ಕರ್ನಾಟಕ

karnataka

ETV Bharat / technology

ಕಾರು ಖರೀದಿದಾರರಿಗೆ​ ಗುಡ್​ ನ್ಯೂಸ್​: ಮಹೀಂದ್ರಾ ಥಾರ್​ ಮೇಲೆ 3 ಲಕ್ಷಕ್ಕೂ ಹೆಚ್ಚು ಡಿಸ್ಕೌಂಟ್​!!

Mahindra Thar Discount: ಮಹೀಂದ್ರಾ ಕಂಪನಿ 3-ಡೋರ್ ಥಾರ್ ಮೇಲೆ ಭಾರೀ ಡಿಸ್ಕೌಂಟ್​ ಘೋಷಿಸಿದೆ. ಥಾರ್‌ನ ವಿವಿಧ ರೂಪಾಂತರಗಳಲ್ಲಿ ಗ್ರಾಹಕರು ವಿಭಿನ್ನ ಕೊಡುಗೆಗಳನ್ನು ಪಡೆಯಲಿದ್ದಾರೆ. ಇದರ ಮಾಹಿತಿ ಇಲ್ಲಿದೆ..

MAHINDRA THAR SUV  MAHINDRA THAR DISCOUNT  MAHINDRA THAR PRICE  MAHINDRA THAR FEATURES
ಮಹೀಂದ್ರಾ ಥಾರ್​ ಮೇಲೆ 3 ಲಕ್ಷಕ್ಕೂ ಹೆಚ್ಚು ಡಿಸ್ಕೌಂಟ್ (Mahindra)

By ETV Bharat Tech Team

Published : 5 hours ago

Mahindra Thar Discount: ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರ ಥಾರ್​ಗೆ ಕ್ರೇಜ್​ ಇರುವುದು ಗೊತ್ತಿರುವ ಸಂಗತಿ. ಈ ಎಸ್‌ಯುವಿ ಖರೀದಿಸಲು ಜನ ಸಾಲುಗಟ್ಟಿ ನಿಂತಿದ್ದಾರೆ. ನೀವು ಸಹ ಮಹೀಂದ್ರ ಥಾರ್ ಅನ್ನು ಖರೀದಿಸಲು ಯೋಜಿಸುತ್ತಿದ್ರೆ, ಈ ಅವಕಾಶ ನಿಮಗೆ ಹೇಳಿ ಮಾಡಿಸಿದಂತಿದೆ. ಕಂಪನಿಯು ಈ ಜನಪ್ರಿಯ ಆಫ್‌ರೋಡರ್‌ನಲ್ಲಿ 3 ಲಕ್ಷ ರೂ.ಗಿಂತ ಹೆಚ್ಚಿನ ಡಿಸ್ಕೌಂಟ್​ ನೀಡುತ್ತಿದೆ.

ಈ ವರ್ಷ ಮಾಡಿದ ಮಾದರಿಗಳ ದಾಸ್ತಾನುಗಳನ್ನು ಸಾಧ್ಯವಾದಷ್ಟು ಬೇಗ ತೆರವುಗೊಳಿಸಲು ಕಂಪನಿಯು 3-ಡೋರ್ ಥಾರ್ ಮೇಲೆ ಭಾರೀ ಡಿಸ್ಕೌಂಟ್​ ನೀಡುತ್ತಿದೆ. ಮಹೀಂದ್ರ ಥಾರ್‌ನ 3-ಡೋರ್ ಮಾದರಿಯ 2WD ರೂಪಾಂತರಗಳ ಮೇಲೆ ಗ್ರಾಹಕರು ವಿಭಿನ್ನ ರಿಯಾಯಿತಿಗಳನ್ನು ಪಡೆಯಲಿದ್ದಾರೆ. ಥಾರ್ ಆರ್‌ಡಬ್ಲ್ಯೂಡಿ 1.5 ಲೀಟರ್ ಡೀಸೆಲ್ ರೂಪಾಂತರದ ಮೇಲೆ ಕಡಿಮೆ ಡಿಸ್ಕೌಂಟ್​ ಲಭ್ಯವಿದೆ. ಇದು ಸುಮಾರು ರೂ 56 ಸಾವಿರದವರೆಗೆ ರಿಯಾಯಿತಿ ಇದೆ.

