2024ರ ಟಾಪ್ 10 ಟ್ರೆಂಡಿಂಗ್ ಸಿನಿಮಾಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ 'ಕಲ್ಕಿ 2028 ಎಡಿ' ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಮಹಿಳಾ ಪ್ರಧಾನ ಚಿತ್ರ ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಅವರ ಪ್ರೊಜೆಕ್ಟ್ ಅನ್ನು ಹಿಂದಿಕ್ಕಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಗಮನಾರ್ಹ ವಿಚಾರವೆಂದರೆ, ಕನ್ನಡದ ಅತ್ಯಂತ ಜನಪ್ರಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಸಿನಿಮಾ ಟಾಪ್ 10 ಟ್ರೆಂಡಿಂಗ್ ಫಿಲ್ಮ್ಸ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಸಲಾರ್: ಹೌದು, ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದ ಬಹುನಿರೀಕ್ಷಿತ ಚಿತ್ರ 'ಸಲಾರ್' 2023ರ ಡಿಸೆಂಬರ್ 22ರಂದು ಅದ್ಧೂರಿಯಾಗಿ ತೆರೆಗಪ್ಪಳಿಸಿತ್ತು. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮುಖ್ಯಭೂಮಿಕೆಯ ಈ ಸಿನಿಮಾ ನಿರೀಕ್ಷೆಯಂತೆ ಅಭೂತಪೂರ್ವ ಯಶಸ್ಸು ಕಂಡಿದೆ. ಟಾಪ್ 10 ಟ್ರೆಂಡಿಂಗ್ ಫಿಲ್ಮ್ಸ್ ಪಟ್ಟಿಯಲ್ಲಿ ಈ ಚಿತ್ರ ಒಂಭತ್ತನೇ ಸ್ಥಾನ ಪಡೆದುಕೊಂಡಿದೆ.
ಟಾಪ್ 10 ಟ್ರೆಂಡಿಂಗ್ ಫಿಲ್ಮ್ಸ್:
- ಸ್ತ್ರೀ 2
- ಕಲ್ಕಿ 2898 ಎಡಿ
- 12th ಫೇಲ್
- ಲಾಪತಾ ಲೇಡಿಸ್
- ಹನು-ಮಾನ್
- ಮಹಾರಾಜ
- ಮಂಜುಮ್ಮೆಲ್ ಬಾಯ್ಸ್
- ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್
- ಸಲಾರ್
- ಆವೇಶಮ್.
ಬಾಲಿವುಡ್ನ ಅತ್ಯಂತ ಜನಪ್ರಿಯ ನಟಿ ಶ್ರದ್ಧಾ ಕಪೂರ್ ಹಾಗೂ ಬಹುಬೇಡಿಕೆಯ ನಟ ರಾಜ್‌ಕುಮಾರ್ ರಾವ್ ಅಭಿನಯದ ಸ್ತ್ರೀ 2 ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ. 2018ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ಹಿಟ್ ಸಿನಿಮಾದ ಸೀಕ್ವೆಲ್ 'ಸ್ತ್ರೀ' ಕಲೆಕ್ಷನ್ ವಿಚಾರಲ್ಲಿ 'ನಂಬರ್ 1 ಹಿಂದಿ' ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಜೋರಾಗಿರುವ ಸದ್ಯದ ಪರಿಸ್ಥಿತಿಯಲ್ಲಿ ಹಿಂದಿ ಭಾಷೆಯಲ್ಲಿ ಮೂಡಿಬಂದ ಸ್ತ್ರೀ 2 ದೇಶೀಯ ಮಾರುಕಟ್ಟೆಯಲ್ಲೇ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ಸ್ಟಾಗ್ರಾಮ್ನಲ್ಲಿ ಅತೀ ಹೆಚ್ಚು ಫಾಲೋವರ್‌ಗಳನ್ನು ಸಂಪಾದಿಸಿರುವ ಕೆಲವೇ ಜನರ ಪಟ್ಟಿಯಲ್ಲಿ ಶ್ರದ್ಧಾ ಕಪೂರ್ ಸ್ಥಾನ ಗಿಟ್ಟಿಸಿಕೊಂಡಿದ್ದು, ಸದ್ಯ ಟಾಪ್ 10 ಟ್ರೆಂಡಿಂಗ್ ಫಿಲ್ಮ್ಸ್ ಪಟ್ಟಿಯಲ್ಲಿ ಸ್ತ್ರೀ 2 ಮೊದಲ ಸ್ಥಾನದಲ್ಲಿರೋದು ಅವರ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಭಾರತೀಯ ಚಿತ್ರರಂಗದ ಹಿರಿಯ ಹೆಸರಾಂತ ತಾರೆ ಅಮಿತಾಭ್ ಬಚ್ಚನ್, ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಮತ್ತು ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ 2898 ಎಡಿ ಚಿತ್ರ ಜಾಗತಿಕ ಸರಿಸುಮಾರು 1,300 ಕೋಟಿ ರೂಪಾಯಿಗೂ ಅಧಿಕ ಗಳಿಸಿದೆ. ಜೂನ್ 27ರಂದು ಚಿತ್ರಮಂದಿರ ಪ್ರವೇಶಿಸಿದ ಈ ಸಿನಿಮಾ ಹಲವು ಹೊಸ ಸಿನಿಮಾಗಳ ಮಧ್ಯೆಯೂ ಉತ್ತಮ ಪ್ರದರ್ಶನ ಕಂಡಿದೆ. ಈ ಚಿತ್ರ ಟಾಪ್ 10 ಟ್ರೆಂಡಿಂಗ್ ಫಿಲ್ಮ್ಸ್‌ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದು, ಪ್ರಭಾಸ್ ಅವರ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಪ್ರಭಾಸ್ ಅವರದ್ದೇ ಆದ ಸಲಾರ್ ಈ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನದಲ್ಲಿದೆ.
ಇದನ್ನೂ ಓದಿ: 'ACE' ಚಿತ್ರದಲ್ಲಿ ವಿಜಯ್ ಸೇತುಪತಿಗೆ ಜೋಡಿಯಾದ ರುಕ್ಮಿಣಿ ವಸಂತ್: 'ರುಕ್ಕು'ವಾದ್ರು ಪ್ರಿಯಾ- ಗ್ಲಿಂಪ್ಸ್ ರಿಲೀಸ್
ವಿಕ್ರಾಂತ್ ಮಾಸ್ಸೆ ಮುಖ್ಯಭೂಮಿಕೆಯ '12th ಫೇಲ್' ಎಂಬ ಹಿಂದಿ ಸಿನಿಮಾ ತೆರೆಕಂಡ ಕೆಲ ದಿನಗಳ ನಂತರ ಭರ್ಜರಿ ಸದ್ದು ಮಾಡಿತು. ವಿಧು ವಿನೋದ್ ಚೋಪ್ರಾ ನಿರ್ದೇಶನದ ಸಿನಿಮಾಗೆ ಸಿನಿಪ್ರಿಯರು ಮಾತ್ರವಲ್ಲದೇ ಚಿತ್ರರಂಗದ ಗಣ್ಯರು ಸಹ ಭಾರಿ ಮೆಚ್ಚುಗೆ ಸೂಚಿಸಿದ್ದರು. ಈ ಸಿನಿಮಾವೀಗ ಟಾಪ್ 10 ಟ್ರೆಂಡಿಂಗ್ ಫಿಲ್ಮ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಕೈ ಕೈ ಮಿಲಾಯಿಸಿದ ಸ್ಪರ್ಧಿಗಳು: ತನ್ನ___ಕ್ಕೆ ತಾನೇ ಸವಾಲೆಸೆದುಕೊಂಡ ರಜತ್!
ವಿಶ್ವ ಪ್ರತಿಷ್ಠಿತ ಆಸ್ಕರ್ 2025 ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ 'ಲಾಪತಾ ಲೇಡೀಸ್' ಸಿನಿಮಾ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಿರಣ್ ರಾವ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರ ಈಗಾಗಲೇ ಭಾರೀ ಮೆಚ್ಚುಗೆ ಸ್ವೀಕರಿಸಿದೆ.
ಉಳಿದಂತೆ, ತೇಜ ಸಜ್ಜಾ ಅವರ ಹನುಮಾನ್ ಐದನೇ ಸ್ಥಾನದಲ್ಲಿ, ಮಹಾರಾಜ ಆರನೇ ಸ್ಥಾನದಲ್ಲಿ, ಮಂಜುಮ್ಮೆಲ್ ಬಾಯ್ಸ್ ಏಳನೇ ಸ್ಥಾನದಲ್ಲಿ, ದಳಪತಿ ವಿಜಯ್ ಅವರ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಎಂಟನೇ ಸ್ಥಾನದಲ್ಲಿ, ಆವೇಶಮ್ ಹತ್ತನೇ ಸ್ಥಾನದಲ್ಲಿದೆ.