ ಹೊಸ ಫೀಚರ್ ಅನ್ನು ಪ್ರಸ್ತುತಪಡಿಸಿದೆ. ತನ್ನ ಮ್ಯಾಪ್ ಅಪ್ಲಿಕೇಶನ್‌ನಲ್ಲಿ ರಿಯಲ್ ಟೈಂ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವನ್ನು (AQI) ಪರಿಶೀಲಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ವಾಯು ಗುಣಮಟ್ಟದ ಒಳನೋಟಗಳನ್ನು ನೀಡುವುದರ ಜೊತೆಗೆ ಪ್ರಸ್ತುತ 2 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮ್ಯಾಪ್ ಅಪ್ಲಿಕೇಶನ್, ವಾಯು ಗುಣಮಟ್ಟದ ತೀವ್ರತೆಯ ಆಧಾರದ ಮೇಲೆ ಸಲಹೆಗಳು ಮತ್ತು ಒಳನೋಟಗಳನ್ನು ಸಹ ನೀಡುತ್ತದೆ.
ಗೂಗಲ್ ಮ್ಯಾಪ್ ಪ್ರಕಾರ, ಪ್ರತಿ ಗಂಟೆಗೆ ವಾಯು ಗುಣಮಟ್ಟ ಸೂಚ್ಯಾಂಕ ಅಪ್ಡೇಟ್ ಆಗುತ್ತಲೇ ಇರುತ್ತದೆ. ಬಳಕೆದಾರರು ಭಾರತದ ಯಾವುದೇ ಸ್ಥಳದ ವಾಯು ಗುಣಮಟ್ಟದ ಬಗ್ಗೆ ತಿಳಿದುಕೊಳ್ಳಬಹುದು. ಈ ಫೀಚರ್ ಈ ವಾರದಿಂದ 100ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿರಲಿದೆ. ಗೂಗಲ್ ಮ್ಯಾಪ್ AQI-ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಸ್ವರೂಪದಲ್ಲಿ ನೀಡುತ್ತದೆ. ಇದನ್ನು 0 ರಿಂದ 500ರ ವರೆಗಿನ ನಿರ್ದಿಷ್ಟ ಪ್ರದೇಶದಲ್ಲಿ ಮಾಲಿನ್ಯಕಾರಕಗಳನ್ನು ಬಳಸಿಕೊಂಡು ಮೌಲ್ಯಮಾಪನದ ಬಗ್ಗೆ ಮಾಹಿತಿ ನೀಡುತ್ತಿದೆ.
- 0 ರಿಂದ 50ರ ವರೆಗೆ ಉತ್ತಮ
- 51 ರಿಂದ 100ರ ವರೆಗೆ ತೃಪ್ತಿಕರ
- 101 ರಿಂದ 200 ಮಧ್ಯಮ
- 201 ರಿಂದ 300ರ ವರೆಗೆ ಕಳಪೆ
- 301 ರಿಂದ 400 ಅತ್ಯಂತ ಕಳಪೆ
- 401 ರಿಂದ 500ರ ವರೆಗೆ ತೀವ್ರ ಕಳಪೆ
ಮ್ಯಾಪ್ನಲ್ಲಿ ವಾಯು ಗುಣಮಟ್ಟವನ್ನು ವಿವಿಧ ಬಣ್ಣಗಳನ್ನು ಬಳಸಿ ಗೂಗಲ್ ಬಗ್ಗೆ ಮಾಹಿತಿ ನೀಡುತ್ತದೆ. ಹಸಿರು ಬಣ್ಣ ಉತ್ತಮಕ್ಕೆ ಬಳಸಿಕೊಂಡ್ರೆ, ಕೆಂಪು ಬಣ್ಣ ತೀವ್ರ ಕಳಪೆಗೆ ಬಳಸುತ್ತಿದೆ ಗೂಗಲ್.