ಯಾವ್ಯಾವ ಮಾಡೆಲ್​ಗಳಿಗೆ ಎಷ್ಟೆಷ್ಟು ಡಿಸ್ಕೌಂಟ್​?: ಪೆಟ್ರೋಲ್ ಎಂಜಿನ್ ಆಪ್ಷನ್​ನಲ್ಲಿ ರಿಯರ್​ ವ್ಹೀಲ್​ ಡ್ರೈವ್​ ವೆರಿಯಂಟ್ಸ್​ನಲ್ಲಿ ನೀವು ರೂ 1 ಲಕ್ಷದ 31 ಸಾವಿರದವರೆಗೆ ಡಿಸ್ಕೌಂಟ್​ ಪಡೆಯಬಹುದು. ಇದರೊಂದಿಗೆ, ಮಹೀಂದ್ರ ಥಾರ್‌ನ ಅರ್ಥ್ ಆವೃತ್ತಿಯಲ್ಲಿ ಅತ್ಯಧಿಕ ರಿಯಾಯಿತಿ ಲಭ್ಯವಿದೆ. LX ಟ್ರಿಪ್ ರೂಪಾಂತರಗಳಲ್ಲಿ ನೀವು 3 ಲಕ್ಷಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು ಪಡೆಯುತ್ತೀರಿ.

ಹೊಸ ವರ್ಷದಿಂದ ಅಂದರೆ 2025 ರಿಂದ ಕಂಪನಿಯು ತನ್ನ ಉತ್ಪನ್ನಗಳನ್ನು ಸುಮಾರು 3 ಪ್ರತಿಶತದಷ್ಟು ಹೆಚ್ಚಿಸಬಹುದು. ವೆಚ್ಚದಲ್ಲಿನ ಹೆಚ್ಚಳ ಸೇರಿದಂತೆ ಇನ್ನಿತ ಕಾರಣದಿಂದಾಗಿ ಬೆಲೆಯನ್ನು ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಈಗಾಗಲೇ ಮಹೀಂದ್ರಾ ಹೇಳಿದೆ.

ಬೆಲೆ ಏರಿಕೆಗೆ ಪ್ರಮುಖ ಕಾರಣ ಹಣದುಬ್ಬರ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯು ಮುಂಬರುವ ತಿಂಗಳುಗಳಲ್ಲಿ XEV 7e, BE.07, BE.09 ಮತ್ತು XUV 400 ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದಲ್ಲದೆ, ಕಂಪನಿಯು EV ಶ್ರೇಣಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಮಹೀಂದ್ರ ಥಾರ್ ಪವರ್​ಟ್ರೈನ್: ಮಹೀಂದ್ರ ಥಾರ್‌ನ ಡೀಸೆಲ್ ಎಂಜಿನ್‌ಗಳು 2184 cc ಮತ್ತು 1497 cc ಆಗಿವೆ. ಆದರೆ ಪೆಟ್ರೋಲ್ ಎಂಜಿನ್ 1997 cc ಇದೆ. ಇದು ಆಟೋಮೆಟಿಕ್​ ಮತ್ತು ಮಾನ್ಯುವಲ್​ ಟ್ರಾನ್ಸ್​ಮಿಷನ್​ನೊಂದಿಗೆ ಲಭ್ಯವಿದೆ. ವೆರಿಯಂಟ್​ ಮತ್ತು ಫ್ಯೂಯಿಲ್​ ಪ್ರಕಾರವನ್ನು ಅವಲಂಬಿಸಿ, ಥಾರ್ ಮೈಲೇಜ್ 15.2 ಕಿಮೀ/ಲೀಟರ್ ಆಗಿದೆ. ಥಾರ್ 4 ಆಸನಗಳು ಮತ್ತು ಉದ್ದ 3985 ಮಿ.ಮೀ., ಅಗಲ 1820 ಎಂ.ಎಂ. ಮತ್ತು ವೀಲ್‌ಬೇಸ್ 2450 ಮಿ.ಮೀ. ಹೊಂದಿದೆ.

ಓದಿ:ದ್ವಿಚಕ್ರ ವಾಹನಗಳ ಮಾರಾಟದಲ್ಲಿ ನಂಬರ್​ ಒನ್​ ಆಗಿ ಮೆರೆಯುತ್ತಿದೆ ಹೀರೋ: ಎನ್‌ಫೀಲ್ಡ್​​ಗೆ ಎಷ್ಟನೇ ಸ್ಥಾನ ಗೊತ್ತಾ?

ABOUT THE AUTHOR

...view details